ಉಗ್ರರಿಗೆ ವೆಪನ್ ಸಾಗಾಟ: ಇಬ್ಬರು ಪೇದೆಗಳು ಸೇರಿ ಮೂವರ ಬಂಧನ

ನವದೆಹಲಿ, ಬುಧವಾರ, 11 ಅಕ್ಟೋಬರ್ 2017 (16:50 IST)

Widgets Magazine

ನವದೆಹಲಿ: ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಉಗ್ರರಿಗೆ ಮದ್ದುಗುಂಡು ಸರಬರಾಜು ಮಾಡುತ್ತಿದ್ದ ಮೂವರನ್ನು ಪೊಲೀಸರು ಶೋಫಿಯಾನ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ವಿಪರ್ಯಾಸವೆಂದರೆ ಇದರಲ್ಲಿ ಇಬ್ಬರು ಪೊಲೀಸ್ ಪೇದೆಗಳು ಶಾಮೀಲಾಗಿದ್ದಾರೆ.


ಬಂಧಿತ ಪೇದೆಗಳನ್ನು ಶಬೀರ್ ಅಹ್ಮದ್ ಮಲಿಕ್ ಮತ್ತು ನಾಝಿರ್ ಅಹ್ಮದ್ ಎಂದು ಗುರುತಿಸಲಾಗಿದೆ. ಮತ್ತೋರ್ವ ಆರೋಪಿ ಆದಿಲ್  ಅಹ್ಮದ್ ಎನ್ನಲಾಗಿದೆ. ಈ ಮೂವರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯೊಂದಿಗೆ ಸಕ್ರಿಯರಾಗಿದ್ದರು ಎಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಸರ್ಕಾರ ನೀಡಿದ್ದ ಮದ್ದುಗುಂಡುಗಳನ್ನು ಉಗ್ರರಿಗೆ ನೀಡಲು ತೆರಳಿದ್ದ ಸಂದರ್ಭದಲ್ಲಿ ಆದಿಲ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತನ್ನೊಂದಿಗೆ ಶಬೀರ್ ಮತ್ತು ನಾಝಿರ್ ಕೈಜೋಡಿಸಿರುವುದಾಗಿ ಬಾಯ್ಬಿಟ್ಟಿದ್ದಾನೆ. ಆರೋಪಿಗಳಿಂದ ಎಕೆ-47 ರೈಫಲ್ ಬಂದೂಕು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಮತ್ತಷ್ಟು ತೀವ್ರ ವಿಚಾರಣೆ ನಡೆಯುತ್ತಿದೆ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ದಂಪತಿಗಳ ಬೆಡ್‌ರೂಮ್‌ಗೆ ಕ್ಯಾಮರಾ ಇಟ್ಟ ಭೂಪನ ಬಂಧನ

ಬೆಂಗಳೂರು: ದಂಪತಿಗಳ ಬೆಡ್‌ರೂಮ್‌ಗೆ ಕ್ಯಾಮರಾ ಅಳವಡಿಸಿ ಅವರ ಖಾಸಗಿ ದೃಶ್ಯಗಳನ್ನು ಇಂಟರ್‌ನೆಟ್‌ನಲ್ಲಿ ...

news

ಅಪ್ರಾಪ್ತೆಯ ಮೇಲೆ 30 ಕ್ಕೂ ಹೆಚ್ಚು ಬಾರಿ ಅತ್ಯಾಚಾರ ಮಾಡಿದ ಕಾಮುಕ ಅರೆಸ್ಟ್

ಬೆಂಗಳೂರು: ಅಪ್ರಾಪ್ತಳ ಮೇಲೆ 30ಕ್ಕೂ ಹೆಚ್ಚು ಬಾರಿ ಅತ್ಯಾಚಾರವೆಸಗಿದ ನೀಚ ಕಾಮುಕನನ್ನು ಪೊಲೀಸರು ...

news

20 ವರ್ಷದ ಯುವತಿಗೆ ಬ್ಲ್ಯಾಕ್‌ಮೇಲ್ ಮಾಡಿ ಸಾಮೂಹಿಕ ಅತ್ಯಾಚಾರ

ಬೆಂಗಳೂರು: 20 ವರ್ಷದ ಯುವತಿಗೆ ಬ್ಲ್ಯಾಕ್‌ಮೇಲ್ ಮಾಡಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ ಹೇಯ ಘಟನೆ ಆನೇಕಲ್ ...

news

ಕಟಾರಿಯಾಗೆ ಬೆದರಿಕೆ: ಶಾಸಕ ಶಿವಮೂರ್ತಿ ವಿರುದ್ಧ ಸಿಎಂ ಗರಂ

ಬೆಂಗಳೂರು: ಐಎಎಸ್ ಅಧಿಕಾರಿ ರಾಜೇಂದ್ರ ಕಟಾರಿಯಾಗೆ ಧಮ್ಕಿ ಹಾಕಿದ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ...

Widgets Magazine Widgets Magazine