ಹಾರ್ದಿಕ್ ಪಟೇಲ್ ಯಾವ ತಪ್ಪು ಮಾಡಿಲ್ಲ, ಸೆಕ್ಸ್ ಮೂಲಭೂತ ಹಕ್ಕು: ಜಿಗ್ನೇಶ್ ಮೇವಾನಿ

ಗುಜರಾತ್, ಮಂಗಳವಾರ, 14 ನವೆಂಬರ್ 2017 (17:33 IST)

ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಸೆಕ್ಸ್ ಸಿಟಿ ಬಿಡುಗಡೆಯಾದ ನಂತರ ಅವರ ನೆರವಿಗೆ ಧಾವಿಸಿದ ದಲಿತ ನಾಯಕ ಜಿಗ್ನೇಶ್ ಮೇವಾನಿ ಹಾರ್ದಿಕ್ ಯಾವುದೇ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ತನ್ನ ಗೆಳೆಯನಿಗೆ ಪೂರ್ಣ ಬೆಂಬಲವನ್ನು ವಿಸ್ತರಿಸುತ್ತಾ, ಮೇವಾನಿ ಟ್ವೀಟ್ ಮಾಡಿ, "ಡಿಯರ್ ಹಾರ್ದಿಕ್ ಪಟೇಲ್, ಚಿಂತಿಸಬೇಡಿ. ನಾನು ನಿಮ್ಮ ಜೊತೆಗೆ ಇದ್ದೇನೆ. ಮತ್ತು ಲೈಂಗಿಕತೆಯ ಹಕ್ಕು ಮೂಲಭೂತ ಹಕ್ಕು ಆಗಿದೆ. ನಿಮ್ಮ ಗೌಪ್ಯತೆಯನ್ನು ಉಲ್ಲಂಘಿಸಲು ಯಾರಿಗೂ ಹಕ್ಕು ಇಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ.
 
ಕೆಲವು ಸ್ಥಳೀಯ ಗುಜರಾತ್ ಚಾನಲ್‌ಗಳು ಹಾರ್ದಿಕ್ ಪಟೇಲ್ "ಸೆಕ್ಸ್ ಸಿಡಿ" ನಿಜವಾದ ಸಿಡಿ ಎಂದು ಪ್ರಕಟಿಸಿದ ಕೆಲ ಗಂಟೆಗಳ ನಂತರ ಮೇವಾನಿಯ ಪ್ರತಿಕ್ರಿಯೆ ಬಂದಿವೆ.
 
ಹಾರ್ಡಿಕ್ ಪಟೇಲ್‌ಗೆ ಹೋಲುತ್ತಿರುವ ವ್ಯಕ್ತಿಯೊಂದಿಗೆ ಅಜ್ಞಾತ ಮಹಿಳೆ ಲವ್ವಿಡವ್ವಿಯಲ್ಲಿ ತೊಡಗಿರುವುದು ನೋಡಬಹುದಾಗಿದೆ, ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ, ಹಾರ್ದಿಕ್ ಮದ್ಯ ಸೇವಿಸುತ್ತಿರುವುದು ವಿಡಿಯೋದಲ್ಲಿ ಬಹಿರಂಗವಾಗಿದೆ. 
 
ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಗೃಹ ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿಯನ್ನು ಸೋಲಿಸಲು 24 ವರ್ಷ ವಯಸ್ಸಿನ ಪಟೇಲ್ ಸಮುದಾಯದ ನಾಯಕರು ಪ್ರತಿಜ್ಞೆ ಮಾಡಿದ್ದಾರೆ.
 
ಒಂದು ವಾರದ ಹಿಂದೆ ಹಾರ್ದಿಕ್ ಪಟೇಲ್, ಗುಜರಾತ್‌ನಲ್ಲಿ ಡಿಸೆಂಬರ್ 9 ಮತ್ತು 14 ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ತಮ್ಮ ಖ್ಯಾತಿಗೆ ಕಳಂಕ ತರಲು ಬಿಜೆಪಿ ಲೈಂಗಿಕತೆಯ ಸಿಡಿ ಬಿಡುಗಡೆ ಮಾಡಬಹುದು ಎಂದು ಹಾರ್ದಿಕ್ ಪಟೇಲ್ ಭವಿಷ್ಯ ನುಡಿದಿದ್ದರು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆರ್ಥಿಕತೆ ಕುಸಿತ: ಪ್ರಧಾನಿ ಮೋದಿ, ಜೇಟ್ಲಿ ವಿರುದ್ಧ ಯಶ್ವಂತ್ ಸಿನ್ಹಾ ವಾಗ್ದಾಳಿ

ನವದೆಹಲಿ: ಕೇಂದ್ರ ಸರಕಾರದ ನೋಟು ನಿಷೇಧ ಮತ್ತು ಜಿಎಸ್‌ಟಿ ದೇಶದ ಆರ್ಥಿಕತೆಗೆ ಮಾರಕವಾಗಿ ಪರಿಣಮಿಸಿವೆ ಎಂದು ...

news

ಪಾಕಿಸ್ತಾನ: ಕೋಳಿಯ ಮೇಲೆ ಅತ್ಯಾಚಾರವೆಸಗಿದ ಬಾಲಕನ ಬಂಧನ

ಲಾಹೋರ್: ಆಘಾತಕಾರಿ ಘಟನೆಯೊಂದರಲ್ಲಿ ಕೋಳಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ 14 ವರ್ಷದ ಬಾಲಕನನ್ನು ...

news

ಪೂಜೆ ಮಾಡೋಣ ಬಾ ಎಂದು ಬಾಲಕಿಯನ್ನು ಕರೆದು ಹಾಸಿಗೆಗೆಳೆಯುತ್ತಿದ್ದ ಮಾಂತ್ರಿಕ ಅರೆಸ್ಟ್

ಮುಂಬೈ: ನೆರೆಮನೆಯಲ್ಲಿ ವಾಸವಾಗಿದ್ದ ಮಾಂತ್ರಿಕನೊಬ್ಬ ತಮ್ಮ ಪುತ್ರಿಯ ಮೇಲೆ ಐದು ವರ್ಷಗಳಿಂದ ...

news

ನಾನು ಸಿಎಂ ಆದ್ರೆ ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮ: ಯಡಿಯೂರಪ್ಪ

ಬೆಂಗಳೂರು: ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಲ್ಲಿ ಅಧಿಕಾರದ ಮದದಿಂದ ಭ್ರಷ್ಟಾಚಾರದಲ್ಲಿ ...

Widgets Magazine
Widgets Magazine