ಪ್ರಥಮ ಪ್ರಜೆಯ ಪ್ರಥಮ ಮಾತು

ನವದೆಹಲಿ, ಮಂಗಳವಾರ, 25 ಜುಲೈ 2017 (14:35 IST)

ನವದೆಹಲಿ:ಸರ್ವಧರ್ಮ ಸಮಾನತೆ, ವಿಭಿನ್ನತೆಯಲ್ಲಿ ಏಕತೆ ನಮ್ಮ ದೇಶದ ಅತಿದೊಡ್ಡ ಶಕ್ತಿ. ಒಬ್ಬರು ಇನ್ನೊಬ್ಬರ ಭಾವನೆಗಳನ್ನು ಗೌರವಿಸುವುದು ಪ್ರಜಾತಂತ್ರದ ವಿಶೇಷ. ಒಗ್ಗಟ್ಟಿನಿಂದ ಕೂಡಿ ಸಾಗಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ನೂತನ ರಾಷ್ಟ್ರಪತಿ ರಾಮನಥ ಕೋವಿಂದ್ ಅಭಿಪ್ರಾಯಪಟ್ಟಿದ್ದಾರೆ.
 
ದೇಶದ 14ನೇ  ರಾಷ್ಟ್ರಪತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ದೇಶವನ್ನುದ್ದೇಶಿಸಿ ಮಾತನಾದಿದ ಅವರು, ರಾಷ್ಟ್ರಪತಿ ಹುದ್ದೆ ನನಗೆ ಸಿಕ್ಕ ಅತೀ ದೊಡ್ಡ ಗೌರವ. ಅತ್ಯಂತ ವಿನಮ್ರತೆಯಿಂದ ಈ ಹುದ್ದೆಯನ್ನು ನಿಭಾಯಿಸುತ್ತೇನೆ ಎಂದು ತಿಳಿಸಿದರು. ಮಾಜಿ ರಾಷ್ಟ್ರಪತಿಗಳಾದ ರಾಜೇಂದ್ರ ಪ್ರಸಾದ್ ರಿಂದ ಹಿಡಿದು ಪ್ರಣಬ್ ದಾ (ಪ್ರಣಬ್  ಮುಖರ್ಜಿ) ಅವರ ವರೆಗಿನ ಎಲ್ಲ ರಾಷ್ಟ್ರಪತಿಗಳು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯುತ್ತೇನೆ. ಎಲ್ಲರೂ ಅತ್ಯುತ್ತಮ ಮಾರ್ಗದರ್ಶಿಗಳಾಗಿದ್ದು, ದೇಶಕಂಡ ಅತ್ಯುತ್ತಮ ನಾಯಕರು. ಅದೇ ಶ್ರೇಷ್ಠತೆಯನ್ನು ಮುಂದುವರೆಸಿಕೊಂಡು ಹೋಗುವ ವಿಶ್ವಾಸ ತಮಗಿದೆ ಎಂದು ತಿಳಿಸಿದರು.
 
ನಾನು ತುಂಬಾ ಪುಟ್ಟ ಕುಗ್ರಾಮದಿಂದ ಬಂದವನಾಗಿದ್ದು, ನನ್ನ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದೇನೆ. ಡಾ.ರಾಧಾಕೃಷ್ಣನ್, ಡಾ,ಎಪಿಜೆ ಅಬ್ದುಲ್ ಕಲಾಂ ಹಾಗೂ ಪ್ರಣಬ್ ಮುಖರ್ಜಿ ಅವರಂತಹ ಧೀಮಂತರು ಸಾಗಿದ  ಹಾದಿಯನ್ನು ಮುನ್ನಡೆಸುಕೊಂದು ಹೋಗಲು ನನಗೆ ಹೆಮ್ಮೆಯಾಗುತ್ತದೆ ಎಂದು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸರಕಾರಕ್ಕೆ ನಮ್ಮ ರೈತರಿಗಿಂತ ತಮಿಳರ ಹಿತರಕ್ಷಣೆ ಮುಖ್ಯ: ಕುಮಾರಸ್ವಾಮಿ ಆಕ್ರೋಶ

ಮೈಸೂರು: ಕಾವೇರಿ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಕೊರತೆಯಿದ್ದರೂ ತಮಿಳುನಾಡಿಗೆ ನೀರು ...

news

ಸುಳ್ಳು ಪ್ರಚಾರದಲ್ಲಿ ಪ್ರಧಾನಿ ಮೋದಿಯದ್ದು ಎತ್ತಿದ ಕೈ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸುಳ್ಳು ಪ್ರಚಾರದಲ್ಲಿ ಪ್ರಧಾನಿ ಮೋದಿಯದ್ದು ಎತ್ತಿದ ಕೈ. ಆದರೆ, ನಾವು ಪ್ರಚಾರ ಮಾಡದೇ ಜನರ ...

news

2 ರೂಪಾಯಿಗಳಿಗಾಗಿ ಮಾಲೀಕನಿಗೆ ಚಾಕುವಿನಿಂದ ಇರಿದ ಗ್ರಾಹಕ

ಲೂಧಿಯಾನಾ: ಅಂಗಡಿ ಮಾಲೀಕನೊಂದಿಗೆ ನಡೆದ ಎರಡು ರೂಪಾಯಿಗಳ ಜಗಳದಲ್ಲಿ ಅಪರಿಚಿತ ಗ್ರಾಹಕನೊಬ್ಬ ಚಾಕುವಿನಿಂದ ...

news

14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಪ್ರಮಾಣ ವಚನ ಸ್ವೀಕಾರ

ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಸತ್ ಭವನದ ಸೆಂಟ್ರಲ್ ...

Widgets Magazine