ದಾಖಲೆ ಇದ್ರೆ ಕೋರ್ಟ್ ಗೆ ಹೋಗಿ ಅಕ್ರಮ ಸಾಬೀತು ಪಡಿಸಿ: ಅಮಿತ್ ಷಾ ಸವಾಲು

ನವದೆಹಲಿ, ಶುಕ್ರವಾರ, 13 ಅಕ್ಟೋಬರ್ 2017 (17:17 IST)

ನವದೆಹಲಿ: ಅಕ್ರಮವೆಸಗಿರುವ ಬಗ್ಗೆ ನಿಮ್ಮ ಬಳಿ ದಾಖಲೆಯಿದ್ದರೆ ಕೋರ್ಟ್ ಗೆ ಹೋಗಿ ಆರೋಪ ಸಾಬೀತುಪಡಿಸಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸವಾಲು ಹಾಕಿದ್ದಾರೆ.


ರಾಷ್ಟ್ರೀಯ ವಾಹಿನಿಯೊಂದಕ್ಕೆ ಹೇಳಿಕೆ ನೀಡಿರುವ ಅಮಿತ್ ಷಾ, ತಮ್ಮ ಪುತ್ರ ಜೈ ಷಾ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ನಿಮ್ಮ ಬಳಿ ದಾಖಲೆಯಿದ್ದರೆ ಆರೋಪವನ್ನು ಸಾಬೀತುಪಡಿಸಿ. ನನ್ನ ಮಗನ ಕಂಪನಿ ಮಾತ್ರವಲ್ಲ, ಸರ್ಕಾರ ಅಥವಾ ಬೋಫೋರ್ಸ್ ನಂತಹ ಪ್ರಕರಣದಲ್ಲಿ ಒಂದೇ ಒಂದು ರೂಪಾಯಿ ಕಿಕ್ ಬ್ಯಾಕ್ ಪಡೆದಿದ್ದರೆ ಸಾಬೀತು ಪಡಿಸಿ ಎಂದು ಕಾಂಗ್ರೆಸ್ ಗೆ ಷಾ ಸವಾಲು ಹಾಕಿದ್ದಾರೆ.

ಜೈ ಷಾ ಮಾಲಿಕತ್ವದ ಸಂಸ್ಥೆ ಟೆಂಪಲ್‌ ಎಂಟರ್‌ ಪ್ರೈಸಸ್‌ನ ಆದಾಯ ಒಂದು ವರ್ಷದ ಅವಧಿಯಲ್ಲಿ 50 ಸಾವಿರದಿಂದ 80 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ‘ದಿ ವೈರ್‌’ ಸುದ್ದಿತಾಣ ವರದಿ ಮಾಡಿತ್ತು. ಈ ಸಂಬಂಧ ವೆಬ್ ಸೈಟ್ ವಿರುದ್ಧ ಜೈ ಷಾ ನೂರು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  
ಟೆಂಪಲ್ ಎಂಟರ್ ಪ್ರೈಸಸ್ ಅಮಿತ್ ಷಾ ಜೈ ಷಾ ಕಿಕ್ ಬ್ಯಾಕ್ ಬೋಫೋರ್ಸ್ Court Jay Shah Kick Back Amit Shah

ಸುದ್ದಿಗಳು

news

ರೋಷನ್‌ಬೇಗ್‌ ಬಳಸಿದ್ದ ಕೆಟ್ಟ ಪದಗಳನ್ನೇ ಬಳಸಿದ ಸಿ,ಟಿ.ರವಿ

ಬೆಂಗಳೂರು: ಪ್ರಧಾನಿ ಮೋದಿ ಸೂ...ಮಗ ಎಂದು ಸಚಿವ ರೋಷನ್ ಬೇಗ್ ಟೀಕೆಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ...

news

ವಿದ್ಯಾರ್ಥಿಗಳಿಗೆ ಲವ್ ಗುರು ಆದ ಸಚಿವ ಎಚ್.ಅಂಜನೇಯ

ಧಾರವಾಡ: ಓದಿನ ಕಡೆ ಗಮನಕೊಡಿ ಓದಿದ ನಂತರ ಲವ್ ಮಾಡಿ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಅಂಜನೇಯ ಲವ್ ಪಾಠ ...

news

ಪ್ರಧಾನಿ ವಿರುದ್ಧ ಅಸಭ್ಯ ಟೀಕೆ: ರೋಷನ್‌‌ಬೇಗ್ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ

ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಸಚಿವ ರೋಷನ್ ಬೇಗ್ ಅಸಭ್ಯ ಪದಗಳನ್ನು ಬಳಸಿ ಟೀಕಿಸಿದ್ದರಿಂದ ಕೂಡಲೇ ...

news

ಚಾಕುವಿನಿಂದ ಬೆದರಿಸಿ 20 ವರ್ಷದ ಯುವತಿಯ ಮೇಲೆ ಗ್ಯಾಂಗ್‌ರೇಪ್

ಚೆನ್ನೈ: ಬಾಯ್‌ಫ್ರೆಂಡ್‌ನೊಂದಿಗೆ ನಿರ್ಜನ ಪ್ರದೇಶದಲ್ಲಿರುವಾಗ ನಾಲ್ವರು ಕಾಮುಕರು ಬಾಯ್‌ಫ್ರೆಂಡ್ ಮೇಲೆ ...

Widgets Magazine
Widgets Magazine