ಯುವತಿಗೆ ನಗ್ನ ಚಿತ್ರ ಕಳುಹಿಸಿದ್ರೆ ಜಾಬ್ ಗ್ಯಾರೆಂಟಿ ಎಂದ ಸಂದರ್ಶಕ

ಹೈದ್ರಾಬಾದ್, ಮಂಗಳವಾರ, 21 ನವೆಂಬರ್ 2017 (11:52 IST)

ಉದ್ಯೋಗ ಬೇಕಾದಲ್ಲಿ ನಗ್ನ ಚಿತ್ರಗಳನ್ನು ಕಳುಹಿಸಿ ಎಂದು ಯುವತಿಯೊಬ್ಬಳನ್ನು ಒತ್ತಾಯಿಸಿದ 32 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
 
ಇಂಜಿನಿಯರಿಂಗ್ ಪದವೀಧರೆಯಾದ ಮಹಿಳೆಯ ದೂರಿನ ಮೇರೆಗೆ ಪೊಲೀಸ್ ಅಧಿಕಾರಿಗಳು ಆರೋಪಿ ಬಿ.ನರೇಂದ್ರ ಸಿಂಗ್‌ನನ್ನು ಬಂಧಿಸಿ ವಿಟಾರಣೆ ನಡೆಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತೆ ಸ್ವಾತಿ ಲಾಕ್ರಾ ತಿಳಿಸಿದ್ದಾರೆ.
 
 
ಐಟಿ ಕ್ಷೇತ್ರದಲ್ಲಿ ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಹಾಜರಾಗಿದ್ದ ಯುವತಿಯೊಬ್ಬಳು ವಾಟ್ಸಪ್ ಮೂಲಕ ನರೇಂದ್ರ ಸಿಂಗ್‌ನನ್ನು ಸಂಪರ್ಕಿಸಿ, ತಮ್ಮ ಸಂದರ್ಶನದ ಕಥೆ ಏನಾಯಿತು ಎಂದು ಕೇಳಿದ್ದಾರೆ. ಅದಕ್ಕೆ ನರೇಂದ ಸಿಂಗ್ ನಿನ್ನ ನಗ್ನ ಫೋಟೋಗಳನ್ನು ಕಳುಹಿಸಿದಲ್ಲಿ ಉದ್ಯೋಗ ದೊರೆಯುತ್ತದೆ ಎನ್ನುವ ಸಂದೇಶ ರವಾನಿಸಿದ್ದಾನೆ,
 
ನಂತರ ಯುವತಿ ಹಲವಾರು ಬಾರಿ ಕರೆ ಮಾಡಿದಾಗಲೂ ನಿನ್ನ ಹಾಟ್ ಚಿತ್ರಗಳನ್ನು ಕಳುಹಿಸದಿದ್ದಲ್ಲಿ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂದು ಆರೋಪಿ ನರೇಂದ್ರ ಸಿಂಗ್ ಖಡಾಖಂಡಿತವಾಗಿ ಹೇಳಿದ್ದಾನೆ. ಯುವತಿ ತನ್ನ ಚಿತ್ರಗಳನ್ನು ಕಳುಹಿಸದೆ ಪೊಲೀಸರಿಗೆ ದೂರು ನೀಡಿದ್ದಾಳೆ,
 
ಪ್ರತಿಷ್ಠಿತ ಐಟಿ ಕಂಪೆನಿಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡುವ ನರೇಂದ್ರ ಸಿಂಗ್, ಯುವತಿಗೆ ಒಳ್ಳೆಯ ಕಂಪೆನಿಯಲ್ಲಿ ಕೆಲಸ ಕೊಡಿಸುತ್ತೇನೆ. ಆದರೆ, ನಿನ್ನ ನಗ್ನ ಫೋಟೋ ಕಳುಹಿಸಿಕೊಡು ಎಂದು ಕೋರಿದ್ದಾನೆ. ಆದರೆ, ಯುವತಿ ನಿರಾಕರಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ.
 
ಐಟಿ ಕಾಯ್ದೆಯನ್ವಯ ಆರೋಪಿ ನರೇಂದ್ರ ಸಿಂಗ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸ್ವಾತಿ ಲಾಕ್ರಾ ತಿಳಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೇವಾಲಯದಲ್ಲಿ ಹೇಗೆ ಕೂರಬೇಕೆಂದೇ ರಾಹುಲ್ ಗಾಂಧಿಗೆ ಗೊತ್ತಿರಲಿಲ್ಲವಂತೆ!

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ಗುಜರಾತ್ ಚುನಾವಣೆಯ ಹಿನ್ನಲೆಯಲ್ಲಿ ಕೆಲವು ...

news

ಅರ್ಧದಷ್ಟು ಸಂಪತ್ತು ದಾನ ಮಾಡಲಿದ್ದಾರೆ ನಂದನ್ ನೀಲೇಕಣಿ

ಬೆಂಗಳೂರು: ಜಗತ್ತಿನ ಅತೀ ಶ್ರೀಮಂತರಾದ ವಾರೆನ್ ಬಫೆಟ್, ಬಿಲ್ ಗೇಟ್ಸ್ ತಾವು ಸಂಪಾದಿಸಿದ ಬಹುಪಾಲನ್ನು ...

news

ಪ್ರಧಾನಿ ಮೋದಿ ವಿರುದ್ಧ ಸೋನಿಯಾ ಗಾಂಧಿ ಆರೋಪ

ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮೋದಿ ...

news

ದೇವಸ್ಥಾನಕ್ಕೆ 2 ಲಕ್ಷ ರೂ ದೇಣಿಗೆ ನೀಡಿದ ಭಿಕ್ಷುಕಿ...!

ಮೈಸೂರು: ಅಸಾಮಾನ್ಯ ಘಟನೆಯೊಂದರಲ್ಲಿ ದೇವಸ್ಥಾನದ ಮುಂದೆ ಭಿಕ್ಷಾಟನೆ ನಡೆಸುತ್ತಿರುವ ಓರ್ವ ಮಹಿಳೆ ...

Widgets Magazine
Widgets Magazine