ಆರ್‌ಎಸ್ಎಸ್ ಕಚೇರಿ ಬಳಿ ಸ್ಪೋಟ: ನಾಲ್ಕು ಮಂದಿಗೆ ಗಾಯ

ಕೋಳಿಕ್ಕೋಡ್, ಶುಕ್ರವಾರ, 3 ಮಾರ್ಚ್ 2017 (08:28 IST)

ಕೇರಳದ ಕೋಳಿಕ್ಕೋಡ್‌ನಲ್ಲಿ ಆರ್‌ಎಸ್ಎಸ್ ಕಚೇರಿ ಬಳಿ ಬಾಂಬ್ ಸ್ಪೋಟವಾಗಿದ್ದು ನಾಲ್ವರು ಗಾಯಗೊಂಡಿದ್ದಾರೆ.

ವರದಿಗಳ ಪ್ರಕಾರ ನಡಪುರಮ್‌ನಲ್ಲಿರುವ ಕಚೇರಿಯ ಮುಂದೆ ಈ ದಾಳಿ ನಡೆದಿದ್ದು ನಾಲ್ವರು ಆರ್‌ಎಸ್ಎಸ್ ಕಾರ್ಯಕರ್ತರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. 
 
ಕೇರಳ ಮುಖ್ಯಮಂತ್ರಿ ತಲೆಗೆ ಬಹುಮಾನ ಘೋಷಿಸಿರುವುದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.
 
ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರ ಹತ್ಯೆಗೆ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಹೊಣೆಯಾಗಿದ್ದು ಅವರ ತಲೆ ತಂದುಕೊಟ್ಟವರಿಗೆ 1 ಕೋಟಿ ಕೊಡುವುದಾಗಿ ಮಧ್ಯಪ್ರದೇಶದ ಆರ್‍ಎಸ್‍ಎಸ್ ಮುಖಂಡ ಡಾ.ಚಂದ್ರಾವತ್ ಘೋಷಿಸಿದ್ದರು.
 
ಕೇರಳದಲ್ಲಿ ಸಂಘಪವಾರ ಮತ್ತು ಸಿಪಿಎಂ ಕಾರ್ಯಕರ್ತರ ನಡುವಿನ ಕಾದಾಟ ದಿನೇ ದಿನೇ ಹೆಚ್ಚಾಗುತ್ತಿದ್ದು, ಕಳೆದ ತಿಂಗಳು ಬಿಜೆಪಿ ಮುಖಂಡ ಸಂತೋಷ್ ಅವರ ಕೊಲೆಯಾಗಿತ್ತು.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಹಶೀಲ್ದಾರ್ ಹತ್ಯೆಗೆ ಯತ್ನಿಸಿದ ಜೆಸಿಬಿ ಚಾಲಕನ ಬಂಧನ

ತಹಶೀಲ್ದಾರ್ ಹತ್ಯೆಗೆ ಯತ್ನಿಸಿದ್ದ ಜೆಸಿಬಿ ಚಾಲಕನನ್ನು ಬಂಧಿಸಲಾಗಿದೆ.

news

ಜಯಲಲಿತಾ ಸಾವಿನ ರಹಸ್ಯ ಕೊನೆಗೂ ಬಹಿರಂಗ..?

ಸೆಪ್ಟೆಂಬರ್ 22ರಂದು ಜಯಲಲಿತಾ ಆಸ್ಪತ್ರೆಗೆ ದಾಖಲಾಗುವುದಕ್ಕೂ ಮುನ್ನ ಅವರ ಪೋಯಸ್ ಗಾರ್ಡನ್ ನಿವಾಸದಲ್ಲಿ ...

news

ಬಿಎಸ್‌ವೈರಿಂದ ಗೋಮಾಳ್ ಬಾಂಬ್: ದಿನೇಶ್ ಗುಂಡೂರಾವ್ ಭೂಕಬಳಿಕೆ ಶೀಘ್ರ ಬಹಿರಂಗ

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸರಕಾರಿ ಗೋಮಾಳಗಳನ್ನು ಕಬಳಿಸಿರುವ ಬಗ್ಗೆ 2-3 ...

news

ನಾನೊಬ್ಬ ಬ್ಲಾಕ್ ಹಾರ್ಸ್ ಇದ್ದಂಗೆ : ಜಿ.ಪರಮೇಶ್ವರ್

ಬೆಂಗಳೂರು: ನಾನೊಬ್ಬ ಬ್ಲಾಕ್ ಹಾರ್ಸ್ ಇದ್ದಂಗೆ. ಕೆಪಿಸಿಸಿ ಅಧ್ಯಕ್ಷನಾಗಿ ಮುಂದುವರಿಯುವಂತೆ ಹೈಕಮಾಂಡ್ ...

Widgets Magazine
Widgets Magazine