ಗಲಭೆ ಎಬ್ಬಿಸುವುದಕ್ಕೆಂದೇ 1.25 ಕೋಟಿ ರೂ. ಖರ್ಚು ಮಾಡಿದ್ದಳಂತೆ ಈಕೆ!

ನವದೆಹಲಿ, ಶನಿವಾರ, 7 ಅಕ್ಟೋಬರ್ 2017 (10:04 IST)

ನವದೆಹಲಿ: ಅತ್ಯಾಚಾರ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಮುಖ್ಯಸ್ಥ ಬಾಬಾ ರಾಮ್ ರಹೀಂ ಸಿಂಗ್ ಶಿಕ್ಷೆ ವಿರೋಧಿಸಿ ಗಲಭೆ ಎಬ್ಬಿಸಲು ಆತನ ಪುತ್ರಿ ಹನಿಪ್ರೀತ್ 1.25 ಕೋಟಿ ರೂ. ಖರ್ಚು ಮಾಡಿದ್ದಳಂತೆ!


 
ಸದ್ಯಕ್ಕೆ ಡೇರಾ ಬಾಬಾ ತಪ್ಪಿಸಿಕೊಳ್ಳಲು ಸಹಾಯ ಮಾಡಲೆತ್ನಿಸಿದ ಆರೋಪದಲ್ಲಿ ಬಂಧಿತಳಾಗಿರುವ ಹನಿಪ್ರೀತ್ ಡೇರಾ ಬೆಂಬಲಿಗರಿಂದ ದಾಂಧಲೆ ಏರ್ಪಡಿಸಲು ಕೋಟಿ ರೂ. ಚೆಕ್ ನೀಡಿದ್ದಳಂತೆ. ಆಗಸ್ಟ್ 25 ರಂದು ಬಾಬಾಗೆ ಶಿಕ್ಷೆ ಘೋಷಣೆಯಾದ ಬಳಿಕ ಹರಿಯಾಣ ಮತ್ತು ಪಂಜಾಬ್ ನಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು.
 
ಇದರ ಮಾಸ್ಟರ್ ಮೈಂಡ್ ಈಕೆಯೇ ಎಂಬುದು ಇದೀಗ ಸಾಬೀತಾಗಿದೆ. ಡೇರಾ ಪಂಚಕುಲಾದ ಮುಖ್ಯಸ್ಥ  ಚಮಕುರ್ ಸಿಂಗ್ ಗೆ ಈಕೆ ಭಾರೀ ಮೊತ್ತದ ಹಣ ನೀಡಿದ್ದಳಂತೆ. ಪೊಲೀಸ್ ವಶದಲ್ಲಿರುವ ರಾಕೇಶ್ ಕುಮಾರ್ ಎಂಬ ಹನಿಪ್ರೀತ್ ಸಹಾಯಕ  ಈ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ಮುಂದಿನ ಲೋಕಸಭೆ ಚುನಾವಣೆ ಮೋದಿ v/s ಶ್ರೀ ಸಾಮಾನ್ಯ’

ನವದೆಹಲಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಪಕ್ಷಗಳ ನಡುವೆ ಅಲ್ಲ. ಮೋದಿ ಮತ್ತು ಜನ ಸಾಮಾನ್ಯರ ...

news

‘ಮೋದಿ ಜೀ..ಎದೆ ತಟ್ಟಿದ್ದು ಮುಗಿಯಿತೇ?’

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಪ್ರಧಾನಿ ಮೋದಿ ಮೇಲೆ ಟೀಕಾಸ್ತ್ರ ಹರಿಸಿದ್ದಾರೆ. ...

news

ಸರ್ಜಿಕಲ್ ಸ್ಟ್ರೈಕ್ ಮಾಡಿದ್ರೆ ತಕ್ಕ ಶಾಸ್ತಿ: ಭಾರತಕ್ಕೆ ಪಾಕ್ ಎಚ್ಚರಿಕೆ

ವಾಷಿಂಗ್ಟನ್ : ಪಾಕಿಸ್ತಾನದೊಳಗೆ ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸುವುದಾಗಲಿ ಅಥವಾ ಪರಮಾಣು ...

news

ಸಚಿವ ಯು.ಟಿ.ಖಾದರ್ ಕಾರಿನ ಮೇಲೆ ಕಲ್ಲು ತೂರಾಟಕ್ಕೆ ಯತ್ನ

ಮಂಗಳೂರು: ಕಳೆದ ಮಂಗಳವಾರದಂದು ಹತ್ಯೆಯಾಗಿದ್ದ ಬಿಜೆಪಿ ಕಾರ್ಯಕರ್ತ ಜುಬೈರ್ ನಿವಾಸಕ್ಕೆ ಭೇಟಿ ನೀಡಲು ...

Widgets Magazine
Widgets Magazine