ಕಾಬೂಲ್ ನಲ್ಲಿ ಉಗ್ರರಿಂದ ಆತ್ಮಾಹುತಿ ಕಾರ್ ಬಾಂಬ್ ದಾಳಿ: 24 ಜನರ ದುರ್ಮರಣ

ಕಾಬೂಲ್, ಸೋಮವಾರ, 24 ಜುಲೈ 2017 (12:24 IST)

ಕಾಬೂಲ್‌ :ಆಫ್ಘಾನಿಸ್ಥಾನದ ರಾಜಧಾನಿ ಕಾಬೂಲ್‌ನಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು, ಬೆಳಗ್ಗೆ  ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ 24 ಮಂದಿ ಸಾವನ್ನಪ್ಪಿದ್ದು, ಇತರ ಸುಮಾರು 42 ಮಂದಿ ಗಾಯಗೊಂಡಿದ್ದಾರೆ. 
 
ಪಶ್ಚಿಮ ಕಾಬೂಲ್‌ನಲ್ಲಿ  ಉಗ್ರರು ಈ ದಾಳಿ ನಡೆದಿದ್ದು  ಮೃತರ ಸಂಖ್ಯೆ ಹೆಚ್ಚುವ ಭೀತಿ ಇದೆ ಎಂದು  ಆತ್ಮಾಹುತಿ ಬಾಂಬ್‌
ದಾಳಿಯನ್ನು ದೃಢೀಕರಿಸಿರುವ ಒಳಾಡಳಿತ ಸಚಿವಾಲಯದ ವಕ್ತಾರ ನಜೀಬ್‌ ದಾನಿಶ್‌ ಹೇಳಿದ್ದಾರೆ. ಸರಕಾರದ ಉಪ ಕಾರ್ಯಕಾರಿ ಮುಖ್ಯಸ್ಥ ಮೊಹಮ್ಮದ್‌ ಮೊಹಾಕಿಕ್‌ ಅವರ ನಿವಾಸದ ಬಳಿ ಈ ದಾಳಿ ನಡೆದಿದೆ. ಶಿಯಾ ಹಜಾರಾ ಸಮುದಾಯದವರ ಪ್ರಾಬಲ್ಯವಿರುವ ಪ್ರದೇಶವು ಇದಾಗಿದೆ ಎಂದು ತಿಳಿದುಬಂದಿದೆ.
 
ಎರಡು ವಾರಗಳ ಹಿಂದೆ  ನಾಲ್ವರನ್ನು ಬಲಿತೆಗೆದುಕೊಂಡ ಕಾಬೂಲ್‌ನಲ್ಲಿನ ಮಸೀದಿ ಮೇಲಿನ ಬಾಂಬ್‌ ದಾಳಿಯನ್ನು ತಾನು ಎಸಗಿರುವುದಾಗಿ ಇಸ್ಲಾಮಿಕ್‌ ಉಗ್ರ ಸಂಘಟನೆ ಹೇಳಿಕೊಂಡ ಬೆನ್ನಲ್ಲೇ ಈ ಘಟನೆ ನಡೆದಿದೆ. 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅತ್ಯಾಚಾರ ಮಾಡಿ ಬೆತ್ತಲೆ ವಿಡಿಯೋ ತೋರಿಸಿ 30 ಲಕ್ಷ ದೋಚಿದ..!

ವ್ಯಕ್ತಿಯೊಬ್ಬ ಜೀವವಿಮಾ ಏಜೆಂಟ್ ಮಹಿಳೆ ಮೇಲೆ ಅತ್ಯಾಚಾರ ಮಾಡಿ, ಅತ್ಯಾಚಾರದ ಪೋಟೋ ತೆಗೆದು ಅದನ್ನ ತೋರಿಸಿ ...

news

ಸಾ ರೆ ಗಾ ಮಾ ಪಾ ಮಾಜಿ ಸ್ಪರ್ಧಿ ಝೈನ್‌ ಅಲಿ ನಿಗೂಢ ಸಾವು

ಪಾಕ್‌ ಗಾಯಕ ಹಾಗೂ ಸಾ ರೆ ಗಾ ಮಾ ಪಾ ಮಾಜಿ ಸ್ಪರ್ಧಿ ಝೈನ್‌ ಅಲಿ ಅವರು ಲಾಹೋರ್‌ನಲ್ಲಿನ ತನ್ನ ಸ್ನೇಹಿತರ ...

news

ದೊಕ್ಲಾಮ್`ಗಾಗಿ ಏನು ಬೇಕಾದರೂ ಮಾಡಲು ಸಿದ್ಧ: ಚೀನಾದಿಂದ ಮತ್ತೊಂದು ಉದ್ಧಟತನ

ದೊಕ್ಲಾಮ್ ಗಡಿಯಲ್ಲಿ ಪ್ರಕ್ಷುಬ್ದ ವಾತಾವರಣವಿರುವ ಬೆನ್ನಲ್ಲೇ ಏನೇ ಆದರೂ ಚೀನಾದ ಪರಮಾಧಿಕಾರವನ್ನ ...

news

ಇಸ್ರೋ ಮಾಜಿ ಮುಖ್ಯಸ್ಥ ಪ್ರೊ.ಯು.ಆರ್. ರಾವ್ ಅಗಲಿಕೆಗೆ ಪ್ರಧಾನಿ, ಮುಖ್ಯಮಂತ್ರಿ ಸಂತಾಪ

ಬಾಹ್ಯಾಕಾಶ ವಿಜ್ಞಾನಿ ಹಾಗೂ ಮಾಜಿ ಇಸ್ರೋ ಮುಖ್ಯಸ್ಥ ಪ್ರೊ.ಯು.ಆರ್. ರಾವ್ ಅವರ ಅಗಲಿಕೆ ನೋವು ತಂದಿದೆ ಎಂದು ...

Widgets Magazine