Widgets Magazine

ಗುಜರಾತ್ ಕಾಂಗ್ರೆಸ್ ವೆಬ್ ಸೈಟ್ ಹ್ಯಾಕ್; ಹಾರ್ದಿಕ್ ಪಟೇಲ್ ಹಳೆಯ ಸೆಕ್ಸ್ ಫೋಟೊ ಅಪ್ ಲೋಡ್ ಮಾಡಿದ ಕಿಡಿಗೇಡಿಗಳು

ಗುಜರಾತ್| pavithra| Last Modified ಶನಿವಾರ, 16 ಮಾರ್ಚ್ 2019 (09:32 IST)
ಗುಜರಾತ್ : ಅಪರಿಚಿತರು ಗುಜರಾತ್ ಕಾಂಗ್ರೆಸ್ ವೆಬ್ ಸೈಟ್ ಹ್ಯಾಕ್ ಮಾಡಿದ್ದು, ಅದರಲ್ಲಿ ಹಾರ್ದಿಕ್ ಪಟೇಲ್ ಹಳೆಯ ಸೆಕ್ಸ್ ವಿಡಿಯೋದಲ್ಲಿದ್ದ ಫೋಟೋವನ್ನು ಅಪ್ ಲೋಡ್ ಮಾಡಲಾಗಿದೆ.


ಗುಜರಾತ್ ಚುನಾವಣೆ ಸಂದರ್ಭದಲ್ಲಿ ಸೆಕ್ಸ್ ಸಿಡಿಯೊಂದು ಬಿರುಗಾಳಿ ಎಬ್ಬಿಸಿತ್ತು. ಈ ಸಿಡಿಯಲ್ಲಿ ಪಟೇಲ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಮಹಿಳೆಯೊಂದಿಗೆ ಬೆಡ್‍ರೂಮಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲೇ ಹಳೆಯ ಸೆಕ್ಸ್ ವಿಡಿಯೋದಲ್ಲಿದ್ದ ಫೋಟೋ ಕೆಳಗಡೆ ವೆಲ್ ಕಮ್ ಅವರ್ ನ್ಯೂ ಲೀಡರ್ ಎಂದು ಬರೆದು ಕಾಂಗ್ರೆಸ್ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.


ಹಾರ್ದಿಕ್ ಪಟೇಲ್ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲೇ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಪಕ್ಷಕ್ಕೆ ಹಾರ್ದಿಕ್ ಪಟೇಲ್ ಬಂದಿರುವುದಕ್ಕೆ ಅಸಮಾಧಾನಗೊಂಡಂತಹವರು ಇದನ್ನು ಮಾಡಿರುವ ಸಾಧ್ಯತೆ ಇದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಗುಜರಾತ್ ಕಾಂಗ್ರೆಸ್ ವಕ್ತಾರ ಮನಿಷ್ ದೊಶಿ ತಿಳಿಸಿದ್ದಾರೆ. ಹಾಗೇ ವೆಬ್ ಸೈಟ್ ದುರ್ಬಳಕೆ ಆಗಿರುವುದು ಕಂಡುಬಂದ ನಂತರ ಮಾಹಿತಿ ತಂತ್ರಜ್ಞಾನ ಅಧಿಕಾರಿಗಳು ಕೂಡಲೇ ಆ ವೆಬ್ ಸೈಟ್ ನ್ನು ಸ್ಥಗಿತಗೊಳಿಸಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :