ಅಮೆರಿಕಕ್ಕೆ ತೆರಳಲು ಭಾರತೀಯರ ಹಿಂದೇಟು: ಸುಷ್ಮಾ ಸ್ವರಾಜ್`ಗೆ ಮೊರೆ

ನವದೆಹಲಿ, ಸೋಮವಾರ, 6 ಮಾರ್ಚ್ 2017 (12:49 IST)

ನವದೆಹಲಿ(ಮಾ.06): ಅಮೆರಿಕದಲ್ಲಿ ಒಂದರ ಹಿಂದೊಂದರಂತೆ ಭಾರತೀಯರ ಮೇಲೆ ನಡೆಯುತ್ತಿರುವ ಜನಾಂಗೀಯ ದಾಳಿಗಳ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ತೆರಳಲು ಭಾರತೀಯರು ಹಿಂದೇಟು ಹಾಕುತ್ತಿದ್ದಾರೆ. ವರ್ಷಕ್ಕೆ ಸರಿ ಸುಮಾರು 10 ಲಕ್ಷ ಮಂದಿ ಭಾರತದಿಂದ ಅಮೆರಿಕಕ್ಕೆ ಹೋಗಿ ಬರುತ್ತಾರೆ. ಆದರೆ, ಕನ್ಸಾಸ್`ನಲ್ಲಿ ಶ್ರೀನಿವಾಸ್ ಹತ್ಯೆ, ಉದ್ಯಮಿ ಮೇಲೆ ಗುಂಡಿನ ದಾಳಿ ಮತ್ತು ಟ್ರೇನಿನಲ್ಲಿ ಮಹಿಳೆ ಮೇಲೆ ದೌರ್ಜನ್ಯ. ಸಿಖ್ ವ್ಯಕ್ತಿ ಮೇಲೆ ಗುಂಡಿನ ದಾಳಿ. ಈ 4 ಪ್ರಕರಣಗಳು ಜನಾಂಗೀಯ ದಾಳಿ ಎಂಬುದು ಸ್ಪಷ್ಟವಾಗಿದೆ ದಾಳಿಗೂ ಮುನ್ನ ನಮ್ಮ ದೇಶಬಿಟ್ಟು ನಿಮ್ಮ ದೇಶಕ್ಕೆ ಹೋಗಿ ಎಂದು ಕೂಗಾಡಿದ್ದಾರೆ. ಹೀಗಾಗಿ, ಅಮೆರಿಕಕ್ಕೆ ತೆರಳುವ ಯೋಜನೆ ಇದ್ದ ಹಲವರು ಹಿಂದೇಟು ಹಾಕಿದ್ದಾರೆ. ಅಮೆರಿಕಕ್ಕೆ ತೆರಳುವವರಿಗೆ ಟ್ರಾವೆಲ್ಲರ್ ವಾರ್ನಿಂಗ್ ನೀಡುವಂತೆ ಟ್ವಿಟ್ಟರ್`ನಲ್ಲಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನ ಒತ್ತಾಯಿಸಿದ್ದಾರೆ.`ಈ ಹಿಂದೆ ಯಾವತ್ತೂ ಭಯಗ್ರಸ್ಥ ಸ್ಥಳವಾಗಿರಲಿಲ್ಲ.  ಜನಾಂಗೀಯ ದಾಳಿಗಳು ನಡೆದ ಬಳಿಕ ಻ಲ್ಲಿಗೆ ತೆರಳುವ ಮುನ್ನ ನಾನು 2 ಬಾರಿ ಯೋಚಿಸುವಂತಾಗಿದೆ’ ಮುಂಬೈನ ಪತ್ರಿಕೋದ್ಯಮ ವಿದ್ಯಾರ್ಥಿ ಅನ್ಮೋಲ್ ಅಲ್ಫಾನ್ಸೋ ಟ್ವಿಟ್ ಮಾಡಿದ್ದಾರೆ.ಅಮೆರಿಕ ದಾಳಿಗಳು ದೈಹಿಕವಾಗಿವೆ. ಅಲ್ಲಿ ನಮ್ಮನ್ನ ನಿಂದಿಸುವುದಷ್ಟೇ ಅಲ್ಲ, ಪ್ರಾಣವನ್ನೇ ತೆಗೆದುಬಿಡುತ್ತಿದ್ದಾರೆ ಎಂದು ಭಯ ವ್ಯಕ್ತಪಡಿಸಿದ್ದಾರೆ.
 
