Widgets Magazine
Widgets Magazine

ಹೇಮಾಮಾಲಿನಿ ಪ್ರತಿನಿತ್ಯ ಮದ್ಯ ಸೇವಿಸ್ತಾರೆ, ಆತ್ಮಹತ್ಯೆಗೆ ಶರಣಾಗಿದ್ದಾರಾ: ಮಹಾರಾಷ್ಟ್ರ ಶಾಸಕ

ಮುಂಬೈ, ಶುಕ್ರವಾರ, 14 ಏಪ್ರಿಲ್ 2017 (13:54 IST)

Widgets Magazine

ಬಾಲಿವುಡ್ ನಟಿ, ಬಿಜೆಪಿ ಸಂಸದೆ ಹೇಮಾಮಾಲಿನಿ ಪ್ರತಿನಿತ್ಯ ಮದ್ಯ ಸೇವಿಸುತ್ತಾರೆ. ಆದರೆ, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂದು ಮಹಾರಾಷ್ಟ್ರದ ಬಚ್ಚು ಕಾಡು ನೀಡಿರುವ ಹೇಳಿಕೆ ಬಿಜೆಪಿ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.
 
ಮಾಹಾರಾಷ್ಟ್ರದಲ್ಲಿ ರೈತರ ಆತ್ಮಹತ್ಯೆ ವಿಷಯ ಬಹುದೊಡ್ಡ ರಾಜಕೀಯ ವಿಷಯವಾಗಿದೆ. ಆದರೆ, ರೈತರ ಆತ್ಮಹತ್ಯೆಗೆ ಡ್ರೀಮ್‌ಗರ್ಲ್ ಖ್ಯಾತಿಯ ಬಿಜೆಪಿ ಸಂಸದೆಯನ್ನು ಹೋಲಿಸಿರುವುದು ವಿವಾದಕ್ಕೆ ಕಾರಣವಾಗಿದೆ.
 
ನಾಂದೇಡ್ ಜಿಲ್ಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಂಸದೆ ಹೇಮಾಮಾಲಿನಿ ಪ್ರತಿನಿತ್ಯ ಮದ್ಯ ಸೇವಿಸುತ್ತಾರೆ. ಆದರೆ, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
 
ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಕುಖ್ಯಾತಿಯನ್ನು ಪಡೆದ ಶಾಸಕ ಕಾಡು, ರೈತರಿಗೆ ಮದ್ಯ ಸೇವನೆಯ ಚಟವಿರುವುದರಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎನ್ನುವುದನ್ನು ತಳ್ಳಿಹಾಕಿ, ಶೇ.75 ರಷ್ಟು ಶಾಸಕರು, ಸಂಸದರು ಮತ್ತು ಪತ್ರಕರ್ತರು ಹಾಗೂ ಬಿಜೆಪಿ ಸಂಸದೆ ಹೇಮಾಮಾಲಿನಿ ಪ್ರತಿನಿತ್ಯ ಮದ್ಯ ಸೇವಿಸುತ್ತಾರೆ. ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆಯೇ ಎಂದು ತಿರುಗೇಟು ನೀಡಿದರು.   
 
ಮಹಾರಾಷ್ಟ್ರದ ಅಮರಾವತಿ(ಅಚಲಾಪುರ್)ವಿಧಾನಸಭಾ ಕ್ಷೇತ್ರದ ಶಾಸಕರಾದ ಕಾಡು, ಕೇಂದ್ರ ಹೆದ್ದಾರಿಗೆ ಮತ್ತು ಸಾರಿಗೆ ಖಾತೆ ಸಚಿವರಾದ ನಿತಿನ್ ಗಡ್ಕರಿ ತಮ್ಮ ಪುತ್ರನ ವಿವಾಹಕ್ಕೆ 4 ಕೋಟಿ ರೂಪಾಯಿಗಳಿಗೂ ಹೆಚ್ಚು ವ್ಯಯ ಮಾಡಿದ್ದಾರೆ. ಆವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ನಿರೀಕ್ಷಿಸಬೇಕಾ ಎಂದು ಗುಡುಗಿದ್ದಾರೆ.
 
ಶಾಸಕ ಬಚ್ಚು ಕಾಡು ಅವರ ಹೇಳಿಕೆಯಿಂದ ಆಕ್ರೋಶಗೊಂಡಿರುವ ಬಿಜೆಪಿ ನಾಯಕರು, ಅವರ ಹೇಳಿಕೆ ಕೇವಲ ಹೇಮಾಮಾಲಿನಿಯವರಿಗಾದ ಅಪಮಾನವಲ್ಲ. ಸಂಪೂರ್ಣ ಮಹಿಳಾ ಕುಲಕ್ಕೆ ಮಾಡಿದ ಅಪಮಾನ ಎಂದು ಹೇಳಿದ್ದಾರೆ.
 
