ರಜನಿಕಾಂತ್ ಜತೆಗೆ ನನ್ನನ್ನು ಹೋಲಿಸುವುದು ಕೆಟ್ಟದ್ದು ಎಂದ ಕಮಲ್ ಹಾಸನ್

ಚೆನ್ನೈ, ಮಂಗಳವಾರ, 26 ಸೆಪ್ಟಂಬರ್ 2017 (07:16 IST)

ಚೆನ್ನೈ: ರಾಜಕೀಯಕ್ಕೆ ಬರಲು ಸಿದ್ಧತೆ ಮಾಡುತ್ತಿರುವ ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ತಮ್ಮನ್ನು ರಜನೀಕಾಂತ್ ಜತೆ ಹೋಲಿಕೆ ಮಾಡಬೇಡಿ ಎಂದಿದ್ದಾರೆ.


 
ಆಂಗ್ಲ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಮಲ್ ನಮ್ಮಿಬ್ಬರ ದಾರಿ ಬೇರೆ. ಹಾಗಾಗಿ ನಮ್ಮಿಬ್ಬರನ್ನು ಹೋಲಿಸುವುದು ತೀರಾ ಕೆಟ್ಟದ್ದಾಗಿರುತ್ತದೆ. ಹಾಗೆಯೇ ಕಮಲ್ ವರ್ಸಸ್ ರಜನಿ ಎಂದರೂ ಅಸಹ್ಯವಾಗಿರುತ್ತದೆ ಎಂದು ಕಮಲ್ ಹೇಳಿದ್ದಾರೆ.
 
ಹಾಗಿದ್ದರೂ ಒಬ್ಬ ಸ್ನೇಹಿತನಾಗಿ ರಜನಿ ಜತೆ ರಾಜಕೀಯಕ್ಕೆ ಬರುವುದಾಗಿ ಹೇಳಿದ್ದೇನೆ. ಅದರ ಹೊರತಾಗಿ ನಮ್ಮಿಬ್ಬರ ದಾರಿ ಬೇರೆ ಎಂದು ಕಮಲ್ ಸ್ಪಷ್ಟಪಡಿಸಿದ್ದಾರೆ. ಆಮ್ ಆದ್ಮಿ ಪಕ್ಷದಂತೆ ತಾವು ಸ್ಥಾಪಿಸುವ ಪಕ್ಷದಲ್ಲೂ ಜನ ಸಾಮಾನ್ಯರು, ಯೋಗ್ಯರೇ ಇರುತ್ತಾರೆ. ನಮ್ಮ ಪಕ್ಷಕ್ಕೂ ಜನರಿಂದಲೇ ಹಣ ಬರುತ್ತದೆ ಎಂದು ಕಮಲ್ ಸಂದರ್ಶನದಲ್ಲಿ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗೌರಿ ಲಂಕೇಶ್ ಹತ್ಯೆ ಹಿನ್ನೆಲೆ: ಅ.5ರಂದು ನವದೆಹಲಿಯಲ್ಲಿ ಪ್ರತಿಭಟನೆ

ನವದೆಹಲಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಅಕ್ಟೋಬರ್ 5ಕ್ಕೆ ಒಂದು ತಿಂಗಲೂ ಪೂರ್ಣವಾಗಲಿದೆ. ಈ ...

news

PRESS=ಒತ್ತಿ…? ಸರ್ಕಾರದ ಕಾರ್ಯಕ್ರಮದಲ್ಲೇ ತಪ್ಪು ಪದ ಬಳಕೆ

ಬೆಂಗಳೂರು: ಸರ್ಕಾರಿ ಅಥವಾ ಖಾಸಗಿ ಯಾವುದೇ ಕಾರ್ಯಕ್ರಮ ಆಗಿರಲಿ. ಅಲ್ಲಿ ಮಾಧ್ಯಮದವರಿಗೆ ಪ್ರತ್ಯೇಕ ...

news

ಬಾಲಕಿಗೆ ಮದ್ಯ ಕುಡಿಸಿ 2 ವರ್ಷ ಅತ್ಯಾಚಾರಗೈದ ಐವರು ಕಾಮುಕರು

ಚೆರ್ತಾಲಾ(ಕೇರಳ): ಅಪ್ರಾಪ್ತ ಬಾಲಕಿಯೊಬ್ಬಳಿಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿದ ಆರೋಪದ ಮೇಲೆ ಇಬ್ಬರು ...

news

ವಿಶ್ವದ ಧಡೂತಿ ಮಹಿಳೆ ಎಮಾನ್ ಅಹಮದ್ ಇನ್ನಿಲ್ಲ

ಅಬುಧಾಬಿ: ವಿಶ್ವದ ಅತಿ ಹೆಚ್ಚು ತೂಕದ ಮಹಿಳೆ ಈಜಿಪ್ಟ್ ನ ಎಮಾನ್ ಅಹಮದ್(37) ಅಬುಧಾಬಿಯ ಬುರ್ಜಿಲ್ ...

Widgets Magazine
Widgets Magazine