ವರ್ಜಿನಿಯಾದಲ್ಲಿರುವ ನನ್ನ ಸಹೋದರಿಯನ್ನ ನೋಡಲು ಜೂನ್`ನಲ್ಲಿ ತೆರಳುವ ಯೋಜನೆ ಇತ್ತು. ನನ್ನ ಯೋಜನೆಯನ್ನ ಮರುಪರಿಶೀಲಿಸುತ್ತಿದ್ದೇನೆ. 8 ವರ್ಷದಿಂದ ಅಲ್ಲಿರುವ ನನ್ನ ಸೋದರಿಯ ಭದ್ರತೆ ಬಗ್ಗೆಯೂ ಆತಂಕ ಕಾಡುತ್ತಿದೆ ಎಂದು ದೆಹಲಿ ವಿವಿ ವಿದ್ಯಾರ್ಥಿ ಪವನ್ ಶುಕ್ಲಾ ಹೇಳಿದ್ದಾರೆ.

ಹೀಗೆ ಒಂದಲ್ಲ ಎರಡಲ್ಲ ಹತ್ತಾರು ಮಂದಿ ಅಮೆರಿಕ ಭೆಟಿಯ ಬಗ್ಗೆ ಆತಂಕಗೊಂಡು ಸುಷ್ಮಾ ಸ್ವರಾಜ್`ಗೆ ಟ್ವಿಟ್ ಮಾಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲಾಲ್ ಬಹದ್ದೂರ್ ಶಾಸ್ತ್ರಿ ನಿವಾಸಕ್ಕೆ ಭೇಟಿ ನೀಡಿದ ಮೋದಿ

ವಾರಣಾಸಿ: ಉತ್ತರಪ್ರದೇಶ ಚುನಾವಣೆ ಪ್ರಚಾರಕ್ಕಾಗಿ ಆಗಮಿಸಿದ ಪ್ರದಾನಿ ಮೋದಿ, ದಿವಂಗತ ಮಾಜಿ ಪ್ರದಾನಿ ಲಾಲ್ ...

news

122 ಶಾಸಕರಿಗೂ ನೆಮ್ಮದಿಯಿಂದ ಇರಗೊಡುವುದಿಲ್ಲ ಜಯಾ ಆತ್ಮ

ಮಾಜಿ ಮುಖ್ಯಮಂತ್ರಿಗಳಾದ ಎಂ.ಜಿ ರಾಮಚಂದ್ರನ್ ಮತ್ತು ಜೆ. ಶಶಿಕಲಾ ಅವರ ಆತ್ಮಗಳು ವಿ,ಕೆ ಶಶಿಕಲಾ ಅವರ ಪರ ...

news

ಮತ್ತೊಂದು ಗುದ್ದೋಡು ಪ್ರಕರಣ: ಬಾಲಕ ದುರ್ಮರಣ

ನವದೆಹಲಿಯಲ್ಲಿ ಮತ್ತೊಂದು ಗುದ್ದೋಡು ಪ್ರಕರಣ ನಡೆದಿದ್ದು ವೇಗವಾಗಿ ಬಂದ ಮರ್ಸಿಡಿಸ್‌ಗೆ ಯುವಕ ...

news

ಪುನುಗು ಬೆಕ್ಕಿಗಾಗಿ ಟಿಟಿಡಿ ಮತ್ತು ಅರಣ್ಯ ಇಲಾಖೆ ಗುದ್ದಾಟ

ಆಂಧ್ರಪ್ರದೇಶದ ಅರಣ್ಯ ಇಲಾಖೆ ಮತ್ತು ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ನಡುವೆ ಜಟಾಪಟಿ ಶುರುವಾಗಿದೆ. ಅದು ...

Widgets Magazine