ಪಾಣಿಪತ್ ನಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಗಾಯಕಿ ಬಲಿ

ಹರಿಯಾಣ, ಗುರುವಾರ, 19 ಅಕ್ಟೋಬರ್ 2017 (12:13 IST)

ಹರಿಯಾಣ: ದುಷ್ಕರ್ಮಿಗಳು ಗಾಯಕಿಗೆ ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಪಾಣಿಪತ್‌ ನ ಇಸ್ರಾನಾ ಎಂಬಲ್ಲಿ ನಡೆದಿದೆ.


ಹರ್ಷಿತಾ ದಾಹಿಯಾ(22) ಹತ್ಯೆಯಾದ ಗಾಯಕಿ. ನಿನ್ನೆ ಸಂಜೆ ಕಾರ್ಯಕ್ರಮ ಮುಗಿಸಿ ದೆಹಲಿಯ ನರೇಲಾದ ತಮ್ಮ ನಿವಾಸಕ್ಕೆ ವಾಪಸಾಗುತ್ತಿದ್ದ ವೇಳೆ ಸುಮಾರು 4.15ರಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ಬಂದ ಐವರು ದುಷ್ಕರ್ಮಿಗಳು ಹರ್ಷಿತಾ ಪ್ರಯಾಣಿಸುತ್ತಿದ್ದ ಕಾರನ್ನು ಹಿಂಬಾಲಿಸಿದ್ದಾರೆ. ಚಾಮ್ರಾರಾ ಎಂಬಲ್ಲಿ ಅಡ್ಡಗಟ್ಟಿದ್ದು, ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.

ಭೀಕರ ಗುಂಡಿನ ದಾಳಿಗೆ ಗಾಯಕಿ ಹರ್ಷಿತಾ ಸ್ಥಳದಲ್ಲೇ ಮೃತಪಟ್ಟಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹರ್ಷಿತಾ ಸಹೋದರಿ ಲತಾ, ಘಟನೆಗೆ ನನ್ನ ಪತಿ ದಿನೇಶ್ ಕಾರಣ. ತಾಯಿಯ ಹತ್ಯೆ ಪ್ರಕರಣದಲ್ಲಿ ಹರ್ಷಿತಾ ಮುಖ್ಯ ಸಾಕ್ಷಿಯಾಗಿದ್ದಳು ಎಂದು ಹೇಳಿಕೆ ನೀಡಿದ್ದಾಳೆ. ಈ ಕುರಿತು ಪಾಣಿಪತ್ ಪೊಲೀಸರು ಸಹ ತನಿಖೆ ನಡೆಸುತ್ತಿದ್ದಾರೆ.

2014ರಲ್ಲಿ ಹರ್ಷಿತಾ ದಿನೇಶ್ ವಿರುದ್ಧ ರೇಪ್ ಕೇಸ್ ದಾಖಲಿಸಿದ್ದಳು. ಇದಾದ ಸ್ವಲ್ಪ ದಿನದಲ್ಲಿ ತನ್ನ ತಾಯಿಯನ್ನು ದಿನೇಶ್ ಹತ್ಯೆ ಮಾಡಿರುವುದಾಗಿ ಪ್ರಕರಣ ದಾಖಲಿಸಿದ್ದಳು. ಇಷ್ಟೇ ಅಲ್ಲದೆ ಆತನ ವಿರುದ್ಧ ಸಾಕಷ್ಟು ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಜೈಲು ಶಿಕ್ಷೆ ಕೂಡ ಅನುಭವಿಸಿದ್ದಾನೆ ಎಂದು ಪಾಣಿಪತ್ ಡಿಎಸ್ಪಿ ದೇಶ್ ರಾಜ್ ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆರ್.ಎಲ್.ಜಾಲಪ್ಪ ಮೇಲೆ ಸಿಬಿಐನಿಂದ ಎಫ್ಐಆರ್ ದಾಖಲು

ಬೆಂಗಳೂರು: ರಾಜ್ಯ ಕಾಂಗ್ರೆಸ್ಗೆ ಮತ್ತೊಂದು ಬಿಗ್ ಶಾಕ್ ಸಿಕ್ಕಿದೆ. ಭ್ರಷ್ಟಾಚಾರದ ಆರೋಪದ ಮೇಲೆ ...

news

ಪ್ರಧಾನಿ ಮೋದಿ ತಪ್ಪೊಪ್ಪಿಕೊಂಡರೆ ಅವರಿಗೆ ಸೆಲ್ಯೂಟ್ ಮಾಡ್ತಾರಂತೆ ಕಮಲ್ ಹಾಸನ್

ಚೆನ್ನೈ: ಪ್ರಧಾನಿ ಮೋದಿ ಇದ್ದಕ್ಕಿದ್ದಂತೆ ನೋಟು ನಿಷೇಧ ಮಾಡಿ ಘೋಷಣೆ ಮಾಡಿದಾಗ ಅದನ್ನುಬೆಂಬಲಿಸಿ ಟ್ವೀಟ್ ...

news

ದೀಪಾವಳಿ ನಂತರ ದೆಹಲಿ ಸ್ಥಿತಿ ಗಂಭೀರ

ನವದೆಹಲಿ: ದೀಪಾವಳಿ ಬಂತೆಂದರೆ ದೆಹಲಿ ಜನತೆ ಆತಂಕಪಡುವಂತಾಗಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ...

news

ತಾಜ್ ಮಹಲ್ ಬಗ್ಗೆ ಮತ್ತೊಂದು ವಿವಾದ

ನವದೆಹಲಿ: ತಾಜ್ ಮಹಲ್ ಸುತ್ತ ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆಗಳು ಇನ್ನೂ ಮುಂದುವರಿದಿದೆ. ಇದೀಗ ...

Widgets Magazine