ವಿದ್ಯಾರ್ಥಿನಿಯರಿಂದಲೇ ವಿದ್ಯಾರ್ಥಿನಿಯನ್ನು ನಗ್ನಗೊಳಿಸಿ ಹಲ್ಲೆ, ವಿಡಿಯೋ ಚಿತ್ರಣ

ರಾಂಚಿ, ಬುಧವಾರ, 9 ಆಗಸ್ಟ್ 2017 (14:09 IST)

ಆಘಾತಕಾರಿ ಘಟನೆಯೊಂದರಲ್ಲಿ, ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿ ಮಾಡಿದ್ದಾಳೆ ಎಂದು ಆರೋಪಿಸಿದ ಇತರ ವಿದ್ಯಾರ್ಥಿನಿಯರು ಆಕೆಯನ್ನು ನಗ್ನಗೊಳಿಸಿ ಹಲ್ಲೆ ಮಾಡಿದ್ದಲ್ಲದೇ ಸಂಪೂರ್ಣ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಹೇಯ ಕೃತ್ಯ ಎಸಗಿದ್ದಾರೆ. 

ಮಾಧ್ಯಮ ವರದಿಗಳ ಪ್ರಕಾರ, ವಿದ್ಯಾರ್ಥಿನಿಯರು ತಾವು ಚಿತ್ರಿಸಿಕೊಂಡು ವಿಡಿಯೋವನ್ನು ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಹರಿದು ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಈ ಘಟನೆ ಆಗಸ್ಟ್ 4 ರಂದು ಸಂತಾಲ್ ಪರ್ಗಾನಾ ಮಹಿಳಾ ಕಾಲೇಜಿನಲ್ಲಿ ನಡೆದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಬುಡಕಟ್ಟು ವಿದ್ಯಾರ್ಥಿನಿಯ ಚಿತ್ರಗಳ ವಿಡಿಯೋ ಬಹಿರಂಗವಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
 
ನಾನು 500 ರೂಪಾಯಿಗಳನ್ನು ನೀಡಿ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿದ್ದೇನೆ. ಆದರೆ. ಹಾಸ್ಟೇಲ್‌‍ನಲ್ಲಿರು ವ ಕೆಲ ವಿದ್ಯಾರ್ಥಿನಿಯರು ನನ್ನ ಮೊಬೈಲ್‌ನ್ನು ಕದ್ದ ಮೊಬೈಲ್ ಎಂದು ಆರೋಪಿಸಿದ್ದಾಗಿ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಾಳೆ.
 
ವಿದ್ಯಾರ್ಥಿಗಳು ನಂತರ ವಿದ್ಯಾರ್ಥಿ ಕೌನ್ಸಿಲ್ ಸಭೆ ಕರೆದು. 18,600 ರೂ ದಂಡವನ್ನು ಪಾವತಿಸುವಂತೆ ವಿದ್ಯಾರ್ಥಿನಿಗೆ ಒತ್ತಡ ಹೇರಿದ್ದಾರೆ. ದಂಡ ತೆರಲು ವಿಫಲವಾದಲ್ಲಿ ನಗ್ನ ವೀಡಿಯೊವನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದರು ಎಂದು ವಿದ್ಯಾರ್ಥಿನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. 
 
ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿಯ ತಂದೆ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ಪುತ್ರಿಗೆ ನ್ಯಾಯ ದೊರೆಯದಿದ್ದಲ್ಲಿ ಆಕೆಯೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸರ ಮುಂದೆ ಬೆದರಿಕೆಯೊಡ್ಡಿದ್ದಾನೆ..  
 
ಏತನ್ಮಧ್ಯೆ, ಘಟನೆಯ ಬಗ್ಗೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿ ಎಂದು ಮುಖ್ಯಮಂತ್ರಿ ರಘುಬರ್ ದಾಸ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಜಾರ್ಖಂಡ್ ಬುಡಕಟ್ಟು ವಿದ್ಯಾರ್ಥಿನಿ ಮೊಬೈಲ್ ಕಳ್ಳತನ ನಗ್ನ ವಿಡಿಯೋ Jharkhand Jharkhand Tribal Girl Stripped Mobile Phone Theft Santhal Pargana Women's College

ಸುದ್ದಿಗಳು

news

ಮತ್ತೆ ಸಚಿವ ಡಿ.ಕೆ.ಶಿವಕುಮಾರ್‌ಗೆ ಐಟಿ ಸಮನ್ಸ್ ಜಾರಿ

ಬೆಂಗಳೂರು: ಆದಾಯ ತೆರಿಗೆ ದಾಳಿ ಕುರಿತ ವಿಚಾರಣೆಗೆ ಹಾಜರಾಗುವಂತೆ ಐಟಿ ಅಧಿಕಾರಿಗಳು ಇಂಧನ ಖಾತೆ ಸಚಿವ ...

news

ಕ್ವಿಟ್ ಇಂಡಿಯ ಚಳುವಳಿಯನ್ನು ಕೆಲ ಗುಂಪುಗಳು ವಿರೋಧಿಸಿದ್ದವು: ಆರೆಸ್ಸೆಸ್ ವಿರುದ್ಧ ಸೋನಿಯಾ ವಾಗ್ದಾಳಿ

ನವದೆಹಲಿ: ಕಳೆದ 1942 ರಲ್ಲಿ ದೇಶದ ರಾಷ್ಟ್ರೀಯ ಕಾಂಗ್ರೆಸ್ ಬ್ರಿಟಿಷರ್ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿ ...

news

ಕಾವೇರಿ ಜಲಾಶಯದಿಂದ ನಾಳೆ ನಾಲೆಗಳಿಗೆ ನೀರು: ಸಿಎಂ ಘೋಷಣೆ

ಬೆಂಗಳೂರು: ನಾಳೆ ಕಾವೇರಿ ನದಿಯಿಂದ ನಾಲೆಗಳಿಗೆ ನೀರು ಹರಿಬಿಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ...

news

ಸಂಸತ್ತಿನಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡಿ ಎಂದಿದ್ದಕ್ಕೆ ಸಿಟ್ಟಿಗೆದ್ದ ಸಂಸದ ತಂಬಿದೊರೈ

ನವದೆಹಲಿ: ಕ್ವಿಟ್ ಇಂಡಿಯಾ ಚಳವಳಿಯ 70 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಂಸತ್ತಿನಲ್ಲಿ ಇಂದು ಪ್ರಧಾನಿ ...

Widgets Magazine