ಏಳು ವರ್ಷದ ಪ್ರದ್ಯುಮ್ನನ್ನು ಕೊಲೆ ಮಾಡಿದ್ದು ಹೇಗೆ? ಕೊಲೆ ಆರೋಪಿ ವಿದ್ಯಾರ್ಥಿ ಬಿಚ್ಚಿಟ್ಟ ರಹಸ್ಯ!

ನವದೆಹಲಿ, ಶುಕ್ರವಾರ, 10 ನವೆಂಬರ್ 2017 (09:26 IST)

ನವದೆಹಲಿ: ರಿಯಾನ್ ಇಂಟರ್ನಾಷನಲ್ ಶಾಲೆ ವಿದ್ಯಾರ್ಥಿ 7 ವರ್ಷದ ಬಾಲಕ ಪ್ರದ್ಯುಮ್ನ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕೊಲೆ ಆರೋಪದಲ್ಲಿ ಬಂಧಿತನಾದ 11 ನೇ ತರಗತಿ ವಿದ್ಯಾರ್ಥಿ ಕೊಲೆ ಮಾಡಿರುವುದಾಗಿ ತಂಡದ ಮುಂದೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.


 
ಹರ್ಯಾಣ ಪೊಲೀಸರು ಈ ಘಟನೆಯಲ್ಲಿ ಬಸ್ ಕಂಡಕ್ಟ್ ಆರೋಪಿ ಎಂದು ಆತನನ್ನು ಬಂಧಿಸಿದ್ದರು. ಆದರೆ ಸಿಬಿಐ ತನಿಖೆ ಕೈಗೆತ್ತಿಕೊಂಡ ಬಳಿಕ 11 ನೇ ತರಗತಿ ವಿದ್ಯಾರ್ಥಿಯೇ ಕೊಲೆ ಮಾಡಿದಾತ ಎಂದು ತಿಳಿದುಬಂದಿತ್ತು.
 
ಪರೀಕ್ಷೆ ಮುಂದೊಡ್ಡುವ ನೆಪದಲ್ಲಿ 7 ವರ್ಷದ ಬಾಲಕ ಪ್ರದ್ಯುಮ್ನನ್ನು ಆತ ಕೊಲೆ ಮಾಡಿದ್ದ ಎಂದು ಹೇಳಲಾಗಿದೆ. ತನ್ನ ತಂದೆ ಮತ್ತು ಸ್ವತಂತ್ರ ಸಾಕ್ಷಿದಾರರ ಸಮ್ಮುಖದಲ್ಲಿ ಸಿಬಿಐ ತಂಡದ ಎದುರು ಆತ ಈ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಕೊಲೆ ಬಗ್ಗೆ ವಿವರಿಸಿದ್ದಾನೆ ಎನ್ನಲಾಗಿದೆ.
 
ಪೊಲೀಸ್ ಮೂಲಗಳ ಪ್ರಕಾರ ಆರೋಪಿ ಸೋಹ್ನಾ ಮಾರ್ಕೆಟ್ ನಿಂದ ಕೊಲೆ ಮಾಡಲು ಚಾಕು ಖರೀದಿಸಿದ್ದ. ನಂತರ ಶಾಲೆಯ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಪ್ರದ್ಯುಮ್ನನ ಕುತ್ತಿಗೆ ಸೀಳಿ ಕೊಲೆ ಮಾಡಿದ್ದ ಎನ್ನಲಾಗಿದೆ. ಸಿಸಿಟಿವಿ ಫೂಟೇಜ್ ಮತ್ತು ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳ ವಿಚಾರಣೆ ಆಧರಿಸಿ ಸಿಬಿಐ ತನಿಖೆ ನಡೆಸಿತ್ತು. ಇದೀಗ ಆರೋಪಿ ತಪ್ಪೊಪ್ಪಿಕೊಂಡಿದ್ದು, ಆತನಿಗೆ ಜೀವಾವಧಿ ಶಿಕ್ಷೆ ಸಿಗುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರದ್ಯುಮ್ನ ಪರ ವಕೀಲರು ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

'ಶೌಚಕ್ಕೆ ಕಷ್ಟವೆಂದು ಫಾರಿನ್ ಕಮೋಡ್ ತೆಗೆದುಕೊಂಡು ಹೋದರೆ ತಪ್ಪೇ?’

ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರ ಮಾತುಗಳು ಎಲ್ಲೆ ಮೀರುವುದು ಸಹಜ. ಅದೇ ರೀತಿ ...

news

ಜಯಲಲಿತಾ ಪಕ್ಷಕ್ಕೆ ಕೈಕೊಟ್ಟು ಕರುಣಾನಿಧಿ ಜತೆ ಕೈ ಜೋಡಿಸಲಿದ್ದಾರಾ ಪ್ರಧಾನಿ ಮೋದಿ?

ಚೆನ್ನೈ: ಪ್ರಧಾನಿ ಮೋದಿ ಕೆಲವೊಂದು ಅನಿರೀಕ್ಷಿತ ನಿರ್ಧಾರಗಳಿಂದಲೇ ರಾಜಕೀಯ ಚದುರಂಗದಾಟವಾಡುವವರು. ಇದೀಗ ...

news

ಪ್ರಜ್ವಲ್ ರೇವಣ್ಣ ಟಿಕೆಟ್ ಸಿಗದಂತೆ ಒತ್ತಡ ಹೇರಿದ್ದರೇ ಸಹೋದರ ನಿಖಿಲ್? ನಿಖಿಲ್ ಹೇಳಿದ್ದೇನು?

ಬೆಂಗಳೂರು: ಜೆಡಿಎಸ್ ವರಿಷ್ಠ ದೇವೇಗೌಡರ ಮೊಮ್ಮಕ್ಕಳ ನಡುವೆ ಪರಸ್ಪರ ಭಿನ್ನಮತವಿದೆ. ಅದೇ ಕಾರಣಕ್ಕೆ ...

news

ಶಿವರಾಜ್ ಕುಮಾರ್ ದೂರಿನ ಬಿಸಿಗೆ ಕರಗಿದ ಗೃಹಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು: ಮಾನ್ಯತಾ ಟೆಕ್ ಪಾರ್ಕ್ ಸುತ್ತಮುತ್ತ ಟ್ರಾಫಿಕ್ ಕಿರಿ ಕಿರಿಯಾಗುತ್ತಿದೆಯೆಂದು ಸ್ಯಾಂಡಲ್ ವುಡ್ ...

Widgets Magazine
Widgets Magazine