ಗುಜರಾತ್‌ನಲ್ಲಿ ಶಾಸಕರ ಕುದುರೆ ವ್ಯಾಪಾರ: ಅಮಿತ್ ಶಾ, ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ

ವಡೋದರಾ, ಶನಿವಾರ, 29 ಜುಲೈ 2017 (13:22 IST)

ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರರೂಢವಾಗಿರುವ ಬಿಜೆಪಿ ಸರಕಾರ, ವಿಪಕ್ಷಗಳ ಶಾಸಕರ ಖರೀದಿಯಲ್ಲಿ ತೊಡಗಿದೆ ಎಂದು ಆರೋಪಿಸಿ ಚುನಾವಣೆ ಆಯೋಗಕ್ಕೆ ದೂರು ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
 
ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಬಿಜೆಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನಿಯೋಗ ಇಂದು ಸಂಜೆ ಕೇಂದ್ರ ಚುನಾವಣೆ ಆಯುಕ್ತರನ್ನು ಭೇಟಿ ಮಾಡಲಿದೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
 
ಗುಜರಾತ್‌ನ ಆರು ಕಾಂಗ್ರೆಸ್ ಶಾಸಕರ ಮೇಲೆ ಒತ್ತಡ ಹೇರಿ ರಾಜೀನಾಮೆ ಕೊಡಿಸಿ, ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.
 
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಅಧಿಕಾರ ಬಲದಿಂದ ವಿಪಕ್ಷಗಳ ಶಾಸಕರ ಮೇಲೆ ಒತ್ತಡ ಹೇರಿ ಪಕ್ಷಾಂತರಕ್ಕೆ ಪ್ರಚೋದಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಆರೋಪಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಗುಜರಾತ್ ಅಮಿತ್ ಶಾ ಪ್ರಧಾನಿ ಮೋದಿ ಕಾಂಗ್ರೆಸ್ ಕುದುರೆ ವ್ಯಾಪಾರ ಆಪರೇಷನ್ ಕಮಲ್ Gujarat Modi Congress Amit Sha Horse Trading Operation Kamala

ಸುದ್ದಿಗಳು

news

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಬೆಂಬಲಿಸಿದ್ದರಾ ಬಿಎಸ್`ವೈ..? ಈಗ ವಿರೋಧಿಸುತ್ತಿರುವುದೇಕೆ..?

ಲಿಂಗಾಯತ ಸ್ವತಂತ್ರ ಧರ್ಮವಾಗಬೇಕೆಂಬ ವಿವಾದ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆಯುತ್ತಿದೆ. ಲಿಂಗಾಯತ ...

news

ಪ್ರವಾಸಕ್ಕಾಗಿ ಗುಜರಾತ್ ಶಾಸಕರು ರಾಜ್ಯಕ್ಕೆ: ಡಿ.ಕೆ.ಸುರೇಶ್

ಬೆಂಗಳೂರು: ಗುಜರಾತ್ ಶಾಸಕರು ಪ್ರವಾಸಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದಾರೆಯೇ ಹೊರತು ಬೇರೆ ಯಾವುದೇ ...

news

ಮಾಧಕ ವ್ಯಸನಿಗಳು ಕ್ರಿಮಿನಲ್ ಗಳಲ್ಲ; ಸಂತ್ರಸ್ತರು: ಕೆಸಿಆರ್

ಟಾಲಿವುಡ್ ನಟ-ನಟಿ ಹಾಗೂ ನಿರ್ದೇಶಕರ ಹೆಸರುಗಳು ಡ್ರಗ್ಸ್ ಮಾಫಿಯಾದಲ್ಲಿ ತಳುಕು ಹಾಕಿಜೊಂಡಿರುವ ಬೆನ್ನಲ್ಲೇ ...

news

ಅಮೆರಿಕಕ್ಕೆ ಆಘಾತವನ್ನುಂಟುಮಾಡಿದ ಉತ್ತರ ಕೊರಿಯಾ

ಜಗತ್ತಿಗೇ ದೊಡ್ಡಣ್ಣ ಎಂದು ಬೀಗುವ ಅಮೆರಿಕಕ್ಕೇ ದಂಗು ಬಡಿಸಿರುವ ಉತ್ತರ ಕೊರಿಯಾ ರಾಷ್ಟ್ರ ಇದೀಗ ಮತ್ತೊಂದು ...

Widgets Magazine