122 ಶಾಸಕರಿಗೂ ನೆಮ್ಮದಿಯಿಂದ ಇರಗೊಡುವುದಿಲ್ಲ ಜಯಾ ಆತ್ಮ

ಚೆನ್ನೈ, ಸೋಮವಾರ, 6 ಮಾರ್ಚ್ 2017 (12:41 IST)

Widgets Magazine

ಮಾಜಿ ಮುಖ್ಯಮಂತ್ರಿಗಳಾದ ಎಂ.ಜಿ ರಾಮಚಂದ್ರನ್ ಮತ್ತು ಜೆ. ಶಶಿಕಲಾ ಅವರ ಆತ್ಮಗಳು ವಿ,ಕೆ ಶಶಿಕಲಾ ಅವರ ಪರ ನಿಂತಿರುವ 122 ಶಾಸಕರಿಗೆ ನೆಮ್ಮದಿಯಿಂದ ಇರಲು ಬಿಡುವುದಿಲ್ಲ, ಎಂದು ತಮಿಳುನಾಡಿನ ನಿರ್ಗಮಿತ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹೇಳಿದ್ದಾರೆ.

ಗ್ರೀನ್‌ವೇಸ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸೆಲ್ವಂ, ನಮ್ಮ ಧರ್ಮ ಯುದ್ಧ ಪರಿಣಾಮಕಾರಿ ತಿರುವನ್ನು ಪಡೆಯಲಿದೆ. 122 ಶಾಸಕರು( ಶಶಿಕಲಾ ಬೆಂಬಲಿಗರು) ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯಲಿದ್ದಾರೆ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಮತ್ತು ಎಂಜಿಆರ್ ಆತ್ಮಗಳು ಅವರನ್ನು ಶಾಂತಿಯಿಂದ ಬದುಕಲು ಬಿಡುವುದಿಲ್ಲ ಎಂದಿದ್ದಾರೆ.
 
ತಾವು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಯಲು ಕಾರಣರಾದ ಶಾಸಕರ ಮೇಲೆ ಪ್ರಖರ ವಾಗ್ದಾಳಿ ನಡೆಸಿದ ಅವರು, ನನ್ನನ್ನು ಕಠಿಣ ಪರಿಸ್ಥಿತಿಗೆ ದೂಡಿ ಅಪಮಾನ ಮಾಡಲಾಯಿತು. ಶಶಿಕಲಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಪಟ್ಟಕ್ಕೇರಿಸುವುದಕ್ಕೆ ಒಪ್ಪಿಕೊಳ್ಳಿ ಎಂದು ನನ್ನ ಮೇಲೆ ಒತ್ತಡ ಹೇರಿದಾಗ ಎರಡು ದಿನ ನಾನು ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆದಿದ್ದೇನೆ, ಎಂದು ಸೆಲ್ವಂ ಹೇಳಿದ್ದಾರೆ. 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮತ್ತೊಂದು ಗುದ್ದೋಡು ಪ್ರಕರಣ: ಬಾಲಕ ದುರ್ಮರಣ

ನವದೆಹಲಿಯಲ್ಲಿ ಮತ್ತೊಂದು ಗುದ್ದೋಡು ಪ್ರಕರಣ ನಡೆದಿದ್ದು ವೇಗವಾಗಿ ಬಂದ ಮರ್ಸಿಡಿಸ್‌ಗೆ ಯುವಕ ...

news

ಪುನುಗು ಬೆಕ್ಕಿಗಾಗಿ ಟಿಟಿಡಿ ಮತ್ತು ಅರಣ್ಯ ಇಲಾಖೆ ಗುದ್ದಾಟ

ಆಂಧ್ರಪ್ರದೇಶದ ಅರಣ್ಯ ಇಲಾಖೆ ಮತ್ತು ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ನಡುವೆ ಜಟಾಪಟಿ ಶುರುವಾಗಿದೆ. ಅದು ...

news

ದಿಲ್ಲಿಯನ್ನು ಲಂಡನ್ ಮಾಡುತ್ತೇನೆಂದ ಸಿಎಂ ಅರವಿಂದ್ ಕೇಜ್ರಿವಾಲ್!

ನವದೆಹಲಿ: ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಗೆಲ್ಲಿಸಿ ನೋಡಿ. ದೆಹಲಿಯನ್ನು ...

news

ವೃತ್ತಿ ಬದುಕಿಗೆ ಇಂದು ವಿರಾಟ್ ನಿವೃತ್ತಿ!

ನವದೆಹಲಿ: ಇದೇನಾಗಿ ಹೋಯ್ತು. ಇಷ್ಟು ಬೇಗ ಟೀಂ ಇಂಡಿಯಾ ಪ್ರದರ್ಶನ ವಿರಾಟ್ ಗೆ ಬೇಸರ ತಂದಿತಾ? ಇಷ್ಟು ಬೇಗ ...

Widgets Magazine Widgets Magazine