Widgets Magazine
Widgets Magazine

ಕೇಜ್ರಿವಾಲ್‌ಗೆ ಹಣ ಕೊಟ್ಟಿದ್ದನ್ನು ಕಣ್ಣಾರೆ ನೋಡಿದ್ದೇನೆ: ಕಪಿಲ್ ಮಿಶ್ರಾ

ನವದೆಹಲಿ, ಭಾನುವಾರ, 7 ಮೇ 2017 (13:41 IST)

Widgets Magazine

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2 ಕೋಟಿ ರೂಪಾಯಿ ಲಂಚದ ಹಣವನ್ನು ಪಡೆದಿರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದು ಮಾಜಿ ಸಚಿವ ಕಪಿಲ್ ಮಿಶ್ರಾ ಗಂಭೀರ ಆರೋಪ ಮಾಡಿದ್ದಾರೆ. 
 
ಸಚಿವ ಸ್ಥಾನದಿಂದ ವಜಾಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯೇಂದ್ರ ಜೈನ್ ಅವರಿಂದ ಕೇಜ್ರಿವಾಲ್ 2 ಕೋಟಿ ರೂಪಾಯಿ ಹಣ ಪಡೆದಿದ್ದಾರೆ. ಹಣವನ್ನು ಯಾಕೆ ಪಡೆದಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಲಿ ಎಂದು ಸವಾಲ್ ಹಾಕಿದರು.
 
ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದೇನೆ. ಕೇಜ್ರಿವಾಲ್ ಎರಡು ಕೋಟಿ ರೂಪಾಯಿ ಲಂಚ ಪಡೆದಿರುವ ಬಗ್ಗೆ ಎಸಿಬಿ ಮತ್ತು ಸಿಬಿಐಗೆ ಮಾಹಿತಿ ನೀಡುತ್ತೇನೆ. ಉಪರಾಜ್ಯಪಾಲರಿಗೆ ಲಂಚದ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
 
ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಸಂಪುಟದಲ್ಲಿ ಬಹುತೇಕ ಸಚಿವರು ಲಂಚದ ಧಂಧೆ ನಡೆಸುತ್ತಿದ್ದಾರೆ.ಅಂತಹ ಸಚಿವರ ಇತಿಹಾಸ ಬಯಲುಗೊಳಿಸುತ್ತೇನೆ ಎಂದು ಮಾಜಿ ಜಲ ಖಾತೆ ಸಚಿವ ಕಪಿಲ್ ಮಿಶ್ರಾ ಗುಡುಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಅರವಿಂದ್ ಕೇಜ್ರಿವಾಲ್ ದೆಹಲಿ ಸಿಎಂ ಕಪಿಲ್ ಮಿಶ್ರಾ ಬಿಜೆಪಿ Bjp Delhi Cm Kapil Mishra Arvind Kejriwal

Widgets Magazine

ಸುದ್ದಿಗಳು

news

ಪ್ರಧಾನಿ ಮೋದಿಯಿಂದ ಮಾತ್ರ ಕಾಶ್ಮಿರ ಸಮಸ್ಯೆ ಪರಿಹಾರ ಸಾಧ್ಯ: ಮೆಹಬೂಬಾ

ಜಮ್ಮು: ಪ್ರಧಾನಮಂತ್ರಿ ನರೇಂದ್ರ ಮೋದಿಯಿಂದ ಮಾತ್ರ ಕಾಶ್ಮಿರ ಸಮಸ್ಯೆಗೆ ಪರಿಹಾರ ದೊರೆಯಲು ಸಾಧ್ಯ ಎಂದು ...

news

ಸಿಗರೇಟ್‌ಗಾಗಿ ಭಾರತೀಯನನ್ನು ಹತ್ಯೆಗೈದ ಅಮೆರಿಕದ ನಾಗರಿಕ

ಮೊಡೆಸ್ಟೊ(ಅಮೆರಿಕ): ಸಿಗರೇಟು ಖರೀದಿ ಕುರಿತಂತೆ ಉಂಟಾದ ವಾಗ್ವಾದದಿಂದ ಅಮೆರಿಕದ ನಾಗರಿಕನೊಬ್ಬ ಭಾರತೀಯ ...

news

ಎಚ್‌ಡಿಕೆ ಮೊದ್ಲು ಗೆಲ್ಲುವ 100 ಅಭ್ಯರ್ಥಿಗಳನ್ನು ತೋರಿಸ್ಲಿ: ಜಮೀರ್ ಸವಾಲ್

ಬೆಂಗಳೂರು: ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮೊದ್ಲು ಗೆಲ್ಲುವ 100 ಅಭ್ಯರ್ಥಿಗಳನ್ನು ...

news

ಬಿಜೆಪಿಯಲ್ಲಿ ಭಿನ್ನಮತವಿಲ್ಲ, ಅಸಮಾಧಾನವಿಲ್ಲ: ಕಟ್ಟಾ

ಮೈಸೂರು: ಬಿಜೆಪಿ ಪಕ್ಷದಲ್ಲಿ ಭಿನ್ನಮತವಿಲ್ಲ ಅಸಮಾಧಾನವಂತೂ ಇಲ್ಲವೇ ಇಲ್ಲ ಎಂದು ಹಿರಿಯ ಬಿಜೆಪಿ ಮುಖಂಡ ...

Widgets Magazine Widgets Magazine Widgets Magazine