ಪಾಕ್‌ನಲ್ಲೂ ಗೋಚರಿಸಲಿದೆ ನಮ್ಮ ತ್ರಿವರ್ಣ ಧ್ವಜದ ಹಾರಾಟ

ಚಂಡೀಗಢ, ಸೋಮವಾರ, 6 ಮಾರ್ಚ್ 2017 (15:40 IST)

Widgets Magazine

ಪಂಜಾಬಿನ ಅಟ್ಟಾರಿ-ವಾಘಾ ಗಡಿಯಲ್ಲಿ ಭಾನುವಾರ ದೇಶದ ಅತೀ ಎತ್ತರದ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಲಾಗಿದ್ದು, ಇದು ಪಕ್ಕದ ಪಾಕಿಸ್ತಾನದ ಲಾಹೋರ್‌ನಲ್ಲೂ ಸಹ ಗೋಚರಿಸಲಿದೆ.

360 ಅಡಿ ಎತ್ತರದ ಈ ಧ್ವಜ ಸ್ತಂಭದ ಮೇಲೆ ಹಾರಾಡುತ್ತಿರುವ ನಮ್ಮ ಹೆಮ್ಮೆಯ ಧ್ವಜ 120 ಅಡಿ ಉದ್ದ ಮತ್ತು 55ಟನ್ ತೂಕವಿದೆ.
 
3.50ಕೋಟಿ ರೂಪಾಯಿ ವೆಚ್ಚ ಮಾಡಿ ಪಂಜಾಬ್ ಸರ್ಕಾರ ಈ ಧ್ವಜವನ್ನು ನಿರ್ಮಿಸಿದೆ.ನಿನ್ನೆ ಪಂಜಾಬ್‌ನ ಸಚಿವ, ಬಿಜೆಪಿ ಹಿರಿಯ ನಾಯಕ ಅನಿಲ್ ಜೋಶಿ ಧ್ವಜವನ್ನು ಅನಾವರಣಗೊಳಿಸಿದರು.
 
ಈ ಬೃಹತ್ ಧ್ವಜ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತ ಪಡಿಸಿರುವ ಪಾಕ್ ಬೇಹುಗಾರಿಕೆ ಉದ್ದೇಶದಿಂದ ಧ್ವಜವನ್ನು ನೆಡಲಾಗಿದೆ ಎಂದಿದೆ. ಅದಕ್ಕೆ ಅಂತರಾಷ್ಟ್ರೀಯ ಗಡಿಯಿಂದ 200ಮೀಟರ್ ಒಳಗಡೆ ಧ್ವಜಸ್ತಂಭವನ್ನು ಸ್ಥಾಪಿಸಲಾಗಿದ್ದು, ಇದರಿಂದ ಯಾವುದೇ ನಿಯಮಗಳ ಉಲ್ಲಂಘನೆಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
 
ಜಾರ್ಖಂಡ್ ನ ರಾಂಚಿಯಲ್ಲಿರುವ 293 ಅಡಿ ಎತ್ತರದ ಇಲ್ಲಿವರೆಗೆ ದೇಶದ ಅತೀ ಎತ್ತರದ ರಾಷ್ಟ್ರಧ್ವಜ ಎನಿಸಿಕೊಂಡಿತ್ತು. 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಎಸ್‌ವೈ ವಿರುದ್ಧ ಕೆಲ ಬಿಜೆಪಿ ಮುಖಂಡರ ಅಸಮಾಧಾನ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾರ್ಯವೈಖರಿಯ ವಿರುದ್ಧ ಅಸಮಾಧಾನಗೊಂಡಿರುವ ಬಿಜೆಪಿ ...

news

ಬಜೆಟ್‌ಗೆ ಮುನ್ನ ಸಚಿವರ ಅಭಿಪ್ರಾಯ ಸಂಗ್ರಹಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಾಮಾನ್ಯ ಬಜೆಟ್ ಮಂಡನೆಗೆ ಮುನ್ನ ಸಚಿವರ ಅಭಿಪ್ರಾಯ ಪಡೆಯುವ ಮೂಲಕ ಸಿಎಂ ಸಿದ್ದರಾಮಯ್ಯ ಹೊಸ ...

news

ಪ್ರಚಾರದ ಮಧ್ಯೆ ದನಕರುಗಳಿಗೆ ಹುಲ್ಲು, ಬೆಲ್ಲ ತಿನ್ನಿಸಿದ ಪ್ರಧಾನಿ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಪ್ರಚಾರದಲ್ಲಿ ನಿರತರಾಗಿರುವ ಪ್ರಧಾನಿ ಮೋದಿ ಇಂದು ...

news

ಕೊಟ್ಟೂರೇಶ್ವರ ರಥ ಪತನ: ಭಕ್ತರ ರಕ್ಷಣೆಗೆ ನಡೆದಿತ್ತು ಪವಾಡ

ಕಳೆದ ಕೆಲ ದಿನಗಳ ಹಿಂದೆ ಬಳ್ಳಾರಿಯ ಕೊಟ್ಟೂರೇಶ್ವರ ಜಾತ್ರೆಯಲ್ಲಿ ರಥ ನೆಲಕ್ಕಪ್ಪಳಿಸಿದ ಘಟನೆ ರಾಜ್ಯಾದ್ಯಂತ ...

Widgets Magazine Widgets Magazine