Widgets Magazine
Widgets Magazine

ಆಘಾತಕಾರಿ! ನರ್ಸರಿ ಬಾಲೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕ ಚಾಲಕ

ನವದೆಹಲಿ, ಗುರುವಾರ, 27 ಜುಲೈ 2017 (20:06 IST)

Widgets Magazine

ನರ್ಸರಿ ಓದುತ್ತಿದ್ದ ನಾಲ್ಕು ವರ್ಷದ ಬಾಲೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ವ್ಯಾನ್‌ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
 
ದೆಹಲಿ ಹೊರವಲಯದಲ್ಲಿರುವ ಬಾಬಾ ಹರಿದಾಸ್ ನಗರ‌ದಲ್ಲಿ ಘಟನೆ ನಡೆದಿದೆ. 26 ವರ್ಷದ ವ್ಯಾನ್ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಯಾರಿಗಾದರೂ ಮಾಹಿತಿ ನೀಡಿದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
 
ಪೋಷಕರ ಪ್ರಕಾರ, ಬಾಲೆಯನ್ನು ಶಾಲೆಯಿಂದ ಕರೆತರಲು ವ್ಯಾನ್ ನಿಗದಿಪಡಿಸಲಾಗಿತ್ತು. ಎಲ್ಲಾ ವಿದ್ಯಾರ್ಥಿಗಳನ್ನು ಮನೆಗೆ ಬಿಟ್ಟ ನಂತರ ಚಾಲಕ ಕೊನೆಯದಾಗಿ ಬಾಲೆಯನ್ನು ಮನೆಗೆ ಕರೆತರುತ್ತಿದ್ದ. ಇಂದು ಬಾಲಕಿ ಶಾಲಾ ವ್ಯಾನ್‌ನಿಂದ ಇಳಿದಾಗ ಕಾಲುಗಳಲ್ಲಿ ರಕ್ತ ಸೋರುತ್ತಿತ್ತು. ತಾಯಿ ಬಾಲಕಿಯನ್ನು ವಿಚಾರಿಸಿದಾಗ ಚಾಲಕನ ಹೇಯ ಕೃತ್ಯ ಬೆಳಕಿಗೆ ಬಂದಿದೆ.
 
ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
 
ಆರೋಪಿ ಚಾಲಕನನ್ನು ಮಧ್ಯರಾತ್ರಿ ಅದೇ ಪ್ರದೇಶದಲ್ಲಿ ಬಂಧಿಸಲಾಗಿದೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಬಾಲಕಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಲಾಲು ಯಾದವ್ ಮೇಲೆ ಬಿತ್ತು ಮತ್ತೊಂದು ಇಡಿ ಕೇಸ್

ನವದೆಹಲಿ: ಮುಖ್ಯಮಂತ್ರಿ ನಿತೀಶ್ ಕುಮಾರ್ ಯಾದವ್ ಮಹಾಮೈತ್ರಿಕೂಟಕ್ಕೆ ಕೈಕೊಟ್ಟು ಎನ್‌ಡಿಎ ತೆಕ್ಕೆಗೆ ...

news

ಧರ್ಮಸಿಂಗ್ ಅಂತ್ಯಸಂಸ್ಕಾರ: ಜೇವರ್ಗಿಯಲ್ಲಿ ಭಾರಿ ಪ್ರತಿಭಟನೆ

ಜೇವರ್ಗಿ: ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅಂತ್ಯಸಂಸ್ಕಾರವನ್ನು ಕಲಬುರಗಿಯ ನಾಗನಹಳ್ಳಿಯಲ್ಲಿ ನೆರವೇರಿಸಲು ...

news

ಅವಕಾಶವಾದಿ ನಿತೀಶ್ ಕುಮಾರ್ ನಮ್ಮನ್ನು ವಂಚಿಸಿದ್ರು: ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹಾಮೈತ್ರಿಕೂಟ ತೊರೆದು ಎನ್‌ಡಿಎ ತೆಕ್ಕೆಗೆ ಸೇರ್ಪಡೆಯಾದ ...

news

ಇದೆಂಥ ಹೀನ ಕೃತ್ಯ..ಪಂಚಾಯ್ತಿ ಆದೇಶವೆಂದು ಕುಟುಂಬಸ್ಥರ ಎದುರೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

ಗ್ರಾಮ ಪಂಚಾಯಿತಿ ಸದಸ್ಯರ ಆದೇಶ ಹಿನ್ನಲೆಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಆಕೆಯ ಕುಟುಂಬಸ್ಥರ ಎದುರೇ ...

Widgets Magazine
Widgets Magazine Widgets Magazine