ಬಿಜೆಪಿ ಸಂಸದೆ ಹೇಮಾಮಾಲಿನಿ ಬಾಲಿವುಡ್‌ನಲ್ಲಿ ಡ್ರೀಮ್‌ಗರ್ಲ್ ಎನ್ನುವ ಖ್ಯಾತಿ ಪಡೆದು ಖ್ಯಾತಿ ಪಡೆದಿದ್ದಾರೆ. ಅವರಿಗೆ ಅಪಮಾನ ಮಾಡುವುದು ಸರಿಯಲ್ಲ. ಬೆಳೆಹಾನಿ ಸೇರಿದಂತೆ ಇತರ ಸಮಸ್ಯೆಗಳಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಪ್ರೀತಿ ಗಾಂಧಿ ತಿಳಿಸಿದ್ದಾರೆ.
 
ಪ್ರಸಕ್ತ ವರ್ಷದ ಆರಂಭಿಕ ಮೂರು ತಿಂಗಳಲ್ಲಿ ಮಹಾರಾಷ್ಟ್ರದ ಮರಾಠವಾಡಾ ಪ್ರದೇಶದಲ್ಲಿ ಕನಿಷ್ಠ 200 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಗಳು ಬಹಿರಂಗಪಡಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸ್ವತಂತ್ರ ಶಾಸಕ ಬಚ್ಚು ಕಾಡು ಮಹಾರಾಷ್ಟ್ರ ಹೇಮಾಮಾಲಿನಿ ರೈತರ ಆತ್ಮಹತ್ಯೆ ಬಿಜೆಪಿ Maharashtra Drink Bjp Farmers' Suicide Hema Malini Independent Mla Bacchu Kadu

Widgets Magazine

ಸುದ್ದಿಗಳು

news

ಆಸ್ತಿ ವಿವರ ಸಲ್ಲಿಸದ ಶಾಸಕರ ವಿರುದ್ಧ ಕಠಿಣ ಕ್ರಮ: ಲೋಕಾಯುಕ್ತ

ಬೆಂಗಳೂರು: ಕಳೆದ ವರ್ಷದ ಆರ್ಥಿಕ ವಿವರ ಸಲ್ಲಿಸದ ಎಂಟು ಮಂದಿ ಶಾಸಕರ ವಿರುದ್ಧ ಕಠಿಣ ಕ್ರಮ ...

news

ಆಫ್ಘನ್ ಮೇಲೆ ಬಾಂಬ್ ದಾಳಿ: ಕೇರಳ ವ್ಯಕ್ತಿ ಸಾವು

ನವದೆಹಲಿ: ಆಫ್ಘಾನಿಸ್ತಾನದ ಐಸಿಸ್ ಉಗ್ರರ ಅಡಗುದಾಣದ ಮೇಲೆ ನಿನ್ನೆ ಅಮೆರಿಕಾ ನಡೆಸಿದ ಬಾಂಬ್ ದಾಳಿಯಲ್ಲಿ ...

news

ಪಕ್ಷದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡಲು ಕಾಂಗ್ರೆಸ್ ನಿರಾಕರಣೆ

ಡೆಹರಾಡೂನ್: ಪಕ್ಷದ ಅಧಿಕೃತ ಕಾರ್ಯಕ್ರಮಗಳಲ್ಲಿ ಒಂದು ತಿಂಗಳವರೆಗೆ ವಂದೇ ಮಾತರಂ ಹಾಡುವುದಿಲ್ಲ ಏನು ...

news

ಐಸಿಸ್ ಉಗ್ರರ ನೆಲೆಗಳ ಮೇಲೆ ನಾನ್-ನ್ಯೂಕ್ಲಿಯರ್ ಬಾಂಬ್ ದಾಳಿ

ನಂಗರ್‌ಹಾರ್(ಅಫ್ಘಾನಿಸ್ತಾನ್): ಐಸಿಸ್ ಉಗ್ರರ ನೆಲೆಗಳ ಮೇಲೆ ಅಮೆರಿಕದ ವಾಯುಸೇನೆ ನಾನ್-ನ್ಯೂಕ್ಲಿಯರ್ ...

Widgets Magazine Widgets Magazine Widgets Magazine