ಚೆನ್ನೈ: ಐಟಿ ದಾಳಿ ಬಿಜೆಪಿ-ಆರೆಸ್ಸೆಸ್ ಷಡ್ಯಂತ್ರ: ಎಐಎಡಿಎಂಕೆ

ಚೆನ್ನೈ, ಶುಕ್ರವಾರ, 7 ಏಪ್ರಿಲ್ 2017 (14:00 IST)

Widgets Magazine
aiadmk

ನಗರದಲ್ಲಿ ಇಂದು 32 ಕಡೆ ನಡೆದ ಐಟಿ ದಾಳಿಯ ಹಿಂದೆ ಬಿಜೆಪಿ, ಆರೆಸ್ಸೆಸ್ ಕೈವಾಡವಿದೆ ಎಂದು ಎಐಎಡಿಎಂಕೆ ಮುಖಂಡ ಆರೋಪಿಸಿದ್ದಾರೆ.
 
ಎಐಎಡಿಎಂಕೆ ಪಕ್ಷವನ್ನು ಮುಗಿಸಲು ಬಿಜೆಪಿ-ಆರೆಸ್ಸೆಸ್ ಷಡ್ಯಂತ್ರ ರೂಪಿಸಿದೆ ಎಂದು ಎಐಎಡಿಎಂಕೆ ಸಂಸದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ದಿವಂಗತ ಮಾಜಿ ಸಿಎಂ ಜಯಲಲಿತಾ ನಿಧನದಿಂದ ತೆರುವಾದ ಆರ್‌.ಕೆ.ನಗರ್ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಹಣ ಸಂಗ್ರಹಸಿದ್ದಾರೆ ಎನ್ನುವ ಶಂಕೆಯಿಂದ ಐಟಿ ದಾಳಿ ನಡೆದಿದೆ ಎನ್ನಲಾಗಿದೆ.
 
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಆಪ್ತರಾದ ಆರೋಗ್ಯ ಸಚಿವ ವಿಜಯ್ ಭಾಸ್ಕರ್, ಶರತ್ ಕುಮಾರ್ ಸೇರಿದಂತೆ 32 ನಾಯಕರ ಮನೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
 
ಸಚಿವ ವಿಜಯ್ ಭಾಸ್ಕರ್ ನಿವಾಸದಲ್ಲಿ 2.2 ಕೋಟಿ ರೂಪಾಯಿ ಹಣವನ್ನು ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇತರ ಮುಖಂಡರ ನಿವಾಸದಲ್ಲಿ ತಪಾಸಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.    

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಉಪಚುನಾವಣೆ ಪ್ರಚಾರ: ಜೆಡಿಎಸ್ ಬಂಡಾಯ ಶಾಸಕರಲ್ಲಿಯೇ ಭಿನ್ನಮತ

ಮೈಸೂರು: ಉಪಚುನಾವಣೆಯಲ್ಲಿ ಬಹಿರಂಗವಾಗಿ ಕಾಂಗ್ರೆಸ್ ಪರ ಪ್ರಚಾರ ಮಾಡುವ ಕುರಿತಂತೆ ಜೆಡಿಎಸ್ ಬಂಡಾಯ ...

news

ಗುಂಡ್ಲುಪೇಟೆ: ಸರಕಾರಿ ಅಧಿಕಾರಿ ಕಾರಿನಲ್ಲಿ ಕಂತೆ ಕಂತೆ ಹಣ ಪತ್ತೆ

ಗುಂಡ್ಲುಪೇಟೆ: ಉಪಚುನಾವಣೆ ನಡೆಯಲಿರುವ ಗುಂಡ್ಲುಪೇಟೆಯ ಖಾಸಗಿ ಹೋಟೆಲ್ ಮುಂದೆ ಸರಕಾರಿ ಅಧಿಕಾರಿ ಕಾರಿನಲ್ಲಿ ...

news

ಗುಂಡ್ಲುಪೇಟೆಯಲ್ಲಿ ಸರ್ಕಾರಿ ಕಾರಿನಲ್ಲಿದ್ದ 20 ಲಕ್ಷ ರೂ. ಪತ್ತೆ

ಉಪಚುನಾವಣಾ ಕಣದಲ್ಲಿ ಝಣ ಝಣ ಕಾಂಚಾಣದ ಹವಾ ಶುರುವಾಗಿದೆ. ಗುಂಡ್ಲುಪೇಟೆಯ ಖಾಸಗಿ ಹೋಟೆಲ್ ಬಳಿ ನಿಂತಿದ್ದ ...

news

6 ರಾಜ್ಯಗಳಿಗೆ ನೋಟಿಸ್ ನೀಡಿದ ಸುಪ್ರೀಂಕೋರ್ಟ್

ಗೋ ರಕ್ಷಕ ದಳದ ದಾಳಿಗಳ ಕುರಿತ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಮತ್ತು 6 ಬಿಜೆಪಿ ...

Widgets Magazine