ರೊಟ್ಟಿ ಸುಟ್ಟಿದ್ದು ಕಪ್ಪಾಗಿದ್ದಕ್ಕೆ ಪತ್ನಿಗೆ ತಲಾಖ್ ನೀಡಿದ ಭೂಪ!

ಉತ್ತರಪ್ರದೇಶ, ಮಂಗಳವಾರ, 10 ಜುಲೈ 2018 (18:52 IST)

: ಕೇಂದ್ರದಲ್ಲಿ ಎನ್ ಡಿೆ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ ಮಹಿಳೆಯರ ಹಿತ ಕಾಪಾಡಲು ಅನೇಕ ಕ್ರಮ ತೆಗೆದುಕೊಂಡಿದ್ದು ಅದರಲ್ಲಿ ಮುಸ್ಲಿಂ ಮಹಿಳೆಯರಿಗೆ ನೀಡುವ ತ್ರಿವಳಿ ತಲಾಖ್ ಕ್ರಮವನ್ನು ರದ್ದು ಮಾಡಿರುವುದು ಕೂಡ ಒಂದು. ಆದರೆ ಕೆಲವು ಕಡೆ ಈಗಲೂ ಮಹಿಳೆಯರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.


ಹೌದು. ಇತ್ತೀಚೆಗೆ ಉತ್ತರಪ್ರದೇಶ ಮಹೋಬಾ ಜಿಲ್ಲೆಯ ಭೂಪನೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ. ಅವನು ಆಕೆಗೆ ತಲಾಖ್ ನೀಡಿರುವುದಕ್ಕೆ ಕಾರಣ ತಿಳಿದರೆ ಆಶ್ಚರ್ಯವಾಗುತ್ತದೆ. ಏಕೆಂದರೆ ಆತ ತನ್ನ ಪತ್ನಿಗೆ  ತಲಾಖ್ ನೀಡಿದ್ದು ಒಂದು ಕ್ಷುಲಕ ಕಾರಣಕ್ಕೆ.


ಅದೇನೆಂದರೆ 3 ದಿನಗಳ ಹಿಂದೆ ಆತ ಪತ್ನಿ ಮಾಡಿದ್ದ ರೊಟ್ಟಿ ಸುಟ್ಟು ಕಪ್ಪಾಗಿದೆ ಎಂದು ಬೇಸತ್ತು ಆ ಕ್ಷಣದಲ್ಲೇ ತ್ರಿವಳಿ ತಲಾಖ್ ನೀಡಿದ್ದಾನೆ. ಪತ್ನಿ ಈ ಬಗ್ಗೆ ದೂರು ನೀಡಿದ ಬಳಿಕ ಈ ವಿಷಯ ಬಹಿರಂಗವಾಗಿದೆ. ಆದರೆ ತ್ರಿವಳಿ ತಲಾಖ್ ಅಸಿಂಧು ಎಂದು ಕಳೆದ ವರ್ಷದ ಕೋರ್ಟ್ ತೀರ್ಪು ನೀಡಿದ್ದು  ಈ ಮಹಾಶಯನಿಗೆ ತಿಳಿದಿಲ್ಲವೆಂದು ಕಾಣುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪರೇಶ ಮೇಸ್ತ್ ಪ್ರಕರಣ: ಶೀಘ್ರ ತನಿಖೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಹೊನ್ನಾವರ ಪಟ್ಟಣದ ಯುವಕ ಪರೇಶ್ ಮೇಸ್ತನ ಅನುಮಾನಾಸ್ಪದ ಸಾವಿನ ಪ್ರಕರಣದ ಶೀಘ್ರ ತನಿಖೆಗೆ ಒತ್ತಾಯಿಸಿ ...

news

ಕಳಸಾ ಬಂಡೂರಿ ಹೋರಾಟಗಾರರಿಂದ ಬೆಂಗಳೂರು ಚಲೋ

ರೈತರ ಸಾಲಸಂಪೂರ್ಣ ಮನ್ನಾ ಹಾಗೂ ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಕಳಸಾ -ಬಂಡೂರಿ ...

news

ಮಾನವೀಯತೆ ಮೆರೆದ ಪತ್ರಕರ್ತರು

ಧಾರಾಕಾರ ಮಳೆಯ ಅವಘಡದಿಂದ ಮೂಕ ಪ್ರಾಣಿಯ ಮನಕಲುಕುವ ಘಟನೆ ನಡೆದಿದೆ. ಚರಂಡಿಯಲ್ಲಿ ಕೊಚ್ಚಿ ಹೋಗಿ ...

news

ಅಂಬೋಲಿ ಫಾಲ್ಸ್: ಪ್ರವಾಸಿಗರ ಸ್ವರ್ಗ

ಮಳೆಗಾಲ ಆರಂಭವಾದ್ರೆ ಸಾಕು ಜಲಪಾತಗಳತ್ತ ಪ್ರವಾಸಿಗರು ಮುಖ ಮಾಡತ್ತಾರೆ...ಅದರಲ್ಲೂ ಮೂರು ರಾಜ್ಯಗಳ ...

Widgets Magazine