ಬಿಜೆಪಿ ಸಚಿವನಿಗೆ ಅರ್ಥವಾಗಿಲ್ವಂತೆ ಪ್ರಧಾನಿ ಮೋದಿಯ ಜಿಎಸ್‌ಟಿ

ಭೋಪಾಲ್, ಶುಕ್ರವಾರ, 10 ನವೆಂಬರ್ 2017 (13:51 IST)

ದೇಶದಾದ್ಯಂತ ವಿಪಕ್ಷಗಳು ಜಿಎಸ್‌ಟಿ ಜಾರಿಗೊಳಿಸಿರುವ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವಾಗಲೇ, ಹೌದ್ರಿ ಜಿಎಸ್‌ಟಿ ಎಂದರೆ ನನಗೂ ಅರ್ಥವಾಗಿಲ್ಲ ಎಂದು ಹೇಳಿಕೆ ನೀಡಿದ ಮಧ್ಯಪ್ರದೇಶದ ಸಚಿವ ಓಂ ಪ್ರಕಾಶ್ ಧೂರ್ವೆ ಬಿಜೆಪಿ ಹೈಕಮಾಂಡ್ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.
ಬಿಜೆಪಿ ಸಚಿವರಿಗೆ ಜಿಎಸ್‌ಟಿ ಬಗ್ಗೆ ಅರ್ಥವಾಗಿಲ್ಲ. ಜನಸಾಮಾನ್ಯರಿಗೆ ಹೇಗೆ ಜಿಎಸ್‌ಟಿ ಅರ್ಥವಾಗುತ್ತದೆ. ಪ್ರಧಾನಿ ಮೋದಿಯ ಜಿಎಸ್‌ಟಿ ಯಾರಿಗೂ ಅರ್ಥವಾಗದ ಜಿಎಸ್‌ಟಿ ಎಂದು ವಿಪಕ್ಷಗಳ ಮುಖಂಡರು ಲೇವಡಿ ಮಾಡಿದ್ದಾರೆ. 
 
ನವದೆಹಲಿಯಲ್ಲಿ ಇಂದು ಪ್ರಧಾನಿ ಮೋದಿ ಸಂಪುಟದ ಜಿಎಸ್‌ಟಿ ಸಭೆ ನಡೆಸುವ ಮುನ್ನವೇ, ಜಿಎಸ್‌‌ಟಿ ಅಂದರೇನು ನನಗೇನು ಅರ್ಥವಾಗಿಲ್ಲ. ಅದರ ಬಗ್ಗೆ ನನಗೆ ಹೆಚ್ಚಿನ ತಿಳುವಳಿಕೆಯಿಲ್ಲ. ನೋಟ್ ಬ್ಯಾನ್, ಜಿಎಸ್‌ಟಿ ಅಂಗವಾಗಿ ನಡೆದ ಚರ್ಚಾಸಭೆಯಲ್ಲಿ ಸಚಿವರು ತಮ್ಮ ಜ್ಞಾನವನ್ನು ಬಹಿರಂಗಪಡಿಸಿದ್ದಾರೆ.   
 
ಸಿಎ, ಉದ್ಯಮಿಗಳಿಗೂ ಸಹ ಜಿಎಸ್ ಟಿ ಇನ್ನೂ ಸರಿಯಾಗಿ ಅರ್ಥವಾಗಿಲ್ಲ ಎಂದು ಧೂರ್ವೆ ಹೇಳಿದ್ದು, ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಾಗಲೇ ನನಗೆ ಸಮಾಧಾನವಾಗುತ್ತದೆ ಎಂದು ಸಚಿವ ಓಂ ಪ್ರಕಾಶ್ ಧೂರ್ವೆ ನೀಡಿದ ಹೇಳಿಕೆ ಬಿಜೆಪಿಯಲ್ಲಿಯೇ ಕೋಲಾಹಲ ಸೃಷ್ಟಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿಧಾನಸಭೆ ಚುನಾವಣೆಯಲ್ಲಿ ಪ್ರಜ್ವಲ್ ಸ್ಪರ್ಧಿಸೋಲ್ಲ: ಕುಮಾರಸ್ವಾಮಿ ಸ್ಪಷ್ಟನೆ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರ ಕುಟುಂಬದಿಂದ ಇಬ್ಬರು ಮಾತ್ರ ...

news

ಟಿಪ್ಪು ಜಯಂತಿಗೆ ಬಿಜೆಪಿ ವಿರೋಧ: ಆದ್ರೆ ಬಿಜೆಪಿ ಶಾಸಕನಿಂದಲೇ ಟಿಪ್ಪು ಜಯಂತಿ ಆಚರಣೆ

ಬಳ್ಳಾರಿ: 'ಟಿಪ್ಪು ಸುಲ್ತಾನ್ ಕೊಲೆಗಡುಕ, ದೇಶದ್ರೋಹಿ, ಹಿಂದು ವಿರೋಧಿ ಎಂದು ಬಿಜೆಪಿ ಕಟುವಾಗಿ ...

news

ಯುಎಸ್- ಭಾರತ ವಹಿವಾಟು ಹೆಚ್ಚಿಸಲು ಆದ್ಯತೆ: ಸಿಜಿ ಬುರ್ಗೆಸ್

ನವದೆಹಲಿ: ಅನ್-ಲಾಕ್ ಯು.ಎಸ್.-ಇಂಡಿಯಾ ವಹಿವಾಟು ಸಂಭಾವ್ಯ ನಮ್ಮ ಎರಡು ದೇಶಗಳ ಎದುರಿಸುತ್ತಿರುವ ಅತ್ಯಂತ ...

news

8 ರಾಜ್ಯಗಳಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರು?

ನವದೆಹಲಿ: ದೇಶದ 8 ರಾಜ್ಯಗಳಲ್ಲಿ ಹಿಂದೂ ಧರ್ಮೀಯರಿಗೆ ಅಲ್ಪಸಂಖ್ಯಾತ ಪಟ್ಟ ನೀಡುವ ಬಗ್ಗೆ ಇಂದು ...

Widgets Magazine