ರೋಹ್ಟಕ್ ಜೈಲಿಗೇ ಹೆಲಿಕಾಪ್ಟರ್`ನಲ್ಲಿ ತೆರಳಿ ರಾಮ್ ರಹೀಂಗೆ ಶಿಕ್ಷೆ ಪ್ರಕಟಿಸಲಿರುವ ನ್ಯಾಯಾಧೀಶರು

ಪಂಚಕುಲ, ಶನಿವಾರ, 26 ಆಗಸ್ಟ್ 2017 (20:24 IST)

Widgets Magazine

ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌಧದ ಗುರು ಗುರ್ಮೀತ್ ರಾಮ್ ರಹೀಮ್ ಸಿಂಗ್`ಗೆ ಸೋಮವಾರ ರೋಹ್ಟಕ್`ನ ಜೈಲಿನಲ್ಲೇ ಶಿಕ್ಷೆಯ ಪ್ರಮಾಣವನ್ನ ಪ್ರಕಟಿಸಲಾಗುತ್ತೆ.


ಸಾಧ್ವಿಗಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ದೋಷಿ ಎಂದು ತೀರ್ಪಿತ್ತ ಜಗದೀಪ್ ಸಿಂಗ್, ಹೆಲಿಕಾಪ್ಟರ್ ಮೂಲಕ ರೋಹ್ಟಕ್`ನ ಸುನಾರಿಯಾ ಜೈಲಿಗೆ ತೆರಳಿ ಶಿಕ್ಷೆ ಪ್ರಕಟಿಸಲಿದ್ದಾರೆ. 10 ವರ್ಷಕ್ಕೂ ಅಧಿಕ ಶಿಕ್ಷೆಯಾಗುವ ಸಾಧ್ಯತೆ ಇದೆ. ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಸಿಬಿಐ ನ್ಯಾಯಾಧೀಶರಿಗೆ ಸಂಪೂರ್ಣ ಭದ್ರತೆ ಒದಗಿಸುವಂತೆ ಹರ್ಯಾಣ ಮತ್ತು ಪಂಜಾಬ್ ಹೈಕೋರ್ಟ್`ನ ಮುಖ್ಯ ನ್ಯಾಯಮೂರ್ತಿ ಸೇರಿ ಎಲ್ಲ ನ್ಯಾಯಾಧೀಶರು ಜೈಲಧಿಕಾರಿಗಳು ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ತಾಕೀತು ಮಾಡಿದ್ದಾರೆ.  ಡೇರಾ ಗುರು ದೋಷಿಯೆಂದು ಘೋಷಿಸಿದ ಬಳಿಕ ಏರ್ಪಟ್ಟ ಹಿಂಸಾಚಾರದ ಬಳಿಕ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಕ್ಷೆ ಘೋಷಿಸಲು ತೀರ್ಮಾನಿಸಲಾಗಿತ್ತು. ಬಳಿಕ ರೋಹ್ಟಕ್`ನಲ್ಲೇ ಶಿಕ್ಷೆ ಪ್ರಕಟಿಸಲು ತೀರ್ಮಾನಿಸಲಾಗಿದೆ. ನಿನ್ನೆ ಅಪರಾಧಿ ರಾಮ್ ರಹೀಮ್ ಸಿಂಗ್`ನನ್ನ ಸಹ ಖಾಸಗಿ ಹೆಲಿಕಾಪ್ಟರ್`ನಲ್ಲಿ ರೋಹದಟಕ್`ಗೆ ಕರೆದೊಯ್ಯಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ




Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ವಿಧಾನಸಭೆ ಚುನಾವಣೆ: ನವದೆಹಲಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ

ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ರಣತಂತ್ರ ಕುರಿತಂತೆ ಚರ್ಚಿಸಲು ಬಿಜೆಪಿ ...

news

ನರೇಂದ್ರ ಮೋದಿ ಬಿಜೆಪಿಯ ಪ್ರಧಾನಿಯಲ್ಲ, ದೇಶದ ಪ್ರಧಾನಿ: ಮೋದಿಯನ್ನೂ ಬಿಡದ ಹೈಕೋರ್ಟ್

ಚಂಡೀಗಢ್: ಸ್ವಯಂಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್‌ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ...

news

ಶಶಿಕಲಾರನ್ನು ತೆಗೆದ್ರೆ ತಕ್ಕ ಪಾಠ ಕಲಿಸ್ತೇನೆ: ಎಐಎಡಿಎಂಕೆಗೆ ದಿನಕರನ್ ವಾರ್ನಿಂಗ್

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಸರಕಾರಕ್ಕೆ 19 ಶಾಸಕರು ನೀಡಿರುವ ಬೆಂಬಲ ವಾಪಸ್ ...

news

ಅತ್ಯಾಚಾರಿ ಬಾಬಾಗೆ ಬಿಜೆಪಿ ಬೆಂಬಲ: ಕಾಂಗ್ರೆಸ್ ವಾಗ್ದಾಳಿ

ನವದೆಹಲಿ: ಅತ್ಯಾಚಾರ ಆರೋಪಿ ಗುರ್ಮಿತ್ ಸಿಂಗ್ ಬಾಬಾ ರಾಮ್ ರಹೀಮ್‌ಗೆ ಬಿಜೆಪಿ ಬೆಂಬಲ ನೀಡುತ್ತಿದೆ ಎಂದು ...

Widgets Magazine Widgets Magazine