ಪಿಎಸ್‌ಐಯೊಂದಿಗೆ ಪತ್ನಿಯ ಅನೈತಿಕ ಸಂಬಂಧ: ರಾಸಲೀಲೆ ವಿಡಿಯೋ ಪೋಸ್ಟ್ ಮಾಡಿದ ಪತಿ

ವಿಜಯವಾಡಾ, ಶುಕ್ರವಾರ, 29 ಸೆಪ್ಟಂಬರ್ 2017 (19:35 IST)

ಪೊಲೀಸ್ ಅಧಿಕಾರಿಯೊಬ್ಬನೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡಿದ್ದ ಪತ್ನಿಯ ರಾಸಲೀಲೆ ವಿಡಿಯೋಗಳನ್ನು ಪತಿಯೇ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದಾನೆ.
 ಕೃಷ್ಣಾ ಜಿಲ್ಲೆಯ ಹನುಮಾನ್ ಜಂಕ್ಷನ್-2 ಪೊಲೀಸ್ ಠಾಣೆಯ ಅಧಿಕಾರಿಯಾದ ವಿಜಯ್ ಕುಮಾರ್, ಮತ್ತೊಬ್ಬನ ಪತ್ನಿಯೊಂದಿಗಿರುವ ಅಶ್ಲೀಲ ಚಿತ್ರಗಳು ಯೂ-ಟ್ಯೂಬ್‌ನಲ್ಲಿ ವೈರಲ್ ಆಗಿವೆ.
 
ದಸರಾ ಹಬ್ಬದ ಬಂದೋಬಸ್ತ್‌ನಲ್ಲಿರುವ ಪೊಲೀಸ್ ಇಲಾಖೆಗೆ ತಮ್ಮದೇ ಅಧಿಕಾರಿಯ ವಿಡಿಯೋ ವೈರಲ್ ಆಗಿರುವುದು ತಲೆನೋವು ತಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸರ್ವಶ್ರೇಷ್ಠ ತ್ರಿಪಾಠಿ ಪೊಲೀಸ್ ಅಧಿಕಾರಿಯನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ತನಿಖೆಗೆ ಆದೇಶಿಸಿದ್ದಾರೆ.       
 
ಪೊಲೀಸ್ ಸಬ್‌ಇನ್ಸೆಪೆಕ್ಟರ್ ವಿಜಯ್ ಕುಮಾರ್, ಕಳೆದ ಮೂರು ವರ್ಷಗಳಿಂದ ಬ್ಯೂಟಿಶಿಯನ್ ಆಗಿರುವ ಸಾಯಿತೇಜಾ ಪತ್ನಿಯೊಂದಿಗೆ ಅನೈತಿಕ ಸಂಬಂಧ ಮುಂದುವರಿದಿತ್ತು. ಅನೈತಿಕ ಸಂಬಂಧ ಬಿಡುವಂತೆ ಪತ್ನಿಗೆ ಮನವಿ ಮಾಡಿದರೂ ಆಕೆ ತಿರಸ್ಕರಿಸಿದ್ದಳು. ತದನಂತರ ವಿಷಯವನ್ನು ಪತ್ನಿಯ ಕುಟುಂಬದವರೊಂದಿಗೆ ತಿಳಿಸಲಾಯಿತು. ಆದಾಗ್ಯೂ ಯಾವುದೇ ಪ್ರಯೋಜನವಾಗಲಿಲ್ಲ ಎನ್ನಲಾಗಿದೆ, 
 
ಇದರಿಂದ ಆಕ್ರೋಶಗೊಂಡ ಸಾಯಿತೇಜಾ, ಪತ್ನಿ, ಪೊಲೀಸ್ ಅಧಿಕಾರಿಯೊಂದಿಗೆ ನಡೆದ ರಾಸಲೀಲೆಯ ಖಾಸಗಿ ಕ್ಷಣಗಳ ವಿಡಿಯೋ ತೆಗೆದು ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಅನೈತಿಕ ಸಂಬಂಧ ನಿಲ್ಲಿಸಲು ಯತ್ನಿಸಿದಲ್ಲಿ ಹತ್ಯೆ ಮಾಡುವುದಾಗಿ ಪೊಲೀಸ್ ಅಧಿಕಾರಿ ಬೆದರಿಕೆಯೊಡ್ಡಿದ್ದಾನೆ ಎಂದು ಸಾಯಿತೇಜಾ ತಿಳಿಸಿದ್ದಾರೆ.
 
ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬನ ರಾಸಲೀಲೆ ಬಹಿರಂಗವಾಗಿದ್ದರಿಂದ ಉನ್ನತ ಮಟ್ಟದ ತನಿಖೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಆದೇಶಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೋಡಿಮಠದ ಶ್ರೀಗಳ ಭವಿಷ್ಯ: ಭಾರತದ ಪ್ರಮುಖ ನಾಯಕನ ಹತ್ಯೆಗೆ ಸ್ಕೇಚ್

ಧಾರವಾಡ: ಚೋಟು ಗೇಣಿನ ವೀರ, ಭಾರತದ ಕುವರ ತಕ್ಕಡಿಯ ಉರಿನಲ್ಲಿ ವಿಷಪ್ರಾಶನ ಮಾಡುವರು ಎಂದು ಕೋಡಿಮಠದ ...

news

ಜಗದೀಶ್ ಕಾರಂತ ಬಂಧನ: ಕಿಡಿಗೇಡಿಗಳಿಂದ ಕಲ್ಲು ತೂರಾಟ

ಪುತ್ತೂರ್: ಪೊಲೀಸ್ ಅಧಿಕಾರಿಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ...

news

ಮುಂಬೈ ಕಾಲ್ತುಳಿತ ಮಾನವ ನಿರ್ಮಿತ ದುರಂತ: ಸೋನಿಯಾ ಗಾಂಧಿ

ನವದೆಹಲಿ: ಮುಂಬೈನಲ್ಲಿ ನಡೆದ ಕಾಲ್ತುಳಿತ ಮಾನವ ನಿರ್ಮಿತ ದುರಂತ. ಸುರಕ್ಷತೆಯನ್ನು ಮುನ್ನೆಚ್ಚರಿಕೆಯಾಗಿ ...

news

ಮುಂದಿನ ದಸರಾ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿದೆ: ಶೋಭಾ ಕರಂದ್ಲಾಜೆ

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಇಂದು ಸಂಸದೆ ಶೋಭಾ ಕರಂದ್ಲಾಜೆ ಮಾವುತರು, ...

Widgets Magazine
Widgets Magazine