ಪತ್ನಿಯರನ್ನು ಅದಲು ಬದಲು ಮಾಡಿ ಒಂದು ರಾತ್ರಿ ಕಳೆಯುವ ಪ್ಲಾನ್ ಮಾಡಿದ ಪತಿರಾಯರು. ಆಮೇಲೆ ಆಗಿದ್ದೇನು ಗೊತ್ತಾ?

ಲಕ್ನೋ, ಶುಕ್ರವಾರ, 7 ಡಿಸೆಂಬರ್ 2018 (11:39 IST)

ಲಕ್ನೋ : ಪತಿಯೊಬ್ಬ ತನ್ನ ಪತ್ನಿಯನ್ನು ಬದಲಿಸಿ ಆಕೆಯ ಸಹೋದರಿ ಜೊತೆ ಒಂದು ರಾತ್ರಿ ಕಳೆಯುವ ಪ್ಲಾನ್ ಮಾಡಿ, ಕೊನೆಗೆ ಅದಕ್ಕೆ ಪತ್ನಿ ನಿರಾಕರಿಸಿದಕ್ಕೆ ಆಕೆಯನ್ನೇ ಕೊಲೆ ಮಾಡಿದ ಘಟನೆ ಬಿಜನೌರ್ ಜಿಲ್ಲೆಯಲ್ಲಿ ನಡೆದಿದೆ.


ವಿಶಾಲ್ ಇಂತಹ ನೀಚ ಕೆಲಸ ಮಾಡಿದ ಪಾಪಿ ಪತಿಯಾಗಿದ್ದು, ಈತನಿಗೆ ತನ್ನ ಪತ್ನಿಯ ಮೇಲೆ ಪ್ರೀತಿ ಇರಲಿಲ್ಲ. ಬದಲಾಗಿ ಆಕೆಯ ಸೋದರಿಯ ಮೇಲೆ ಆಸೆ ಇತ್ತು. ಈ ಕಡೆಯಲ್ಲಿ ಮೃತ ಮಹಿಳೆಯ ಸೋದರಿಯ ಪತಿಗೂ ಕೂಡ ಆಕೆಯ ಮೇಲೆ  ಪ್ರೀತಿ ಇರಲಿಲ್ಲ. ಬದಲಾಗಿ ಮೃತ ಮಹಿಳೆಯ ಮೇಲೆ ಆಸೆ ಇತ್ತು.


ಆದ್ದರಿಂದ ಪತಿ ಮಹಾಶಯರಿಬ್ಬರು ಸೇರಿ ತಮ್ಮ ಪತ್ನಿಯರನ್ನು ಅದಲು ಬದಲು ಮಾಡಿ ಒಂದು ರಾತ್ರಿ ಕಳೆಯಲು ಪ್ಲಾನ್ ಮಾಡಿ ತಮ್ಮ ಪತ್ನಿಯರಿಗೂ ತಿಳಿಸಿದ್ದರು. ಆದರೆ ಇದಕ್ಕೆ ಸೋದರಿ ಒಪ್ಪಿಗೆ ನೀಡಿದ್ದರೂ ಮೃತ ಮಹಿಳೆ ಮಾತ್ರ ಒಪ್ಪಿಕೊಳ್ಳಲಿಲ್ಲ. ಬದಲಾಗಿ ತನ್ನ ಗಂಡನಿಗೆ ಚಪ್ಪಲಿಯಿಂದ ಹೊಡೆದಿದ್ದಳು. ಇದರಿಂದ ಕೋಪಗೊಂಡ ಪತಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.


ಸದ್ಯಕ್ಕೆ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿ ವಿಶಾಲ್ ನನ್ನು ಬಂಧಿಸಿದ್ದಾರೆ. ಹಾಗೇ ವಿಶಾಲ್ ಕೊಲೆ ಮಾಡುವಾಗ ಮೃತ ಮಹಿಳೆಯ ಸಹೋದರಿ ಹಾಗೂ ಪತಿ ಕೂಡ ಅಲ್ಲೇ ಇದ್ದ ಕಾರಣ ಅವರಿಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿದ್ದಗಂಗಾ ಶ್ರೀಗಳ ಆರೋಗ್ಯದ ಬಗ್ಗೆ ಜನರಿಗೆ ಆತಂಕ ಬೇಡ- ಸಿಎಂ ಹೆಚ್.ಡಿ. ಕುಮಾರಸ್ವಾಮಿ

ಚಿಕ್ಕಮಗಳೂರು : ಸಿದ್ದಗಂಗಾ ಶ್ರೀಗಳ ಆರೋಗ್ಯದ ಬಗ್ಗೆ ಜನರಿಗೆ ಆತಂಕ ಬೇಡ ಎಂದು ರಾಜ್ಯದ ಜನತೆಗೆ ಸಿಎಂ ...

news

ಸಿದ್ದಗಂಗಾ ಶ್ರೀಗಳು ಚೆನ್ನೈಗೆ ತೆರಳುತ್ತಿರುವ ಹಿನ್ನಲೆ; ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್ ವೈ

ತುಮಕೂರು : ಹೆಚ್ಚಿನ ಚಿಕಿತ್ಸೆಗಾಗಿ ಸಿದ್ದಗಂಗಾ ಶ್ರೀಗಳನ್ನು ಚೆನ್ನೈ ಗೆ ಕರೆದೊಯ್ಯುತ್ತಿರುವ ...

news

ಹೆಚ್ಚಿನ ಚಿಕಿತ್ಸೆಗಾಗಿ ಸಿದ್ದಗಂಗಾ ಶ್ರೀಗಳನ್ನು ಚೆನ್ನೈಗೆ ಶಿಫ್ಟ್ ಮಾಡಲು ನಿರ್ಧಾರ

ಬೆಂಗಳೂರು : ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಪದೇ ಪದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವ ...

news

ಇಂದು ತೆಲಂಗಾಣ ಹಾಗೂ ರಾಜಸ್ಥಾನ ವಿಧಾನಸಭಾ ಕ್ಷೇತ್ರಗಳ ಚುನಾವಣೆ

ನವದೆಹಲಿ : ಇಂದು ತೆಲಂಗಾಣ ಹಾಗೂ ರಾಜಸ್ಥಾನ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ...

Widgets Magazine