ನಿರಾಶ್ರಿತ ಸ್ಲಮ್‌‌ವಾಸಿಗಳಿಗೆ ಆಶ್ರಯ ನೀಡಿದ ಆನಂದ್ ಕುಟುಂಬ

ಚೆನ್ನೈ, ಬುಧವಾರ, 9 ಡಿಸೆಂಬರ್ 2015 (08:31 IST)

ಶತಮಾನದ ಮಹಾಮಳೆಯಿಂದ ನಲುಗಿ ಹೋಗಿರುವ ಚೆನ್ನೈನಲ್ಲಿ ನಿರಾಶ್ರಿತರಿಗೆ  ತಮ್ಮ ಮನೆಯಲ್ಲೇ ನೀಡುವ ಮೂಲಕ ಭಾರತದ ಚೆಸ್ ದಿಗ್ಗಜ ವಿಶ್ವನಾಥನ್ ಮಾನವೀಯತೆ ಮೆರೆದಿದೆ.

 ಆನಂದ್ ಚೆನ್ನೈನಲ್ಲಿಲ್ಲ. ಲಂಡನ್ ಕ್ಲಾಸಿಕ್ ಚೆಸ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ಹಲವು ದಿನಗಳ ಹಿಂದೆ ಇಂಗ್ಲೆಂಡ್‌ಗೆ ತೆರಳಿದ್ದರೂ, ಪತ್ನಿ ಅರುಣಾ ತಮ್ಮ ಮನೆಯ ಬಳಿ ಇರುವ ಸ್ಲಮ್ ನಿವಾಸಿಗಳಿಗೆ  ತಮ್ಮ ನಿವಾಸದಲ್ಲಿಯೇ ಆಶ್ರಯವನ್ನು ನೀಡಿದ್ದಾರೆ.

 ‘4 ವರ್ಷದ ಅಖಿಲ್ (ಆನಂದ್ ಪುತ್ರ) ಹಾಗೂ ಮಾವ ವಿಶ್ವನಾಥನ್ ಅಯ್ಯರ್‌ರನ್ನು ನೋಡಿಕೊಳ್ಳಬೇಕಿರುವ ಕಾರಣ ಪ್ರವಾಹದ ವೇಳೆ ಸಹಾಯ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಸಂತ್ರಸ್ತರಿಗೆ ಮನೆಯಲ್ಲಿ ಆಶ್ರಯ ನೀಡುವ ನಿರ್ಧಾರ ಮಾಡಿದೆವು. ಮೊದಲ ಬಾರಿಗೆ ಪ್ರವಾಹ ಬಂದಾಗಲೇ ನಾವು ಸ್ಲಮ್ ನಿವಾಸಿಗಳಿಗೆ ನಮ್ಮ  ಮನೆಯಲ್ಲಿ ತಂಗಲು ಅವಕಾಶ ನೀಡಿದ್ದೆವು.  ಈಗ ಮತ್ತೆ ಮಹಾಪ್ರವಾಹ  ಬಂದಾಗ ಮತ್ತೆ 15 ರಿಂದ 20  ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿದ್ದೇವೆ. ಅವರಲ್ಲಿ ಇಬ್ಬರು ಗರ್ಭಿಣಿಯರಿದ್ದಾರೆ ಎಂದು ಆನಂದ್ ಪತ್ನಿ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕರ್ತವ್ಯ ನಿರ್ವಹಿಸಿದ್ದಕ್ಕೆ ಕಡ್ಡಾಯ ರಜೆ

ಅತ್ಯಾಚಾರ, ಕೋಮುಗಲಭೆ ಪ್ರಕರಣದ ಆರೋಪಿಯೊಬ್ಬನನ್ನು ಬ೦ಧಿಸಿದ್ದಕ್ಕಾಗಿ ಪೊಲೀಸ್ ಇನ್‍ಸ್ಪೆಕ್ಟರ್ ಒಬ್ಬರನ್ನು ...

news

ಸೋನಿಯಾ ಜನ್ಮದಿನ: ಸಿಎಂ ಸಿದ್ದರಾಮಯ್ಯ ದೆಹಲಿಗೆ

ಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಇಂದು ತಮ್ಮ 68ನೇ ಹುಟ್ಟುಹಬ್ಬವನ್ನಾಚರಿಸಿಕೊಳ್ಳುತ್ತಿದ್ದು, ಅವರಿಗೆ ...

news

ಗುಜರಾತಿನಲ್ಲಿ ಕೋಟ್ಯಧಿಪತಿ ಕಾರ್ಮಿಕರು: ಮಾಲೀಕರಿಗೆ ಸಮಸ್ಯೆ

ಅಹ್ಮದಾಬಾದ್: ಸಾನಂದ್ ಪಟ್ಟಣದಲ್ಲಿ ಅಸಾಮಾನ್ಯ ಎಚ್‌ಆರ್ ಸಮಸ್ಯೆಯನ್ನು ಅಲ್ಲಿನ ಕಾರ್ಖಾನೆಗಳು ...

news

ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳ ದಾಂಧಲೆ

ಮೈಸೂರು: ಮೈಸೂರಿನ ಎಚ್.ಡಿ.ಕೋಟೆಯಲ್ಲಿ ನಾಲ್ಕು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ರೈತರು ಬೆಳೆದಿದ್ದ ...

Widgets Magazine