Widgets Magazine
Widgets Magazine

ಪತಿಯ ಎದುರಲ್ಲೇ ಪತ್ನಿಯ ಮೇಲೆ ಎಂಟು ಕಾಮುಕರಿಂದ ಗ್ಯಾಂಗ್‌ರೇಪ್

ಝಾಂಸಿ(ಉತ್ತರಪ್ರದೇಶ):, ಭಾನುವಾರ, 7 ಮೇ 2017 (14:40 IST)

Widgets Magazine

ಎಂಟು ಮಂದಿ ಕಾಮುಕರು ಪತಿಯ ಮುಂದೆಯೇ ಪತ್ನಿಯ ಮೇಲೆ ಅತ್ಯಾಚಾರೆವಸಗಿದ ಹೇಯ ಘಟನೆ ಜಲೌನ್ ಜಿಲ್ಲೆಯಲ್ಲಿ ವರದಿಯಾಗಿದೆ. 
 
ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ನಂತರ ಅವರಲ್ಲಿದ್ದ ಹಣ, ಚಿನ್ನವನ್ನು ದೋಚಿ ಔರಿಯಾ-ಜಲೌನ್ ಹೆದ್ದಾರಿಯ ಬಳಿ ಬಿಟ್ಟು ಪರಾರಿಯಾಗಿದ್ದಾರೆ.
 
 ಜೈಲಾನ್ ಮೂಲದ ದಂಪತಿಗಳು ಕುಶಲಕರ್ಮಿಗಳಾಗಿದ್ದು ಜೈಪುರದಿಂದ ಗುರುವಾರ ಮಧ್ಯರಾತ್ರಿಯ ವೇಳೆಗೆ ರೈಲಿನ ಮೂಲಕ ಅವರು ಅರುರಿಯಾವನ್ನು ತಲುಪಿದರು. ಅಲ್ಲಿಂದ ಲಾರಿ ಚಾಲಕನಿಗೆ ಮನವಿ ಮಾಡುವ ಮೂಲಕ ತಮ್ಮ ಗ್ರಾಮಕ್ಕೆ ತೆರಳಲು ನಿರ್ಧರಿಸಿದ್ದಾರೆ. 
 
ದಂಪತಿಗಳು ಲಾರಿ ಹತ್ತಿದ ಸ್ವಲ್ಪ ಸಮಯದ ನಂತರ, ವಾಹನವನ್ನು ಮದ್ಯದ ಅಂಗಡಿಯ ಮುಂದೆ ನಿಲ್ಲಿಸಲಾಗಿದೆ. ಅಲ್ಲಿದ್ದ ಕೆಲವರು ಲಾರಿಯನ್ನು ಹತ್ತಿದ್ದಾರೆ. ನಂತರ ವಾಹನವನ್ನು ಚಾಲಕ ಏಕಾಂತ ಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದಾನೆ. ಅಲ್ಲಿ ಎಂಟು ಮಂದಿ ಪುರುಷರು ಆಕೆಯ ಪತಿಯನ್ನು ಮರಕ್ಕೆ ಕಟ್ಟಿ ಹಾಕಿ ನಂತರ ಪತ್ನಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ್ದಾರೆ.
 
ಬೆಳಗಿನ ಜಾವ ಸುಮಾರು ಮೂರು ಗಂಟೆಗೆ ದಂಪತಿಗಳು ಪೊಲೀಸ್ ಠಾಣೆಗೆ ತೆರಳಿ ಘಟನೆಯ ಬಗ್ಗೆ ದೂರು ನೀಡಿದ್ದಾರೆ. ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
 
ಅಪರಿಚಿತ ಆರೋಪಿಗಳ ವಿರುದ್ಧ ಗ್ಯಾಂಗ್‌ರೇಪ್, ದರೋಡೆ, ಅಪಹರಣ ಕೇಸ್ ದಾಖಲಿಸಲಾಗಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದು ಹೆಚ್ಚುವರಿ ಪೊಲೀಸ್ ಅಧಿಕಾರಿ ಎಸ್.ಸಿ.ಶಕ್ಯ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಪಿಲ್ ಮಿಶ್ರಾ ಆರೋಪ ಪ್ರತಿಕ್ರಿಯೆ ನೀಡಲು ಯೋಗ್ಯವಲ್ಲ: ಸಿಸೋಡಿಯಾ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2 ಕೋಟಿ ರೂ. ಲಂಚ ಪಡೆದಿದ್ದಾರೆ ಎನ್ನುವ ಆಪ್ ...

news

ಕೇಜ್ರಿವಾಲ್‌ಗೆ ಹಣ ಕೊಟ್ಟಿದ್ದನ್ನು ಕಣ್ಣಾರೆ ನೋಡಿದ್ದೇನೆ: ಕಪಿಲ್ ಮಿಶ್ರಾ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2 ಕೋಟಿ ರೂಪಾಯಿ ಲಂಚದ ಹಣವನ್ನು ಪಡೆದಿರುವುದನ್ನು ...

news

ಪ್ರಧಾನಿ ಮೋದಿಯಿಂದ ಮಾತ್ರ ಕಾಶ್ಮಿರ ಸಮಸ್ಯೆ ಪರಿಹಾರ ಸಾಧ್ಯ: ಮೆಹಬೂಬಾ

ಜಮ್ಮು: ಪ್ರಧಾನಮಂತ್ರಿ ನರೇಂದ್ರ ಮೋದಿಯಿಂದ ಮಾತ್ರ ಕಾಶ್ಮಿರ ಸಮಸ್ಯೆಗೆ ಪರಿಹಾರ ದೊರೆಯಲು ಸಾಧ್ಯ ಎಂದು ...

news

ಸಿಗರೇಟ್‌ಗಾಗಿ ಭಾರತೀಯನನ್ನು ಹತ್ಯೆಗೈದ ಅಮೆರಿಕದ ನಾಗರಿಕ

ಮೊಡೆಸ್ಟೊ(ಅಮೆರಿಕ): ಸಿಗರೇಟು ಖರೀದಿ ಕುರಿತಂತೆ ಉಂಟಾದ ವಾಗ್ವಾದದಿಂದ ಅಮೆರಿಕದ ನಾಗರಿಕನೊಬ್ಬ ಭಾರತೀಯ ...

Widgets Magazine Widgets Magazine Widgets Magazine