ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಲಿರುವ ಹನಿಪ್ರೀತ್

ನವದೆಹಲಿ, ಮಂಗಳವಾರ, 26 ಸೆಪ್ಟಂಬರ್ 2017 (08:53 IST)

ನವದೆಹಲಿ: ಡೇರಾ ಮುಖ್ಯಸ್ಥ, ಅಪರಾಧಿ ಗುರ್ಮೀತ್ ರಾಮ್ ರಹೀಂ ಸಿಂಗ್ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ನಿರೀಕ್ಷಣಾ ಜಾಮೀನಿಗಾಗಿ ದೆಹಲಿ ಹೈ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ.


ರಾಮ್ ರಹೀಂ ಸಿಂಗ್ ವಿರುದ್ಧದ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿದ್ದಂತೆ ಹನಿಪ್ರೀತ್ ತಲೆ ಮರೆಸಿಕೊಂಡಿದ್ದಳು. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಹನಿಪ್ರೀತ್ ಪರ ವಕೀಲ ಪ್ರದೀಪ್ ಆರ್ಯ, ನಿರೀಕ್ಷಣಾ ಜಾಮೀನು ಅರ್ಜಿಗೆ ಸಹಿ ಹಾಕಲು ದೆಹಲಿಯ ಲಜಪತ್ ನಗರದಲ್ಲಿರುವ ಕಚೇರಿಗೆ ಹನಿಪ್ರೀತ್ ಬಂದಿದ್ದಳು. ಅಲ್ಲದೆ ಆಕೆ ತಮ್ಮ ಜತೆ ಸಂಪರ್ಕದಲ್ಲಿದ್ದಾರೆ. ಇಂದು ದೆಹಲಿ ಹೈಕೋರ್ಟ್ ಗೆ ತಮ್ಮ ಕಕ್ಷಿದಾರರ ಪರವಾಗಿ ಜಾಮೀನು ಅರ್ಜಿ ಸಲ್ಲಿಸುವುದಾಗಿ ಆರ್ಯ ತಿಳಿಸಿದ್ದಾರೆ.

ಆದರೆ ಹನಿಪ್ರೀತ್ ಎಲ್ಲಿದ್ದಾಳೆ ಎಂಬುದು ತಿಳಿದಿಲ್ಲ. ರಾಮ್ ರಹೀಂ ಸಿಂಗ್ ವಿರುದ್ಧ ಬಂದಿರುವ ತೀರ್ಪಿನ ಪರವಾಗಿ ತೀವ್ರ ಬೇಸರವಾಗಿದೆ. ಅಲ್ಲದೆ ಬಾಬಾ ಜತೆ ಇಲ್ಲ ಸಲ್ಲದ ಸಂಬಂಧ ಕಲ್ಪಿಸಿರುವ ಬಗ್ಗೆ ಹನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಶೀಘ್ರ ವಿಚಾರಣೆಗಾಗಿ ಕೋರ್ಟ್ ನಲ್ಲಿ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  
ಪ್ರದೀಪ್ ಆರ್ಯ ರಾಮ್ ರಹೀಮ್ ಸಿಂಗ್ ಹನಿಪ್ರೀತ್ Honeypreet Pradeep Arya Ram Rahim Singh

ಸುದ್ದಿಗಳು

news

ಅತ್ಯಾಚಾರ ತೀರ್ಪು ಪ್ರಶ್ನಿಸಲಿರುವ ಡೇರಾ ಬಾಬಾ

ನವದೆಹಲಿ: ಅತ್ಯಾಚಾರ ಆರೋಪದಲ್ಲಿ ರೋಹ್ಟಗಿ ಜೈಲಿನಲ್ಲಿ 20 ವರ್ಷ ಜೈಲು ಶಿಕ್ಷೆಗೊಳಗಾಗಿರುವ ಡೇರಾ ಸಚ್ ...

news

2018ರ ವೇಳೆಗೆ ಪ್ರತಿ ಮನೆಯೂ ಪ್ರಜ್ವಲಿಸಲಿದೆ: ಪ್ರಧಾನಿ ಮೋದಿ

ನವದೆಹಲಿ: ದೇಶದ ಪ್ರತಿ ಮನೆಗೂ ವಿದ್ಯುತ್ ಭಾಗ್ಯ ಕಲ್ಪಿಸುವ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಸೌಭಾಗ್ಯ ...

ಸೀಮೆಎಣ್ಣೆ ಸ್ಟೌವ್ ಸಿಡಿದು ಮೂವರು ಮಕ್ಕಳು ಸಾವು

ಕಲಬುರ್ಗಿ: ಸೀಮೆ ಎಣ್ಣೆ ಸ್ಟೌವ್ ಸಿಡಿದು ಮೂವರು ಮಕ್ಕಳು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಚಿಂಚೋಳಿ ...

news

ರಜನಿಕಾಂತ್ ಜತೆಗೆ ನನ್ನನ್ನು ಹೋಲಿಸುವುದು ಕೆಟ್ಟದ್ದು ಎಂದ ಕಮಲ್ ಹಾಸನ್

ಚೆನ್ನೈ: ರಾಜಕೀಯಕ್ಕೆ ಬರಲು ಸಿದ್ಧತೆ ಮಾಡುತ್ತಿರುವ ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ತಮ್ಮನ್ನು ...

Widgets Magazine
Widgets Magazine