ಹೈದ್ರಾಬಾದ್`ನಲ್ಲಿ ಭೀಕರ ಅಪಘಾತ: ಸಚಿವರ ಪುತ್ರ ಸೇರಿ ಇಬ್ಬರ ಸಾವು

ಹೈದ್ರಾಬಾದ್, ಬುಧವಾರ, 10 ಮೇ 2017 (10:54 IST)

Widgets Magazine

ಹೈದ್ರಾಬಾದ್`ನಲ್ಲಿ ಬೆಳ್ಳಂ ಬೆಳಗ್ಗೆ ನಡೆದ ಅಪಘಾತದಲ್ಲಿ ಆಂಧ್ರಪ್ರದೇಶದ ಹಿರಿಯ ಸಚಿವರೊಬ್ಬರ ಪುತ್ರ ದುರ್ಮರಣಕ್ಕೀಡಾಗಿದ್ದಾನೆ. ಆಂಧ್ರದ ಪಾಲಿಕೆ ಆಡಳಿತ ಸಚಿವ ಪಿ. ನಾರಾಯಣ ಪುತ್ರ 22 ವರ್ಷದ ಪಿ. ನಿಶಿತ್ ಸಾವಿಗೀಡಾಗಿದ್ದಾರೆ.
 


ಕಳೆದ ರಾತ್ರಿ ಹೈದ್ರಾಬಾದ್`ನಲ್ಲಿ ಭಾರೀ ಮಳೆ ಸುರಿದಿತ್ತು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಮನೆಗೆ ವಾಪಸ್ಸಾಗುತ್ತಿರುವಾಗ ರಸ್ತೆಯಲ್ಲಿ ನೀರು ತುಂಬಿದ ಗುಂಡಿ ತಪ್ಪಿಸಲು ಹೋಗಿ ಮೆಟ್ರೋ ರೈಲು ಲಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ.

ಇದೇ ಸಂದರ್ಭ ವಿದ್ಯುತ್ ಕಂಬ ಉರುಳಿದ್ದರಿಂದ ಇಡೀ ಪ್ರದೇಶದಲ್ಲಿ ಪವರ್ ಕಟ್ ಆಗಿ ಕಗ್ಗತ್ತಲು ಆವರಿಸಿತ್ತು. ಅಪಘಾತಕ್ಕು ಮುನ್ನ ನಿಶಿತ್ ಮದ್ಯಪಾನ ಮಾಡಿದ್ದರೇ ಎಂಬ ಬಗ್ಗೆ ಪೋಸ್ಟ್ ಮಾರ್ಟಮ್ ವರದಿ ಬಳಿಕವೇ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜುಬಿಲಿ ಹಿಲ್ಸ್ ಪೊಲೀಸರು ಹೇಳುವ ಪ್ರಕಾರ, ನಿಶಿತ್ ಮತ್ತವನ ಸ್ನೇಹಿತ ರಾಜಾ ರವಿ ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಅವರನ್ನ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದರು. ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಆಸ್ಪತ್ರೆಗೆ ದಾಖಲಾದ ಸೋನಿಯಾ ಗಾಂಧಿ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ...

news

ಸತ್ತ ಹೆಂಡತಿಯೊಂದಿಗೆ ಆರು ದಿನ ಒಂದೇ ರೂಂನಲ್ಲಿ ಕಳೆದ!

ಲಂಡನ್: ಪ್ರೀತಿ ಪಾತ್ರರು ಸತ್ತಾಗ ನಮಗೆ ಅತೀವ ದುಃಖವಾಗುವುದು ಸಹಜ. ಅವರನ್ನು ಬೀಳ್ಕೊಡಲು ಮನಸ್ಸಾಗುವುದೇ ...

news

ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ ಕುಲಭೂಷಣ್ ಜಾದವ್

ಇಸ್ಲಾಮಾಬಾದ್: ಬೇಹುಗಾರಿಕಾ ಆರೋಪದಲ್ಲಿ ಪಾಕಿಸ್ತಾನದಲ್ಲಿ ಬಂಧಿತರಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ...

news

ಇದೀಗ ಪಕ್ಕಾ! ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ

ಬೆಂಗಳೂರು: ಅದೆಷ್ಟೋ ವಿದ್ಯಾರ್ಥಿಗಳ ಭವಿಷ್ಯ ನಾಳೆ ಬಯಲಾಗಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದೋ ...

Widgets Magazine Widgets Magazine