ಹಿಂದುಗಳಿಗೆ ಭಾರತ ಏಕಮಾತ್ರ ದೇಶವಾಗಿದೆ, ಮುಸ್ಲಿಮರಿಗೆ 50 ಕ್ಕೂ ಹೆಚ್ಚು ದೇಶಗಳಿವೆ: ಶಿವಸೇನೆ

ಮುಂಬೈ, ಸೋಮವಾರ, 30 ಅಕ್ಟೋಬರ್ 2017 (15:37 IST)

ಕೇಂದ್ರದಲ್ಲಿ ಹಿಂದುತ್ವದ ಪರ ಸರಕಾರವಿದ್ದರೂ ಅಯೋಧ್ಯೆಯ ಮತ್ತು ಕಾಶ್ಮಿರಿ ಪಂಡಿತರ ಸಮಸ್ಯೆಗಳನ್ನು ಇತ್ಯರ್ಥ್ಯಗೊಳಿಸಲು ಸಾಧ್ಯವಾಗಿಲ್ಲ ಎಂದು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಮಿತ್ರಪಕ್ಷವಾದ ಶಿವಸೇನೆ ವಾಗ್ದಾಳಿ ನಢೆಸಿದೆ.
ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಇತ್ತೀಚೆಗೆ ನೀಡಿದ ಹಿಂದುಸ್ತಾನ್ ಹಿಂದುಗಳ ದೇಶ. ಆದರೆ. ಇದರ್ಥ ಭಾರತ ಬೇರೆಯವರಿಗೆ ಸೇರಿದ್ದಲ್ಲ ಎಂದರ್ಥವಲ್ಲ ಎನ್ನುವ ಹೇಳಿಕೆ ವಿರುದ್ಧ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ. 
 
ಹಿಂದೂಗಳಂತೆ ಭಾರತವು ಇತರರಿಗೆ ಸೇರಿದ್ದಾಗಿದೆ. ಆದರೆ, ಭಾರತ ಮೊದಲು ಹಿಂದುಗಳಿಗೆ ಸೇರಿದೆ ನಂತರ ಇತರ ಧರ್ಮದವರಿಗೆ ಸೇರಿದ್ದಾಗಿದೆ. ಯಾಕೆಂದರೆ ಮುಸ್ಲಿಮರಿಗೆ ವಲಸೆ ಹೋಗಲು ಜಗತ್ತಿನಲ್ಲಿ 50 ಕ್ಕೂ ಹೆಚ್ಚು ಮುಸ್ಲಿಂ ದೇಶಗಳಿವೆ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
 
ಕ್ರಿಶ್ಚಿಯನ್ನರಿಗೆ ಅಮೆರಿಕ, ಯುರೋಪ್ ದೇಶಗಳಿವೆ. ಬುದ್ದರಿಗೆ ಚೀನಾ, ಜಪಾನ್ , ಶ್ರೀಲಂಕಾ ಮತ್ತು ಮ್ಯಾನ್ಮಾರ್‌ನಂತಹ ದೇಗಳಿವೆ. ಆದರೆ, ಹಿಂದುಗಳಿಗೆ ಭಾರತ ಏಕಮಾತ್ರ ದೇಶವಾಗಿದೆ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಗುವಿಗೆ ವಿಷಪೂರಿತ ಚಿಪ್ಸ್ ನೀಡಿ ಕೊಂದ ಆಶಾ ಕಾರ್ಯಕರ್ತೆ

ಆಂಧ್ರ ಪ್ರದೇಶ: ಆಶಾ ಕಾರ್ಯಕರ್ತೆ ನೀಡಿದ ಚಿಪ್ಸ್ ಸೇವಿಸಿ 4 ವರ್ಷದ ಮಗು ಮೃತಪಟ್ಟಿರುವ ಘಟನೆ ಪ್ರಕಾಶಂ ...

news

ಪತ್ರಕರ್ತರ ಪ್ರಶ್ನೆಗೆ ಸಿಟ್ಟಾಗಿ ಕೈಮುಗಿದು ಹೊರ ನಡೆದ ಅನುಪಮಾ ಶೆಣೈ

ಬಳ್ಳಾರಿ: ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿಟ್ಟಾದ ಮಾಜಿ ಡಿವೈಎಸ್ಪಿ ಅನುಪಮಾ ಶೇಣೈ ಕೈ ಮುಗಿದು ಅರ್ಧಕ್ಕೆ ...

news

ಬಾಯ್‌ಫ್ರೆಂಡ್‌ನನ್ನು ಪತ್ತೆ ಹಚ್ಚಲು ಗ್ಯಾಂಗ್‌ರೇಪ್ ಕೇಸ್ ದಾಖಲಿಸಿದ ಯುವತಿ

ಪುಣೆ: ಫೋನ್ ಕರೆಗಳನ್ನು ಸ್ವೀಕರಿಸದೇ ನಾಪತ್ತೆಯಾಗಿದ್ದ ಬಾಯ್‌ಫ್ರೆಂಡ್‌ ವಂಚನೆಯಿಂದ ಆಕ್ರೋಶಗೊಂಡ 24 ...

news

ಮಂಗಳೂರು ಎಳನೀರು ಸವಿಗೆ ಮನಸೋತ ಪ್ರಧಾನಿ ಮೋದಿ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಹನಿ ನೀರು ಸೇವಿಸದೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಮಂಜುನಾಥ ದೇವರ ...

Widgets Magazine
Widgets Magazine