ವಿದ್ಯಾರ್ಥಿನಿಯೊಂದಿಗಿನ ಅಶ್ಲೀಲ ಫೋಟೋಗಳನ್ನು ಇಂಟರ್‌ನೆಟ್‌ನಲ್ಲಿ ಪೋಸ್ಟ್ ಮಾಡಿದ ಶಿಕ್ಷಕ

ಕಾಟ್ಟಿಚೆರ್ರಾ(ಆಸ್ಸಾಂ), ಶನಿವಾರ, 5 ಆಗಸ್ಟ್ 2017 (15:33 IST)

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುವ ಇತಿಹಾಸ ಹೊಂದಿರುವ ಶಿಕ್ಷಕನೊಬ್ಬ, ವಿದ್ಯಾರ್ಥಿನಿಯೊಂದಿಗಿನ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದರೂ ಪೊಲೀಸರು ಆರೋಪಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಅಸ್ಸಾಂನ ಹೈಲಕಾಂಡಿ ಜಿಲ್ಲೆಯಲ್ಲಿರುವ ಕಾಟ್ಟಿಚೇರ್ರಾ ಪಟ್ಟಣದಲ್ಲಿ ಶಿಕ್ಷಕ ಫೈಜುದ್ದೀನ್ ಲಸ್ಕರ್, ವಿದ್ಯಾರ್ಥಿನಿಯರೊಂದಿಗೆ ಅಶ್ಲೀಲ ಚಿತ್ರಗಳನ್ನು ತೆಗೆದು ಅಂತರ್ಜಾಲದಲ್ಲಿ ಪೋಸ್ಟ್ ಮಾಡಿದ್ದನು.
 
ಕಾಟ್ಟಿಚೆರ್ರಾ ಜಿಲ್ಲೆಯ ಮಾಡೆಲ್ ಹೈಸ್ಕೂಲ್‌‌ನಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಫೈಜುದ್ದಿನ್, ಹಲವಾರು ಬಾರಿ ಇಂತಹ ಕೃತ್ಯಗಳನ್ನು ಎಸಗಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
 
ಆರೋಪಿ ಶಿಕ್ಷಕ ಫೈಜುದ್ದೀನ್ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಪೋಸ್ಟ್ ಮಾಡಿದ ನಂಚರ ಉದೀಗ ವೈರಲ್ ಆಗಿದೆ.  
 
ಈ ಘಟನೆಯು ಬಾಲಿವುಡ್ ಚಿತ್ರ  ಹರಾಮ್‌ಖೋರ್‌ನಿಂದ ಪ್ರೇರಣೆ ಪಡೆದಿರಬಹುದು ಎನ್ನಲಾಗಿದೆ. ಈ ಚಲನಚಿತ್ರದಲ್ಲಿ ಶಿಕ್ಷಕರಾಗಿದ್ದ ನವಾಝುದ್ದೀನ್ ಸಿದ್ದಿಕಿ ತಮ್ಮ ವಿದ್ಯಾರ್ಥಿನಿಯರೊಂದಿಗಿನ ಯಾವ ರೀತಿ ವರ್ತಿಸುತ್ತಾರೆ ಎನ್ನುವ ಬಗೆಗಿನದಾಗಿದೆ. ಚಿತ್ರದಲ್ಲಿ ಸಿದ್ದಿಕಿಗೆ ಶಿಕ್ಷೆಯಾಗುತ್ತದೆ. ಆದರೆ, ಮಾನ ಮರ್ಯಾದೆ ಬಿಟ್ಟಂತಾಗಿದೆ ಎಂದು ಮೂಲಗಳು ತಿಳಿಸಿವೆ. 
 
ಈ ಹಿಂದೆ ಸುದ್ದಿಗಾರರ ಮುರಿದುಹೋದ ಸ್ಥಳೀಯ ಚಾನಲ್, ಹಿಂದೆ ಮಹಿಳೆಯನ್ನು ಕಿರುಕುಳಕ್ಕೊಳಗಾದ ಬಳಿಕ ಫೈಝುದ್ದೀನ್ ಜನಸಮೂಹದಿಂದ ಹೊರಗುಳಿದರು.
 
ಕೆಲ ದಿನಗಳ ಹಿಂದೆ ಶಿಕ್ಷಕ ಫೈಜುದ್ದೀನ್, ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದಾಗ ಸ್ಥಳೀಯ ಮಾಧ್ಯಮಗಳು ಆತನ ಕುಕೃತ್ಯವನ್ನು ವರದಿ ಮಾಡಿದ್ದವು.
 
ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಶಿಕ್ಷಕ ತಮ್ಮ ಪುತ್ರಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಿಂದ ಆಕ್ರೋಶಗೊಂಡ ಆಕೆಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಭಾರತೀಯರು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು: ಬಾಬಾ ರಾಮದೇವ್

ಹೌರಾ: ಸಿಕ್ಕಿಂನ ಡೊಕ್ಲಾಮ್ ಪ್ರದೇಶದಲ್ಲಿ ಭಾರತ ಮತ್ತು ಚೀನಾ ನಡುವಿನ ಉದ್ರಿಕ್ತ ನಿಲುವಿನ ...

news

ಡಿ.ಕೆ. ಶಿವಕುಮಾರ್ ಜೊತೆ ಒಗ್ಗಟ್ಟಿನ ಪ್ರದರ್ಶನ ಮಾಡಿದ ಗುಜರಾತ್ ಶಾಸಕರು

ರಾಜ್ಯಪಾಲರ ಭೇಟಿ ಬಳಿಕ ಗುಜರಾತ್`ನ 40 ಶಾಸಕರು ವಿಧಾನಸೌಧಕ್ಕೆ ತೆರಳಿದ್ದಾರೆ. ವಿಧಾನಸೌಧದ ಬಳಿ ಇರುವ ...

news

ರಾಜ್ಯಸಭೆ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಜಯ ಖಚಿತ: ಡಿ.ಕೆ.ಶಿವಕುಮಾರ್

ಬೆಂಗಳೂರು: ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ರಾಜ್ಯಸಭೆ ಅಭ್ಯರ್ಥಿ ಅಹ್ಮದ್ ಪಟೇಲ್ ಜಯ ಖಚಿತ ಎಂದು ಇಂಧನ ...

news

ಬಿಜೆಪಿಯ ಲಂಚದ ಆಮಿಷ ಶೀಘ್ರ ಬಹಿರಂಗ: ಗುಜರಾತ್ ಶಾಸಕರ ಹೇಳಿಕೆ

ನಮ್ಮನ್ನ ಯಾರೂ ರೆಸಾರ್ಟ್`ನಲ್ಲಿ ಕೂಡಿ ಹಾಕಿಲ್ಲ,ಸ್ವ ಇಚ್ಛೆಯಿಂದಲೆ ಇಲ್ಲಿಗೆ ಬಂದಿದ್ದೇವೆ ಎಂದು ರಾಜ್ಯಪಾಲ ...

Widgets Magazine