ಸಚಿವರ ಎದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರೈತ

ಧಾರವಾಡ, ಬುಧವಾರ, 26 ಅಕ್ಟೋಬರ್ 2016 (19:14 IST)

Widgets Magazine

ಜಿಲ್ಲಾ ಉಸ್ತುವಾರಿ ವಿನಯ್ ಕುಲಕರ್ಣಿ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ರೈತನೋರ್ವ್ ರಿವಾಲ್ವರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಆತಂಕದ ಸೃಷ್ಟಿ ನಿರ್ಮಾಣವಾಗಲು ಕಾರಣವಾಗಿದ್ದಾನೆ. ತಾಲ್ಲೂಕಿನ ಉಪ್ಪಿನಬೆಟಗೇರಿಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ. 
ಎಸ್.ಜಿ.ವಿ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದು ಹೆಜ್ಜೆಮೇಳ ಕಾರ್ಯಕ್ರಮದ ಸಂದರ್ಭದಲ್ಲಿ ಉದ್ಘಾಟಕರಾಗಿ ವಿನಯ್ ಕುಲಕರ್ಣಿ ಆಗಮಿಸಿದ್ದರು. 
 
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಲ್ಲೂರ್ ಗ್ರಾಮದ ಸಿದ್ದರಾಮ ದಂಡಿನ ಎಂಬುವವರು ಏಕಾಏಕಿ ಗಾಳಿಯಲ್ಲಿ ಗುಂಡು ಹಾರಿಸಿದಾಗ ಗಾಬರಿಗೊಂಡ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. 
 
ಈ ಕುರಿತು ಪೊಲೀಸರು ಸಿದ್ದರಾಮ ಅವರನ್ನು ಪ್ರಶ್ನಿಸಲಾಗಿ ಅವರು ವಾದಕ್ಕಿಳಿದಿದ್ದಾರೆ. ಸಚಿವರು ಕೂಡ ರೈತನ ಈ ಕೃತ್ಯಕ್ಕೆ ಆಕ್ಷೇಪ ವ್ಯಕ್ತ ಪಡಿಸಿದರು. 
 
ಡಂದಿನ ಪರವಾನಿಗೆ ಹೊಂದಿರುವ ರಿವಾಲ್ವರ್ ಹೊಂದಿದ್ದು, ಹೀಗಾಗಿ ಅವರ ಮೇಲೆ ಕ್ರಮ ಕೈಗೊಳ್ಳದೇ ಕೇವಲ ಎಚ್ಚರಿಕೆ ನೀಡಿ ಕಳುಹಿಸಲಾಯಿತು. 
 
ಖುಷಿಗಾಗಿ ಗುಂಡು ಹಾರಿಸಿದ್ದುದಾಗಿ ಪೊಲೀಸರ ಬಳಿ ಆತ ಹೇಳಿಕೊಂಡಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಟ್ರಿಪಲ್ ತಲಾಖ್ ಮುಸ್ಲಿಮರ ಆಂತರಿಕ ವಿಷಯ: ಆರ್‌ಎಸ್ಎಸ್

ಟ್ರಿಪಲ್ ತಲಾಖ್ ಸಂಬಂಧಿಸಿದಂತೆ ದೇಶಾದ್ಯಂತ ಪರ ವಿರೋಧಗಳು ವ್ಯಕ್ತವಾಗುತ್ತಿದ್ದು ಈ ಕುರಿತು ...

news

ವಿರೋಧದ ಮಧ್ಯೆಯೂ ನ.10 ರಂದು ಟಿಪ್ಪು ಜಯಂತಿ ಆಚರಣೆಗೆ ಸರಕಾರ ನಿರ್ಧಾರ

ವಿರೋಧ ಪಕ್ಷದ ಪ್ರಬಲ ವಿರೋಧದ ನಡುವೆಯೂ ನವೆಂಬರ್ 10ರಂದು ವಿವಾದಿತ ನಾಯಕ ಟಿಪ್ಪು ಸುಲ್ತಾನ್ ಜಯಂತಿ ...

news

ಗುಣಮುಖರಾಗುತ್ತಿದ್ದಾರೆ ಜಯಲಲಿತಾ; ಶೀಘ್ರದಲ್ಲಿ ಮನೆಗೆ

ಕಳೆದ ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ...

news

ಕಾವೇರಿ ಬರಪೀಡಿತ ಪ್ರದೇಶ ಘೋಷಣೆ: ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದ ತಮಿಳುನಾಡು

ಕಾವೇರಿ ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ತಮಿಳುನಾಡು ಸರಕಾರ, ಕಾವೇರಿ ಜಲಾನಯನ ...

Widgets Magazine Widgets Magazine