ಅಸಹಿಷ್ಣುತೆ, ನಿರುದ್ಯೋಗ ದೇಶದ ಬಹುದೊಡ್ಡ ಸಮಸ್ಯೆಗಳು: ರಾಹುಲ್ ಗಾಂಧಿ

ವಾಷಿಂಗ್ಟನ್, ಮಂಗಳವಾರ, 19 ಸೆಪ್ಟಂಬರ್ 2017 (15:58 IST)

Widgets Magazine

ಅಸಹಿಷ್ಣುತೆ ಮತ್ತು ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಅಭಿವೃದ್ಧಿಗೆ ಗಂಭೀರ ಸವಾಲನ್ನುಂಟು ಮಾಡುವ ಪ್ರಮುಖ ಸಮಸ್ಯೆಗಳಾಗಿವೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಸೆಂಟರ್‌ ಫಾರ್ ಅಮೆರಿಕನ್ ಪ್ರೊಗ್ರೆಸ್ ಭಾರತ ಮತ್ತು ದಕ್ಷಿಣ ಏಷ್ಯಾದ ಸರಣಿ ಸಭೆಗಳಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದು ಎರಡು ವಾರಗಳವರೆಗೆ ಮತ್ತಷ್ಟು ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. 
 
ಅಮೆರಿಕದ ಮಾಜಿ ರಾಯಭಾರಿ ರಿಚರ್ಡ್ ವೆರ್ಮಾ ಮತ್ತು ಹಿಲರಿ ಕ್ಲಿಂಟನ್, ಉನ್ನತ ಅಭಿಯಾನದ ಸಲಹೆಗಾರ ಜಾನ್ ಪೊಡೆಸ್ತಾ ಸಿಎಪಿ ಮುಖ್ಯಸ್ಥ ನೀರಾ ಟಂಡನ್ ಸಭೆಯಲ್ಲಿ ಪಾಲ್ಗೊಂಡಿದ್ದರು.
 
ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ದಕ್ಷಿಣ ಏಷ್ಯಾ ವಿಭಾಗದ ಮುಖ್ಯಸ್ಥರಾದ ಲಿಸಾ ಕುರ್ಟಿಸ್ ಉಪಹಾರ ಸಭೆಯಲ್ಲಿ ಗಾಂಧಿಯವರೊಂದಿಗೆ ಚರ್ಚೆ ನಡೆಸಿದರು ಎನ್ನಲಾಗಿದೆ. 
 
ಯುಎಸ್ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ (ಯುಎಸ್ಐಬಿಸಿ) ಆಯೋಜಿಸಿದ್ದ ಸಮಾರಂಭದಲ್ಲಿ ಅಮೆರಿಕ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮತ್ತು ಸಿಇಒ ಥಾಮಸ್ ಜೆ ಡೊನೊಹುವೆ ಗಾಂಧಿ ಮತ್ತು ಇತರ ಹಿರಿಯ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮೇಯರ್ ಪದ್ಮಾವತಿ ನೀಡಿದ 5 ಲಕ್ಷ ರೂ ಚೆಕ್ ಬೌನ್ಸ್

ಬೆಂಗಳೂರು: ಬಿಬಿಎಂಪಿ ಮೇಯರ್ ಪದ್ಮಾವತಿ ಮರ ಬಿದ್ದು ಸಾವನ್ನಪ್ಪಿದ ಜಗದೀಶ್ ಪತ್ನಿ ರೂಪಾಗೆ ನೀಡಿದ್ದ 5 ...

news

ರಾಮಲಿಂಗಾರೆಡ್ಡಿಗೆ ಸಂಸದೆ ಶೋಭಾ ಕರಂದ್ಲಾಜೆ ಸವಾಲ್

ಭಟ್ಕಳ್: ಕೇಂದ್ರ ಸರಕಾರ ರಾಜ್ಯದ ಕಾಂಗ್ರೆಸ್ ನಾಯಕರ ಫೋನ್ ಕದ್ದಾಲಿಕೆ ಮಾಡುತ್ತಿದೆ ಎನ್ನುವ ಆರೋಪ ...

news

ಮೆಡಿಕಲ್ ಸೀಟ್ ಸಿಗದಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಪಾಪಿ ಪತಿ

ಹೈದರಾಬಾದ್: ಮೆಡಿಕಲ್ ಸೀಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನ ಕೊಂದು ಪತಿಯೇ ಬೆಂಕಿ ಹಚ್ಚಿರುವ ಘಟನೆ ...

news

ನಾನು ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲಿ ನಿಂತ್ರೂ ಗೆಲ್ಲುತ್ತೇನೆ: ಸಿಎಂ

ಬೆಂಗಳೂರು: ನಾನು ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲಿ ನಿಂತ್ರೂ ಗೆಲ್ಲುತ್ತೇನೆ. ನಾನು ಎಲ್ಲಿ ...

Widgets Magazine