ನನ್ನ ಸೆಕ್ಸ್ ವಿಡಿಯೋ ಬಳಸಿ ಒತ್ತಾಯಪೂರ್ವಕವಾಗಿ ಮತಾಂತರ: ಕೇರಳ ಮಹಿಳೆ ದೂರು

ಪಠಾನತಿಟ್ಟ(ಕೇರಳ), ಬುಧವಾರ, 8 ನವೆಂಬರ್ 2017 (18:50 IST)

ಪರಿಚಿತ ವ್ಯಕ್ತಿಯೊಬ್ಬ ನನ್ನೊಂದಿಗೆ ಸೆಕ್ಸ್ ಸುಖ ಪಡೆದು ಅದರ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡು ಒತ್ತಾಯಪೂರ್ವಕವಾಗಿ ಮಾಡಿದ್ದಾನೆ ಎಂದು ಕೇರಳ ಮೂಲದ ಮಹಿಳೆಯೊಬ್ಬಳು ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾಳೆ.
rape
ಆರೋಪಿ ವ್ಯಕ್ತಿ ನನ್ನನ್ನು ಒತ್ತಾಯಪೂರ್ವಕವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿ ಸೌದಿ ಅರೇಬಿಯಾಗೆ ಕರೆದುಕೊಂಡು ಪ್ರತಿನಿತ್ಯ ಅತ್ಯಾಚಾರವೆಸಗಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
 
 ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ಕೇರಳದ ಯುವತಿಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿ ಮಾನವ ಬಾಂಬ್‌ನಂತೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪ ಮಾಡಿರುವ ಸಂದರ್ಭದಲ್ಲಿಯ ಪ್ರಕರಣ ವಿಚಾರಣೆಗೆ ಬಂದಿದೆ.
 
ಆರೋಪಿಯನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದೆ. ಭೇಟಿಯ ನಂತರ ಪರಸ್ಪರ ಪರಿಚಯವಾಗಿತ್ತು. ನನ್ನನ್ನು ವಿವಾಹವಾಗುವುದಾಗಿ ನಂಬಿಸಿ ಪ್ರತಿನಿತ್ಯ ಸೆಕ್ಸ್ ಸುಖ ಅನುಭವಿಸುತ್ತಿದ್ದ. ಇಬ್ಬರ ಸೆಕ್ಸ್ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಮತಾಂತರಗೊಳ್ಳದಿದ್ದಲ್ಲಿ ಇಂಟರ್‌ನೆಟ್‌ನಲ್ಲಿ ಬಿಡುಗಡೆಗೊಳಿಸುವುದಾಗಿ ಬೆದರಿಕೆಯೊಡ್ಡಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. 
 
ಆರೋಪಿ ವ್ಯಕ್ತಿ ಮಾಹಿ ಮೂಲದವನಾಗಿದ್ದು, ಆತನ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಕೇರಳದ ಮಹಿಳೆ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾಳೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಜ್ವಲ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ, ವೈಟ್ ಸಿಗ್ನಲ್ ಕೊಟ್ಟಿಲ್ಲ: ದೇವೇಗೌಡ

ಬೆಂಗಳೂರು: ಪ್ರಜ್ವಲ್ ರೇವಣ್ಣ ವಿಧಾನಸಭೆ ಚುನಾವಣೆ ಸ್ಪರ್ಧೆಗೆ ದೇವೇಗೌಡರು ಗ್ರೀನ್ ಸಿಗ್ನಲ್ ನೀಡಿದ್ದಾರೆ ...

news

ವಿದೇಶಿ ಮಹಿಳೆ ಮೇಲೆ ಅತ್ಯಾಚಾರ: ಆರೋಪಿಗೆ 25 ವರ್ಷ ಕಠಿಣ ಶಿಕ್ಷೆ

ಮೈಸೂರು: ಹರಿಜನ ಹಾಡಿಯ ಅಧ್ಯಯನಕ್ಕೆ ಬಂದಿದ್ದ ಅಮೆರಿಕ ಮೂಲದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ...

news

ಪರೀಕ್ಷೆ ಮುಂದೂಡಲು ಮಗುವನ್ನೇ ಕೊಂದ ಪಿಯು ವಿದ್ಯಾರ್ಥಿ…?!

ನವದೆಹಲಿ: ಗುರುಗ್ರಾಂ ರ್ಯಾನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನಡೆದಿದ್ದ ವಿದ್ಯಾರ್ಥಿ ಪ್ರದ್ಯುಮ್ನ ಠಾಕೂರ್ ...

news

ಬಿಜೆಪಿಯಲ್ಲೇ ಒಬ್ಬರನ್ನು ಕಂಡ್ರೆ ಒಬ್ಬರಿಗೆ ಆಗಲ್ಲ: ಸಿಎಂ

ಬೆಂಗಳೂರು: ಬಿಜೆಪಿಯಲ್ಲೇ ಒಬ್ಬರನ್ನು ಕಂಡ್ರೆ ಒಬ್ಬರಿಗೆ ಆಗಲ್ಲ. ಪರಸ್ಪರರು ಆರೋಪ ಪ್ರತ್ಯಾರೋಪಗಳಲ್ಲಿ ಸಮಯ ...

Widgets Magazine
Widgets Magazine