ಲಾಲು ಯಾದವ್ ಮೇಲೆ ಬಿತ್ತು ಮತ್ತೊಂದು ಇಡಿ ಕೇಸ್

ನವದೆಹಲಿ, ಗುರುವಾರ, 27 ಜುಲೈ 2017 (18:45 IST)

ಮುಖ್ಯಮಂತ್ರಿ ನಿತೀಶ್ ಕುಮಾರ್ ಯಾದವ್ ಮಹಾಮೈತ್ರಿಕೂಟಕ್ಕೆ ಕೈಕೊಟ್ಟು ಎನ್‌ಡಿಎ ತೆಕ್ಕೆಗೆ ಸೇರಿರುವುದನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿರುವ ಲಾಲು ಯಾದವ್‌ಗೆ, ಇದೀಗ ಲಾಲು ವಿರುದ್ಧ ಮತ್ತೊಂದು ಕೇಸ್ ದಾಖಲಿಸಿದೆ.   
 
ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗ, ರೈಲ್ವೆ ಹೋಟೆಲ್ ಹಂಚಿಕೆಯಲ್ಲಿ ಅವ್ಯವಹಾರ ನಡೆದ ಬಗ್ಗೆ ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ಹಣ ದುರುಪಯೋಗವಾಗಿರುವ ಕುರಿತು ಜಾರಿ ನಿರ್ದೇಶನಾಲಯ ಲಾಲು ವಿರುದ್ಧ ಕೇಸ್ ದಾಖಲಿಸಿದೆ.  
 
ಕಳೆದ ತಿಂಗಳು ಸಿಬಿಐ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲು ನಿವಾಸಗಳ ಮೇಲೆ ದಾಳಿ ನಡೆಸಿತ್ತು. ಲಾಲು ಪುತ್ರ ತೇಜಸ್ವಿ ಯಾದವ್‌ರನ್ನು ಸಂಶಯಾತ್ಮಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿತ್ತು. ಸಿಬಿಐ ದಾಳಿ ನೆಪದಲ್ಲಿ ಆರ್‌ಜೆಡಿ ಮತ್ತು ಜೆಡಿಯು ಪಕ್ಷಗಳ ಮೈತ್ರಿಕೂಟವನ್ನು ಛಿದ್ರಗೊಳಿಸಿದ ಸಿಎಂ ನಿತೀಶ್ ಕುಮಾರ್ ಎನ್‌ಡಿಎ ತೆಕ್ಕೆಗೆ ಸೇರ್ಪಡೆಗೊಂಡಿದ್ದಾರೆ.  
 
ನಿನ್ನೆ ಸಂಜೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್ ಕುಮಾರ್, ಇಂದು ಬೆಳಿಗ್ಗೆ 10 ಗಂಟೆಗೆ ಬಿಜೆಪಿ ಬೆಂಬಲ ಪಡೆದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ನಿತೀಶ್ ಕ್ರಮ ಯಾದವ್ ಕುಟುಂಬಕ್ಕೆ ನೀಡಿದ ದೊಡ್ಡ ಆಘಾತ ಎಂದು ಬಿಂಬಿಸಲಾಗಿದೆ. 
 
ಆರಂಭಿಕ ಸಿಬಿಐ ತನಿಖೆ ವರದಿ ಆಧರಿಸಿ ಕಾಯ್ದೆಯಡಿ ಲಾಲು ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ರಾಜಕೀಯ ಬಿಕ್ಕಟ್ಟು ಲಾಲು ಯಾದವ್ ಭ್ರಷ್ಟಾಚಾರ ಜಾರಿ ನಿರ್ದೇಶನಾಲಯ ಸಿಬಿಐ ಹಣ ದುರುಪಯೋಗ Corruption Cbi Political Crisis Enforcement Directorate Money Laundering Lalu Yadav

ಸುದ್ದಿಗಳು

news

ಧರ್ಮಸಿಂಗ್ ಅಂತ್ಯಸಂಸ್ಕಾರ: ಜೇವರ್ಗಿಯಲ್ಲಿ ಭಾರಿ ಪ್ರತಿಭಟನೆ

ಜೇವರ್ಗಿ: ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅಂತ್ಯಸಂಸ್ಕಾರವನ್ನು ಕಲಬುರಗಿಯ ನಾಗನಹಳ್ಳಿಯಲ್ಲಿ ನೆರವೇರಿಸಲು ...

news

ಅವಕಾಶವಾದಿ ನಿತೀಶ್ ಕುಮಾರ್ ನಮ್ಮನ್ನು ವಂಚಿಸಿದ್ರು: ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹಾಮೈತ್ರಿಕೂಟ ತೊರೆದು ಎನ್‌ಡಿಎ ತೆಕ್ಕೆಗೆ ಸೇರ್ಪಡೆಯಾದ ...

news

ಇದೆಂಥ ಹೀನ ಕೃತ್ಯ..ಪಂಚಾಯ್ತಿ ಆದೇಶವೆಂದು ಕುಟುಂಬಸ್ಥರ ಎದುರೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

ಗ್ರಾಮ ಪಂಚಾಯಿತಿ ಸದಸ್ಯರ ಆದೇಶ ಹಿನ್ನಲೆಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಆಕೆಯ ಕುಟುಂಬಸ್ಥರ ಎದುರೇ ...

news

ಮದುವೆಯಾಗುವುದನ್ನು ತಪ್ಪಿಸಲು ಪ್ರಿಯತಮೆಯ ಮೇಲೆ ಗೆಳೆಯರಿಂದ ರೇಪ್ ಮಾಡಿಸಿದ ಪ್ರಿಯಕರ

ಜಲಂಧರ್: ಪ್ರಿಯತಮೆಯೊಂದಿಗೆ ಮದುವೆಯಾಗುವುದನ್ನು ತಪ್ಪಿಸಲು ಪಿತೂರಿ ನಡೆಸಿದ ಆರೋಪದ ಮೇಲೆ ಕಾಲೇಜು ...

Widgets Magazine