ನಿತೀಶ್ ಕುಮಾರ್‌ನನ್ನು ಸಿಎಂ ಮಾಡಿದ್ದು ನಾನು: ಲಾಲೂ ಗುಡುಗು

ಪಾಟ್ನಾ, ಬುಧವಾರ, 26 ಜುಲೈ 2017 (15:25 IST)

ನಿತೀಶ್ ಕುಮಾರ್‌ನನ್ನು ಮುಖ್ಯಮಂತ್ರಿ ಮಾಡಿದ್ದು ನಾನು ಎಂದು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗುಡುಗಿದ್ದಾರೆ.
 
ಬಿಜೆಪಿ, ನಿತೀಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಪುತ್ರ ತೇಜಸ್ವಿ ಯಾದವ್ ಅವರ ರಾಜೀನಾಮೆಯನ್ನು ಯಾರೂ ಕೇಳಿಲ್ಲ ಎಂದು ತಿರುಗೇಟು ನೀಡಿದರು.
 
ತೇಜಸ್ವಿ ಯಾದವ್ ಅಪರಾಧಿಯಲ್ಲ. ಯಾವುದೇ ಕಾರಣಕ್ಕೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸಿಎಂ ನಿತೀಶ್ ಕುಮಾರ್‌ಗೆ ನೇರ ಎಚ್ಚರಿಕೆ ನೀಡಿದ್ದಾರೆ.
 
ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ತೇಜಸ್ವಿ ಯಾದವ್ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ದೂರು ದಾಖಲಿಸಿತ್ತು. ದೂರು ದಾಖಲಾದ ಹಿನ್ನೆಲೆಯಲ್ಲಿ ತೇಜಸ್ವಿ ಯಾದವ್ ರಾಜೀನಾಮೆ ನೀಡಬೇಕು ಎಂದು ಜೆಡಿಯು ಒತ್ತಾಯಿಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ನಿತೀಶ್ ಕುಮಾರ್ ಲಾಲು ಪ್ರಸಾದ್ ಯಾದವ್ ಜೆಡಿಯು ಆರ್‌ಜೆಡಿ ತೇಜಸ್ವಿ ಯಾದವ್ Jdu Rjd Nitish Kumar Laluprasad Yadav Tejaswi Yadav

ಸುದ್ದಿಗಳು

news

ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ

ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ...

news

ಆರೆಸ್ಸೆಸ್ ವಿರುದ್ಧ ರಮಾನಾಥ್ ರೈ ಛೂ ಬಿಡಲು ಸಿಎಂ ನಿರ್ಧಾರ

ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಸಚಿವ ರಮಾನಾಥ್ ರೈಗೆ ಕಾಂಗ್ರೆಸ್ ನಾಯಕತ್ವ ನೀಡಲು ನಿರ್ಧರಿಸಲಾಗಿದ್ದು, ...

news

ಸಂಸದ ಅನುರಾಗ್ ಠಾಕೂರ್‌‌ಗೆ ಲೋಕಸಭೆಯ ಸ್ಪೀಕರ್ ವಾರ್ನಿಂಗ್

ನವದೆಹಲಿ: ಸಂಸದ ಅನುರಾಗ್ ಠಾಕೂರ್‌ ಲೋಕಸಭೆಯ ನಿಯಮಗಳನ್ನು ಪಾಲಿಸದಿದ್ದಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ...

news

ರೈಲಿನಲ್ಲಿ ಕೊಟ್ಟ ಬಿರಿಯಾನಿಯಲ್ಲಿತ್ತು ಸತ್ತ ಹಲ್ಲಿ..!

ರೈಲಿನಲ್ಲಿ ಸರಬರಾಜು ಮಾಡುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಲ್ಲ ಎಂದು ಸಂಸತ್ತಿಗೆ ಆಡಿಟರ್ ವರದಿ ...

Widgets Magazine