Widgets Magazine
Widgets Magazine

ಜೀವರಕ್ಷಣೆಗಾಗಿ ಮೊರೆ ಇಡುತ್ತಿರುವ ಹದಿಯಾ ವಿಡಿಯೋ ಬಿಡುಗಡೆ

ಕೇರಳ, ಶುಕ್ರವಾರ, 27 ಅಕ್ಟೋಬರ್ 2017 (15:11 IST)

Widgets Magazine

ಕೇರಳ: ನನ್ನನ್ನು ಇಲ್ಲಿಂದ ಪಾರು ಮಾಡಿ, ಇಲ್ಲದಿದ್ದರೆ ಯಾವ ಹೊತ್ತಿನಲ್ಲೂ ನನ್ನನ್ನು  ಕೊಂದು ಬಿಡುತ್ತಾರೆ ಎಂದು ಅಕಿಲಾ ಅಶೋಕನ್‌ ಅಥವಾ ಹದಿಯಾ ಗೋಗರೆಯುತ್ತಿರುವ ಎರಡನೇ ವಿಡಿಯೋ ಬಿಡುಗಡೆ ಮಾಡಲಾಗಿದೆ.


ಲವ್‌ ಜಿಹಾದ್‌ ಆರೋಪದಲ್ಲಿ ಶಫೀನ್‌ ಜಹಾನ್‌ ಜತೆ ನಡೆದಿರುವ ಮದುವೆಯನ್ನು ಹೈಕೋರ್ಟ್‌ ರದ್ದು ಮಾಡಿದ ಬಳಿಕ ಹದಿಯಾಳನ್ನು ನ್ಯಾಯಾಲಯ ಆಕೆಯ ಹೆತ್ತವರ ವಶಕ್ಕೆ ಒಪ್ಪಿಸಿದೆ.

ಸಾಮಾಜಿಕ ಕಾರ್ಯಕರ್ತ ರಾಹುಲ್‌ ಈಶ್ವರ್‌ ಆ. 17ರಂದು ಚಿತ್ರೀಕರಿಸಿಕೊಂಡಿರುವ ಹದಿಯಾಳ ಎರಡನೇ ವಿಡಿಯೋದಲ್ಲಿ ಆಕೆ ಜೀವ ರಕ್ಷಣೆಗಾಗಿ ಗೋಗರೆಯುತ್ತಿರುವ ದೃಶ್ಯವಿದೆ. "ನೀವು ನನ್ನನ್ನು ಇಲ್ಲಿಂದ ಪಾರು ಮಾಡಲೇಬೇಕು. ಇಲ್ಲದಿದ್ದರೆ ನಾಳೆ ಅಥವಾ ನಾಡಿದ್ದರೊಳಗೆ ಯಾವುದೇ ಹೊತ್ತಿನಲ್ಲಿ ನನ್ನನ್ನು ಕೊಂದುಬಿಡಬಹುದು. ನನ್ನ ತಂದೆಗೆ ವಿಪರೀತ ಸಿಟ್ಟು ಬಂದಿದೆ ಎಂಬುದು ನನಗೆ ಗೊತ್ತಿದೆ. ನಾನು ನಡೆದಾಡಿದಾಗ ಆತ ನನ್ನನ್ನು ಹೊಡೆದು ಕಾಲಿನಿಂದ ತುಳಿಯುತ್ತಾನೆ. ನನ್ನ ತಲೆ ಅಥವಾ ದೇಹದ ಯಾವುದೇ ಭಾಗ ಎಲ್ಲಿಗಾದರೂ ಅಪ್ಪಳಿಸಿತೆಂದರೆ ನಾನು ಸಾಯುವುದು ನಿಶ್ಚಿತ’ ಎಂದು ಹದಿಯಾ ವಿಡಿಯೋದಲ್ಲಿ ಹೇಳಿದ್ದಾಳೆ.

25ರ ಹರೆಯದ ಹದಿಯಾ ಓರ್ವ ಹೊಮಿಯೋಪತಿಕ್‌ ವೈದ್ಯೆ; ಕಳೆದ ವರ್ಷ ಶಾಫೀನ್‌ ಜಹಾನ್‌ ಜತೆಗೆ ಮದುವೆಯಾದ ಬಳಿಕ ಆಕೆ ಇಸ್ಲಾಂ ಗೆ ಮತಾಂತರಗೊಂಡಿದ್ದಳು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಂಬಳ ಆಚರಣೆ ಮುಂದುವರಿಕೆ: ಅಧಿವೇಶನದಲ್ಲಿ ಮಸೂದೆ ಮಂಡನೆ

ಬೆಂಗಳೂರು: ಕರಾವಳಿ ಜಾನಪದ ಕ್ರೀಡೆ ಕಂಬಳ ನಿಷೇಧ ತೆರವು ಕುರಿತ ಆದೇಶಕ್ಕೆ ರಾಷ್ಟ್ರಪತಿ ಅಂಕಿತ ದೊರೆತಿದೆ. ...

news

ಸುನಂದಾ ಪುಷ್ಕರ್ ನಿಗೂಢ ಸಾವು: ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಪಿಐಎಲ್ ವಜಾ

ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣದ ಎಸ್ಐಟಿ ತನಿಖೆ ...

news

ಆಸ್ತಿಗೆ ಸ್ವಾಮೀಜಿ ಹನಿಟ್ರ್ಯಾಪ್ ಆರೋಪ: 4 ವರ್ಷದ ಹಿಂದಿನ ವಿಡಿಯೋ ರಿಲೀಸ್..?

ಬೆಂಗಳೂರು: ಹುಣಸಮಾರನಹಳ್ಳಿಯ ವೀರಶೈವ ಮಠದ ಉತ್ತರಾಧಿಕಾರಿ ದಯಾನಂದ ಸ್ವಾಮಿ ರಾಸಲೀಲೆ ಪ್ರಕರಣ ...

news

ದಯಾನಂದ ಸ್ವಾಮಿ ಸೆಕ್ಸ್ ವಿಡಿಯೋದಲ್ಲಿರುವವಳು ನಾನಲ್ಲ ಎಂದ ನಟಿ

ಬೆಂಗಳೂರು: ಹುಣಸಮಾರನಹಳ್ಳಿ ಸಂಸ್ಥಾನ ಪೀಠದ ಸ್ವಾಮಿ ದಯಾನಂದ ಅವರೊಂದಿಗೆ ಪಲ್ಲಂಗ ಪುರಾಣದಲ್ಲಿ ನಟಿ ...

Widgets Magazine Widgets Magazine Widgets Magazine