ಗೆಳೆಯರನ್ನು ಕರೆಸಿ ಪತ್ನಿಯ ಮೇಲೆ ರೇಪ್ ಮಾಡುವಂತೆ ಒತ್ತಾಯಿಸುತ್ತಿದ್ದ ಪತಿ ಅರೆಸ್ಚ್

ಪಾಟ್ನಾ, ಭಾನುವಾರ, 16 ಜುಲೈ 2017 (15:14 IST)

Widgets Magazine

ಪತಿ ಮತ್ತು ಆತನ ಗೆಳೆಯರು ಹಲವಾರು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗುತ್ತಿರುವುದನ್ನು ಕೊನೆಗೂ ಸಹಿಸದ ಪತ್ನಿ ಪೊಲೀಸರ ಮೊರೆ ಹೋದ ಹೇಯ ಘಟನೆ ವರದಿಯಾಗಿದೆ. 
 
ಹಲವಾರು ವರ್ಷಗಳಿಂದ ತನ್ನ ಗಂಡನ ಕೈಯಲ್ಲಿ ಕಿರುಕುಳ ಅನುಭವಿಸುತ್ತಿರುವ ನೊಂದ ವಿವಾಹಿತ ಮಹಿಳೆಯೊಬ್ಬಳು, ದೂರು ಆಲಿಸದ ಪೊಲೀಸರ ವರ್ತನೆಯಿಂದ ಬೇಸತ್ತು ಕೊನೆಗೂ ಕೋರ್ಟ್ ಮೊರೆ ಹೋಗಿ ಪತಿಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾಳೆ.
 
ವಿವಾಹಿತ ಮಹಿಳೆಯ ದೂರು ಸ್ವೀಕರಿಸಿದ ನ್ಯಾಯಾಲಯ, ಮಹಿಳೆಯ ಮೇಲೆ ಆಕೆಯ ಮನೆಯಲ್ಲಿಯೇ ಗ್ಯಾಂಗ್‌ರೇಪ್ ಎಸಗಿದ ಆರೋಪಿ ಪತಿ ಮತ್ತು ಆತನ ಗೆಳೆಯರ ವಿರುದ್ಧ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಆದೇಶ ನೀಡಿದೆ.
 
ಪೊಲೀಸರು ಪ್ರಮುಖ ಆರೋಪಿ ಪತಿ ಭರತ್ ಸಿಂಗ್‌‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಪರಾರಿಯಾದ ಇತರ ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಬಿಹಾರ್ ರಾಜ್ಯದ ಪಾಟ್ನಾ ನಗರದ ನಿವಾಸಿಯಾಗಿದ್ದ ಭರತ್ ಸಿಂಗ್ ತನ್ನ ಪತ್ನಿಯೊಂದಿಗೆ ವಾಸಿಸುತ್ತಿದ್ದನು. ವಿವಾಹದ ನಂತರ ಆತ ತನ್ನ ಗೆಳೆಯರನ್ನು ರಾತ್ರಿ ಮನೆಗೆ ಕರೆಸಿಕೊಂಡು ಪತ್ನಿಯ ಮೇಲೆ ಅತ್ಯಾಚಾರವೆಸಗುವಂತೆ ಪ್ರೇರೇಪಿಸುತ್ತಿದ್ದನು. ನಂತರ ಎಲ್ಲರು ಸೇರಿ ಗ್ಯಾಂಗ್‌ರೇಪ್ ಎಸಗುತ್ತಿದ್ದರು ಎಂದು ದೂರಿನಲ್ಲಿ ದಾಖಲಿಸಲಾಗಿದೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಕಲಿ ರೇಪ್ ಕೇಸ್ ಹಾಕ್ತಿನಿ ಅಂದ ನಟಿ ಅರೆಸ್ಟ್

ನವದೆಹಲಿ: ವ್ಯಕ್ತಿಯೊಬ್ಬನಿಗೆ ಸುಳ್ಳು ರೇಪ್ ಕೇಸ್ ಹಾಕುವುದಾಗಿ ಬೆದರಿಸಿ ಹಣ ಪಡೆದು ವಂಚಿಸಿದ ಪುಣೆ ಮೂಲದ ...

news

ವಿದ್ಯಾರ್ಥಿನಿಯೊಂದಿಗೆ ಗೆಳೆತನ ಬೆಳೆಸಿ ರೇಪ್‌ ಮಾಡಲು ಸ್ನೇಹಿತರನ್ನು ಕರೆದ ಕಾಮುಕ

ಶಿಮ್ಲಾ: ಶಾಲಾ ವಿದ್ಯಾರ್ಥಿನಿಯೊಂದಿಗೆ ಗೆಳೆತನ ಬೆಳೆಸಿದ ಪರಿಚಿತ ಕಾಮುಕನೊಬ್ಬ ತನ್ನ ಐವರು ...

news

ಐತಿಹಾಸಿಕ ಕೆಂಪುಕೋಟೆ ಸ್ಫೋಟಿಸುವ ಬೆದರಿಕೆಯೊಡ್ಡಿದ್ದ ಆರೋಪಿ ಅರೆಸ್ಟ್

ನವದೆಹಲಿ: ಐತಿಹಾಸಿಕ ಕೆಂಪುಕೋಟೆಯನ್ನು ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದ ಆರೋಪಿಯನ್ನು ಪೊಲೀಸರು ...

news

ಅಮರನಾಥ ಯಾತ್ರಿಕರ ಮೇಲೆ ಉಗ್ರರ ದಾಳಿ: ಗಾಯಾಳು ಮಹಿಳೆ ಸಾವು

ಅಮರನಾಥ ಯಾತ್ರಿಕರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯಾತ್ರಾರ್ಥಿ ...

Widgets Magazine