ಮತದಾನದವರೆಗೂ ಗುಜರಾತ್ ಶಾಸಕರು ಕರ್ನಾಟಕದಲ್ಲೇ?

ಬೆಂಗಳೂರು, ಸೋಮವಾರ, 31 ಜುಲೈ 2017 (09:12 IST)

ಬೆಂಗಳೂರು: ಗುಜರಾತ್ ನಲ್ಲಿ ರಾಜ್ಯ ಸಭೆ ಚುನಾವಣೆ ನಡೆಯುವವರೆಗೂ ಅಲ್ಲಿನ ಶಾಸಕರಿಗೆ ಬೆಂಗಳೂರೇ ನೆಲೆಯಾಗಲಿದೆಯಂತೆ. ಗುಜರಾತ್ ನಲ್ಲಿ ಬಿಜೆಪಿ ಕಾಂಗ್ರೆಸ್ ಶಾಸಕರಿಗೆ 15 ಕೋಟಿ ರೂ. ಮತ್ತು ಕುಟುಂಬದವರಿಗೆ ಜೀವ ಬೆದರಿಕೆ ಹಾಕಿ ಕೈ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.


 
ನಗರದ ಹೊರವಲಯಲ್ಲಿರುವ ಈಗಲ್ ಟನ್ ರೆಸಾರ್ಟ್ ನಲ್ಲಿ ಬೀಡುಬಿಟ್ಟಿರುವ ಶಾಸಕರು ಫೋನ್ ಸಂಪರ್ಕಗಳನ್ನು ಕಡಿತಗೊಳಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ನ ಎಲ್ಲಾ 53 ಅಭ್ಯರ್ಥಿಗಳಿಗೆ ಪಕ್ಷದ ಪರ ಮತದಾನ ಮಾಡುವಂತೆ ವಿಪ್ ಜಾರಿ ಮಾಡಲಾಗಿದೆಯಂತೆ.  ಅಲ್ಲಿ ಚುನಾವಣೆ ಮುಗಿಯುವವರೆಗೂ ಶಾಸಕರು ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
 
ಈ ನಡುವೆ ಗುಜರಾತ್ ನಲ್ಲಿ ಪ್ರವಾಹ ಪರಿಸ್ಥಿತಿಯಿರುವಾಗ ಶಾಸಕರು ಬೆಂಗಳೂರಿನಲ್ಲಿ ಮೋಜು ಮಸ್ತಿ ಮಾಡುತ್ತಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.  ಕಾಂಗ್ರೆಸ್ ನ ಶಾಸಕರು ಯಾರೂ ಪ್ರವಾಸ ಪೀಡಿತ ಸ್ಥಳಕ್ಕೆ ಭೇಟಿ ನೀಡುವುದಾಗಲಿ, ಜನರಿಗೆ ಸಾಂತ್ವನ ಹೇಳುವುದಾಗಲೀ ಮಾಡದೇ ಇರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
 
ಇದನ್ನೂ ಓದಿ..  ಕೊಹ್ಲಿಗೊಂದು ಎಚ್ಚರಿಕೆ ಸಂದೇಶ ರವಾನಿಸಿದ ಸೌರವ್ ಗಂಗೂಲಿ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಗುಜರಾತ್ ಶಾಸಕರು ರೆಸಾರ್ಟ್ ರಾಜಕಾರಣ ಕಾಂಗ್ರೆಸ್ ರಾಷ್ಟ್ರೀಯ ಸುದ್ದಿಗಳು S Congress Resort Politics Gujrath Mla National News

ಸುದ್ದಿಗಳು

news

ಐಟಿ ರಿಟರ್ನ್ಸ್ ಗೆ ಇಂದೇ ಕಡೇ ದಿನ: ಗಡುವು ವಿಸ್ತರಣೆ ಇಲ್ಲ

2016-17ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌(ಐಟಿಆರ್‌) ಸಲ್ಲಿಸಲು ಇಂದೇ ಕಡೆಯ ದಿನವಾಗಿದ್ದು, ಈ ...

news

ಶತೃಗಳನ್ನು ಮಣಿಸುವ ಸಾಮರ್ಥ್ಯ ನಮ್ಮ ಸೇನೆಗಿದೆ: ಕ್ಸಿ ಜಿನ್ ಪಿಂಗ್

ಶತೃ ರಾಷ್ಟ್ರಗಳ ಎದುರು ಬಲಿಷ್ಠ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಿ ಹೊಸ ಅಧ್ಯಾಯ ಸೃಷ್ಟಿಸುವ ಸಾಮರ್ಥ್ಯ ...

news

ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಬೇಕು: ಕವಿ ಸಿದ್ದಲಿಂಗಯ್ಯ

ಬೆಂಗಳೂರು: ರಾಜ್ಯದಲ್ಲಿ ನಾಡಗೀತೆಯಿರುವಾಗ ನಾಡಧ್ವಜ ಯಾಕಿರಬಾರದು ಎಂದು ಕವಿ ಸಿದ್ದಲಿಂಗಯ್ಯ ...

news

ಸಿಎಂ ಸಿದ್ದರಾಮಯ್ಯ ಬ್ರಿಟೀಷರಿಗಿಂತ ಕಡಿಮೆಯಿಲ್ಲ: ಸದಾನಂದಗೌಡ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಧರ್ಮವನ್ನು ಒಡೆದು ಆಳುತ್ತಿದ್ದು ಅವರು ಬ್ರಿಟೀಷರಿಗಿಂತ ಕಡಿಮೆಯಿಲ್ಲ ಎಂದು ...

Widgets Magazine