ರಾಜ್ಯಸಭೆ ಚುನಾವಣೆ: ಗುಜರಾತ್‌ನಲ್ಲಿ ಮತದಾನ ಅಂತ್ಯ

ಗಾಂಧಿನಗರ, ಮಂಗಳವಾರ, 8 ಆಗಸ್ಟ್ 2017 (14:47 IST)

ಗುಜರಾತ್‌ನಲ್ಲಿ ಮೂರು ಸ್ಥಾನಗಳಿಗೆ ನಡೆಯುತ್ತಿರುವ ರಾಜ್ಯಸಭೆ ಚುನಾವಣೆಯ ಮತದಾನ ಅಂತ್ಯವಾಗಿದೆ.
 
ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯೆ ಭಾರಿ ಹಣಾಹಣಿ ಏರ್ಪಟ್ಟಿದ್ದು, ಸಂಜೆ 5 ಗಂಟೆಗೆ ಮತ ಎಣಿಕೆಯ ನಂತರ ಫಲಿತಾಂಶ ಹೊರ ಬೀಳಲಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಗೆಲುವು ಬಹತೇಕ ನಿಷ್ಚಿತ ಎನ್ನಲಾಗುತ್ತಿದೆ.
 
ಮೂರನೇ ಸ್ಥಾನಕ್ಕೆ ಬಿಜೆಪಿಯ ಬಲವಂತಸಿಂಗ್ ರಾಜಪೂತ್ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಮಧ್ಯೆ ಬಿಗ್ ಫೈಟ್ ಏರ್ಪಟ್ಟಿದೆ.
 
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅಹ್ಮದ್ ಪಟೇಲ್‌ರನ್ನು ಸೋಲಿಸುವುದಾಗಿಯೇ ಪಣ ತೊಟ್ಟಿದ್ದು, ಚುನಾವಣೆಯಲ್ಲಿ ಭಾರಿ ರಣತಂತ್ರ ಹೆಣೆದಿದ್ದರು. ಅಹ್ಮದ್ ಪಟೇಲ್‌ ಗೆಲುವಿಗಾಗಿ 45 ಮತಗಳು ಬೇಕಾಗಿದ್ದು, 44 ಕಾಂಗ್ರೆಸ್ ಶಾಸಕರು, 2 ಎನ್‌ಸಿಪಿ ಪಕ್ಷದ ಶಾಸಕರು ಪಟೇಲ್ ಬೆಂಬಲಿಸಿದ್ದಾರೆ ಎನ್ನಲಾಗುತ್ತಿದೆ.
 
ಚುನಾವಣೆ ಫಲಿತಾಂಶ ಬಂದ ನಂತರವಷ್ಟೆ ಶಾಸಕರು ಅಡ್ಡಮತದಾನ ಮಾಡಿದ್ದಾರೆಯೇ ಎನ್ನುವುದು ಬಹಿರಂಗವಾಗಲಿದೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕನ್ನಡ ಕಲಿಯದಿದ್ರೆ ವಜಾ: ಬ್ಯಾಂಕ್‌ ಸಿಬ್ಬಂದಿಗೆ ಕರ್ನಾಟಕ ಅಭಿವೃದ್ಧಿ ಪ್ರಾಧೀಕಾರ ಎಚ್ಚರಿಕೆ

ಬೆಂಗಳೂರು: ರಾಷ್ಟ್ರೀಕೃತ, ಖಾಸಗಿ ಮತ್ತು ಗ್ರಾಮೀಣ ಬ್ಯಾಂಕ್‌ಗಳ ಅನ್ಯಭಾಷಿಕರಿಗೆ ಎಚ್ಚರಿಕೆ ನೀಡಲು ಕನ್ನಡ ...

news

ಗಣಿತ ವಿಷಯಕ್ಕೆ ಆದ್ಯತೆ ಕೊಡು ಎಂದ ತಂದೆಯನ್ನೇ ಹತ್ಯೆಗೈದ 16ರ ವಿದ್ಯಾರ್ಥಿ

ಲಕ್ನೋ: ಪುತ್ರ ಇಂಜಿನಿಯರ್ ಆಗಬೇಕೆಂದು ಬಯಸಿ ಗಣಿತ ವಿಷಯಕ್ಕೆ ಹೆಚ್ಚು ಒತ್ತು ಕೊಡು ಎಂದು ಪುತ್ರನ ಮೇಲೆ ...

news

ವಿಜಯಪುರ ಕೋರ್ಟ್ ಆವರಣದಲ್ಲೇ ಬಾಗಪ್ಪ ಹರಿಜನ್ ಮೇಲೆ ಗುಂಡಿನ ದಾಳಿ

ಭೀಮಾ ತೀರದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ. 2013ರ ಕೊಲೆ ಪ್ರಕರಣವೊಂದರ ಆರೋಪಿ ಬಾಗಪ್ಪ ಹರಿಜನ ...

ವಿಜಯಪುರ ಕೋರ್ಟ್ ಆವರಣದಲ್ಲೇ ಬಾಗಪ್ಪ ಹರಿಜನ್ ಮೇಲೆ ಗುಂಡಿನ ದಾಳಿ

ಭೀಮಾ ತೀರದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ. 2013ರ ಕೊಲೆ ಪ್ರಕರಣವೊಂದರ ಆರೋಪಿ ಬಾಗಪ್ಪ ಹರಿಜನ ...

Widgets Magazine