ಕಮಲ್‌ಹಾಸನ್‌ಗೆ ಏನೂ ಗೊತ್ತಿಲ್ಲ: ಸಿಎಂ ಪಳನಿ ಸ್ವಾಮಿ ವಾಗ್ದಾಳಿ

ಚೆನ್ನೈ, ಬುಧವಾರ, 19 ಜುಲೈ 2017 (17:06 IST)

ಪಂಚಭಾಷಾ ನಟ ಕಮಲ್‌ಹಾಸನ್‌ಗೆ ಏನೂ ಗೊತ್ತಿಲ್ಲ. ಪ್ರವೇಶಿಸಿದ ನಂತರ ಬೇಕಾದ್ರೆ ಮಾತನಾಡಲಿ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿ ಸ್ವಾಮಿ ಟಾಂಗ್ ನೀಡಿದ್ದಾರೆ. 
 
ತಮಿಳುನಟ ಕಮಲ್ ಹಾಸನ್ ರಾಜಕೀಯ ಪ್ರವೇಶ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಕಮಲ್‌ಹಾಸನ್‌ಗೆ ರಾಜಕೀಯದ ಬಗ್ಗೆ ಗಂಧ ಗಾಳಿ ಗೊತ್ತಿಲ್ಲ. ರಾಜಕೀಯಕ್ಕೆ ಬಂದ ನಂತರ ನೋಡೋಣ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಕೆಲ ದಿನಗಳ ಹಿಂದೆ ತಮಿಳುನಾಡು ಸರಕಾರದ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಕಮಲ್ ಹಾಸನ್ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
 
ಕಮಲ್‌ಹಾಸನ್ ಹೇಳಿಕೆಗೆ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದ ಸಚಿವ ವೇಲುಮಣಿ, ಮೊದಲು ನಟಿಸಿದ ಚಿತ್ರಗಳಿಗೆ ಪಡೆದ ಹಣದಲ್ಲಿ ತೆರಿಗೆ ಪಾವತಿಸಿದ್ದೀರಾ? ನಿಮ್ಮ ಬಳಿ ದಾಖಲೆಗಳಿದ್ದಲ್ಲಿ ಯಾವ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವುದನ್ನು ಸಾಬೀತುಪಡಿಸಿ ಎಂದು ಸವಾಲ್ ಹಾಕಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಡಿಐಜಿ ರೂಪಾ ವರ್ಗಾವಣೆ: ಸಂಪುಟ ಸಭೆಯಲ್ಲಿ ಸಿಎಂ ಸ್ಪಷ್ಟನೆ

ಬೆಂಗಳೂರು: ಇಂದು ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಡಿಐಜಿ ರೂಪಾ ಮೌಡ್ಗಿಲ್ ಕುರಿತು ನಡೆದ ...

news

ಗೋಲ್‌ಮಾಲ್: ಪರಪ್ಪನ ಅಗ್ರಹಾರ ಜೈಲಿಗೆ ತನಿಖಾಧಿಕಾರಿ ಭೇಟಿ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಗೋಲ್‌ಮಾಲ್ ಬಗ್ಗೆ ತನಿಖೆ ನಡೆಸಲು ನಿವೃತ್ತ ...

news

ರಾಜ್ಯದ ಶಿಕ್ಷಣ ಸಚಿವರಿಗೆ ಪ್ರತಿ ವರ್ಷ 5-10 ಕೋಟಿ ರೂ ಕಪ್ಪ.: ಪ.ಯು.ಗಣೇಶ್ ಗಂಭೀರ ಆರೋಪ

ಹೊಸಪೇಟೆ: ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ವಾರ್ಷಿಕವಾಗಿ 5-10 ಕೋಟಿ ರೂಪಾಯಿ ಕಪ್ಪವನ್ನು ಸಂದಾಯ ...

news

ವಿದ್ಯಾರ್ಥಿನಿಯರ ಜೊತೆ ಶಿಕ್ಷಕನ ರಾಸಲೀಲೆ ಬಯಲು ಮಾಡಿದ ವಿದ್ಯಾರ್ಥಿನಿ..!

ಶಿಕ್ಷಕ ವಿದ್ಯಾರ್ಥಿನಿಯರ ಜೊತೆ ನಡೆಸುತ್ತಿದ್ದ ರಾಸಲೀಲೆಯ ವಿಡಿಯೋವನ್ನ ವಿದ್ಯಾರ್ಥಿನಿಯೇ ಬಹಿರಂಗ ಮಾಡಿರುವ ...

Widgets Magazine