ಮಲಬಾರ್ ಎಕ್ಸರ್ಸೈಸ್: ಭಾರತ-ಅಮೆರಿಕ- ಜಪಾನ್‌ ಸಮರಾಭ್ಯಾಸ ಆರಂಭ

ನವದೆಹಲಿ, ಸೋಮವಾರ, 10 ಜುಲೈ 2017 (11:11 IST)

ನವದೆಹಲಿ:ಭಾರತ-ಅಮೆರಿಕ- ಜಪಾನ್‌ ರಾಷ್ಟ್ರಗಳು ಇಂದಿನಿಂದ10 ದಿನಗಳ ಕಾಲ ಬಂಗಾಲಕೊಲ್ಲಿಯಲ್ಲಿ ನಡೆಸಲಿವೆ. ಅತ್ತ ಚೀನ ಮತ್ತು ಪಾಕಿಸ್ಥಾನ ಭಾರತವನ್ನು ಕೆಣಕುತ್ತಿರುವ ನಡುವೆಯೇ ತ್ರಿರಾಷ್ಟ್ರಗಳ ಸಮರಾಭ್ಯಾಸ ಚೀನಾ ಹಾಗೂ ಪಾಕಿಸ್ತಾನಕ್ಕೆ ಆತಂಕ ಸೃಷ್ಟಿಸಿದೆ.  
 
ದಕ್ಷಿಣ ಚೀನ ಸಮುದ್ರ ವ್ಯಾಪ್ತಿ ಯಲ್ಲಿರುವ ದ್ವೀಪ ಸಮೂಹದ ಮೇಲೆ ಚೀನ ಈಗಾಗಲೇ ಸ್ಥಾಪಿಸಿದ ಆಧಿಪತ್ಯಕ್ಕೆ ನಿಯಂತ್ರಣ ಹೇರುವುದು.  ಪಾಕಿಸ್ಥಾನಕ್ಕೆ ಬೆಂಬಲ ಕೊಡದಂತೆ ಪರೋಕ್ಷ ಎಚ್ಚರಿಕೆ ಹಾಗೂ ಭಾರತ-ಚೀನ ನಡುವಿನ ಹಾಲಿ ಗಡಿ ವಿವಾದದ ಮೇಲೆ ಪ್ರಭಾವ ಬೀರುವುದು ಈ ಬಾರಿಯ ಸಮರಾಭ್ಯಾಸದ ಮಹತ್ವವಾಗಿದೆ.
 
ತ್ರಿರಾಷ್ಟ್ರ ಸಮರಾಭ್ಯಾಸದಲ್ಲಿ ಭಾರತದ ಐಎನ್‌ಎಸ್‌ ವಿಕ್ರಮಾದಿತ್ಯ- ಭಾರತದ ನೌಕಾಪಡೆಯ ದೊಡ್ಡ ಯುದ್ಧ ವಿಮಾನ ವಾಹಕ ನೌಕೆ ಮಿಗ್‌ 29ಕೆ ಕೂಡ ಇರಲಿದೆ, 02- ಶಿವಾಲಿಕ್‌ ಬಹು ಹಂತದ ಯುದ್ಧ ನೌಕೆ, ಐಎನ್‌ಎಸ್‌ ಜ್ಯೋತಿ, ಪಿ8ಐ ಕಡಲ ಸಂಬಂಧಿ ಯುದ್ಧ ವಿಮಾನ, ಸಬ್‌ಮೆರಿನ್‌ ದಾಳಿ ಎದುರಿಸುವ ಸಣ್ಣ ನೌಕೆಗಳು ಪಾಲ್ಗೊಳ್ಳುತ್ತಿವೆ. ಅಮೆರಿಕದ ಯುಎಸ್‌ಎಸ್‌ ನಿಮಿಟ್ಜ್, ಯುಎಸ್‌ಎಸ್‌ ಪ್ರಿನ್ಸ್‌ಟನ್‌- ಕ್ಷಿಪಣಿ ವಾಹಕ ನೌಕೆ, ಯುಎಸ್‌ಎಸ್‌ ಹೊವಾರ್ಡ್‌,  ಶೌಪ್‌ ಮತ್ತು ಕಿಡ್‌ ಕ್ಷಿಪಣಿ ನಾಶಕ ನೌಕೆಗಳು, ಲಾಸ್‌ ಏಂಜಲಿಸ್‌- ಸಬ್‌ಮೆರಿನ್‌, ಪಿ-8ಎ ಪೊಸೈಡಾನ್‌- ಯುದ್ಧ ವಿಮಾನ ಭಾಗವಹಿಸುತ್ತಿವೆ. ಇನ್ನು ಜಪಾನ್ ನ ಜೆಎಸ್‌ ಇಜೊ¾à- ಯುದ್ಧ ನೌಕೆ, ಜೆಎಸ್‌ ಸಜಾನಮಿ- ಯುದ್ಧ ನೌಕೆಗಳು ಪಾಲ್ಗೊಳ್ಳುತ್ತಿವೆ.
 ಇದರಲ್ಲಿ ಇನ್ನಷ್ಟು ಓದಿ :  
ಸಮರಾಭ್ಯಾಸ ಮಲಬಾರ್ ಎಕ್ಸರ್ಸೈಸ್ India-japan-us ಭಾರತ-ಅಮೆರಿಕ- ಜಪಾನ್‌ Malabar 2017 Naval Exercises Malabar Exercise

ಸುದ್ದಿಗಳು

news

ರೈಲಿನಲ್ಲಿ ಮಹಿಳೆಯರ ಮುಂದೆಯೇ ಹಸ್ತ ಮೈಥುನ ಮಾಡಿದ ಕಾಮುಕ..!

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ವ್ಯಕ್ತಿಯೊಬ್ಬ ಮುಂಬೈ ರೈಲಿನಲ್ಲಿ ಮಹಿಳೆಯರ ಮುಂದೆಯೇ ಹಸ್ತಮೈಥುನ ಮಾಡಿರುವ ...

news

ಬಂಟ್ವಾಳದ ಬಿಸಿಗೆ ಶಾಕ್ ಹೊಡೆಸಿಕೊಂಡ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಂಟ್ವಾಳದಲ್ಲಿ ನಡೆದ ಶರತ್ ಮಡಿವಾಳ ಪ್ರಕರಣದ ನಂತರ ಸಿಎಂ ಸಿದ್ದರಾಮಯ್ಯ ದಕ್ಷಿಣ ಕನ್ನಡ ...

news

ಚೀನಾ ಬೆದರಿಕೆಗೆ ಬಗ್ಗದ ಭಾರತ: ಡೋಕ್ಲಾಮ್ ಗಡಿಯಲ್ಲಿ ಟೆಂಟ್ ಹಾಕಿದ ಸೇನೆ

ಉಭಯ ದೇಶಗಳ ಗಡಿ ಬಿಕ್ಕಟ್ಟು ಮುಂದುವರೆದಿರುವ ಹಿನ್ನಲೆಯಲ್ಲಿ ಗಡಿ ಬಿಟ್ಟು ಹೋಗಿ ಇಲ್ಲವೇ ಯುದ್ಧ ಎದುರಿಸಲು ...

news

ವಿಜಯ್ ಮಲ್ಯಗೆ ಇಂದು ಶಿಕ್ಷೆ ಪ್ರಕಟಿಸಲಿರುವ ಸುಪ್ರೀಂಕೋರ್ಟ್

ಮದ್ಯ ದೊರೆ ವಿಜಯ್ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ...

Widgets Magazine