ನಗರಗಳಲ್ಲಿ ಹಾದುಹೋಗುವ ಹೆದ್ದಾರಿಗಳಿಗೆ ಮದ್ಯ ನಿಷೇಧ ಅನ್ವಯಿಸುವುದಿಲ್ಲ: ಸುಪ್ರೀಂಕೋರ್ಟ್

ನವದೆಹಲಿ, ಮಂಗಳವಾರ, 11 ಜುಲೈ 2017 (16:55 IST)

ನಗರಗಳಲ್ಲಿ ಹಾದುಹೋಗುವ ಹೆದ್ದಾರಿಗಳಿಗೆ ಮದ್ಯ ನಿಷೇಧ ಕಾನೂನು ಅನ್ವಯವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಹೀಗಾಗಿ, ನಗರಗಳ ಮದ್ಯ ಮಾರಾಟಗಾರರು ನಿಟ್ಟುಸಿರು ಬಿಟ್ಟಿದ್ದಾರೆ.


ಚಂಢೀಗಡ ಸೇರಿದಂತೆ ಕೆಲ ರಾಜ್ಯಗಳಲ್ಲಿ ನಗರ ಪ್ರದೇಶದಲ್ಲಿ ಹಾದುಹೋಗುವ ಹೆದ್ದಾರಿ ಬಳಿ ನಿಷೇಧವನ್ನ ಡಿನೋಟಿಫೈ ಮಾಡಲಾಗಿತ್ತು. ಇದನ್ನ ಪ್ರಶ್ನಿಸಿ ಎನ್`ಜಿಓ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ನಗರಗಳಲ್ಲಿ ಹಾದಹೋಗುವ ಹೆದ್ದಾರಿಗಳಲ್ಲಿ ಮದ್ಯ ನಿಷೇಧ ಕಾನೂನು ಅನ್ವಯಿಸುವುದಿಲ್ಲ ಎಂದು ಹೇಳಿದೆ.

ವಾಹನಗಳು ವೇಗವಾಗಿ ಸಂಚರಿಸುವ ಪ್ರದೇಶವನ್ನ ಗಮನದಲ್ಲಿರಿಸಿಕೊಂಡು ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಹೀಗಾಗಿ, ನಗರಗಳಲ್ಲಿ ಹಾದುಹೋಗುವ ಹೆದ್ದಾರಿಗಳಿಗೆ ಇದು ಅನ್ವಯಿಸುವುದಿಲ್ಲ ಎಂ ದಿರುವ ಕೋರ್ಟ್, ರಾಜ್ಯಗಳ ಡಿನೋಟಿಫೈ ಆದೇಶವನ್ನ ಎತ್ತಿಹಿಡಿದಿದೆ.

 ಸುಪ್ರೀಂಕೋರ್ಟ್ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧ ಮಾಡಿದ ಬಳಿಕ ನಗರಗಳಲ್ಲಿ ಹಾದುಹೋಗುವ ಹೆದ್ದಾರಿಗಳಲ್ಲೂ ಮದ್ಯದಂಗಡಿಗಳನ್ನ ಮುಚ್ಚಿಸಲಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸುಪ್ರೀಂಕೋರ್ಟ್ ಮದ್ಯ ಮಾರಾಟ ರಾಷ್ಟ್ರೀಯ ಹೆದ್ದಾರಿ National Highway Liquor Ban Central Government

ಸುದ್ದಿಗಳು

news

ಅರುಣಾಚಲ ಪ್ರದೇಶದಲ್ಲಿ ಭೂಕುಸಿತ: 14 ಮಂದಿ ಸಾವು

ಲಟಾಪ್: ಅರುಣಾಚಲ ಪ್ರದೇಶದಲ್ಲಿ ಗುಡ್ಡ ಕುಸಿದಿದ್ದಿರಿಂದ 14 ಕ್ಕೂ ಹೆಚ್ಚು ಸಾವನ್ನಪ್ಪಿದ ದಾರುಣ ಘಟನೆ ...

news

ಬಾಡಿ ಮಸಾಜ್ ಪಾರ್ಲರ್‌ಗಳ ಮೇಲೆ ಮೇಯರ್ ದಾಳಿ

ಮಂಗಳೂರು: ಬಾಡಿ ಮಸಾಜ್ ಪಾರ್ಲರ್‌ಗಳ ಮೇಲೆ ಮೇಯರ್ ದಾಳಿ ನಡೆಸಿ ಬಿಸಿ ಮುಟ್ಟಿಸಿದ ಘಟನೆ ವರದಿಯಾಗಿದೆ.

news

ಯುಪಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಗೋಪಾಲ್‌ಕೃಷ್ಣ ಗಾಂಧಿ ಕಣಕ್ಕೆ

ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಗೆ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರನ್ನು ...

news

ಹಿಂದು ನಾಯಕರನ್ನು ಬಂಧಿಸಿದ್ರೆ ಸುಮ್ಮನಿರಲ್ಲ : ವಿಎಚ್‌ಪಿ ವಾರ್ನಿಂಗ್

ಮಂಗಳೂರು: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಅಂತ್ಯಸಂಸ್ಕಾರ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ...

Widgets Magazine