ಸೆಕ್ಸ್‌ನಲ್ಲಿದ್ದಾಗ ವಿಡಿಯೋ ತೆಗೆದಿದ್ದಾನೆ ಅಂತ ಗೊತ್ತು, ಫೇಸ್‌ಬುಕ್‌ಗೆ ಹಾಕ್ತಾನೆ ಅಂತ ಗೊತ್ತಿರಲಿಲ್ಲ

ಇಡುಕ್ಕಿ, ಶನಿವಾರ, 16 ಸೆಪ್ಟಂಬರ್ 2017 (18:03 IST)

ನಾವಿಬ್ಬರು ಸೆಕ್ಸ್‌ನಲ್ಲಿ ಪಾಲ್ಗೊಂಡಿದ್ದಾಗ ಪ್ರಿಯಕರ ಲಿನು ವಿಡಿಯೋ ತೆಗೆಯುತ್ತಿದ್ದಾನೆ ಎನ್ನುವುದು ನನಗೆ ಗೊತ್ತಿತ್ತು. ಆದರೆ, ಫೇಸ್‌ಬುಕ್‌ ಲೈವ್ ಇನ್‌ನಲ್ಲಿ ಹಾಕ್ತಾನೆ ಅಂತ ಗೊತ್ತಿರಲಿಲ್ಲ. ಅವನು ಒತ್ತಾಯಪೂರ್ವಕವಾಗಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆಯೊಬ್ಬಳು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಸೇಡು ತೀರಿಸಿಕೊಳ್ಳಲು ಫೇಸ್‌ಬುಕ್‍ ಲೈವ್‌ನಲ್ಲಿ ಮಹಿಳೆಯೊಂದಿಗಿನ ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
 
ವಿಡಿಯೋದಲ್ಲಿರುವ ಮಹಿಳೆ ಆದಿಮಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ನೆಡುಂಕಂದಂ ಹೋಟೆಲ್‌ನಲ್ಲಿ ಉದ್ಯೋಗಿಯಾಗಿರುವ ಲಿನು ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಆದರೆ, ಪೊಲೀಸರು ಮಹಿಳೆ ನೀಡಿದ ಹೇಳಿಕೆಯನ್ನು ತಳ್ಳಿಹಾಕಿದ್ದು ವಿಡಿಯೋದಲ್ಲಿ ಒತ್ತಾಯಪೂರ್ವಕವಾಗಿ ಅತ್ಯಾಚಾರ ಮಾಡಿರುವುದು ಕಂಡುಬಂದಿಲ್ಲ. ಆತನಿಗೆ ಸಹಕರಿಸುತ್ತಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.  
 
ಮಹಿಳೆ ಇನ್ನೊಬ್ಬ ವ್ಯಕ್ತಿಯನ್ನು ವಿವಾಹವಾಗಿದ್ದಾಳೆ ಮತ್ತು ಮಗುವನ್ನು ಹೊಂದಿದ್ದಾಳೆ ಆದರೆ ಅವಳ ಪತಿಯೊಂದಿಗೆ ಜೀವಿಸುವುದಿಲ್ಲ. ಅವಳು ಕಳೆದ ಕೆಲವು ತಿಂಗಳುಗಳಿಂದ ಲಿನು ಜೊತೆಗಿನ ಸಂಬಂಧ ಹೊಂದಿದ್ದಳು ಮತ್ತು ಅವರು ತನ್ನ ಸ್ಥಳವನ್ನು ಆಗಾಗ್ಗೆ ಬಳಸುತ್ತಿದ್ದರು, ವರದಿಗಳ ಪ್ರಕಾರ.
 
ದೂರು ನೀಡಿದ ಮಹಿಳೆ ಮತ್ತೊಬ್ಬನನ್ನು ವಿವಾಹವಾಗಿ ಒಂದು ಮಗುವಿನ ತಾಯಿಯಾಗಿದ್ದಾಳೆ. ಪತಿಯನ್ನು ತ್ಯಜಿಸಿದ ನಂತರ ಲಿನುನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಆರೋಪಿ ಯುವಕ ಲಿನು ಮೊಬೈಲ್‌ನಲ್ಲಿ ಮತ್ತಷ್ಟು ಸೆಕ್ಸ್ ವಿಡಿಯೋಗಳು ಪತ್ತೆಯಾಗಿವೆ. ಮಹಿಳೆ ಆರೋಪಿ ಲಿನುನಿಂದ ದೂರವಾಗಲು ಬಯಸಿದ ನಂತರ, ಆತ ಸೇಡಿಗಾಗಿ ಫೇಸ್‌ಬುಕ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 
 
ಆರೋಪಿ ಯುವಕ ಪೋಸ್ಟ್ ಮಾಡಿದ ವಿಡಿಯೋವನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಲಾಗಿದೆಯಾದರೂ ಹಲವಾರು ಪೇಸ್‌ಬುಕ್ ಬಳಕೆದಾರರು ವಿಡಿಯೋ ಡೌನ್‌ಲೋಡ್ ಮಾಡಿಕೊಂಡಿದ್ದು ವಾಟ್ಸಪ್‌‌ನಂತಹ ಮ್ಯಾಸೆಂಜರ್ ಆಪ್ ಮುಖಾಂತರ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಜನಪ್ರಿಯ ಅಶ್ಲೀಲ ವೆಬ್‌ಸೈಟ್‌ನಲ್ಲೂ ವಿಡಿಯೋ ಲಭ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡುವ ಅಗತ್ಯವಿಲ್ಲ: ಸಿಎಂ ಸ್ಪಷ್ಟನೆ

ಬೆಂಗಳೂರು: ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಕುರಿತಂತೆ ನೈತಿಕ ಹೊಣೆ ಹೊತ್ತು ಸಚಿವ ...

news

ಕಾಂಗ್ರೆಸ್ ಸರಕಾರ ರೈತ ವಿರೋಧಿ, ಜನ ವಿರೋಧಿ: ಪ್ರಕಾಶ್ ಜಾವ್ಡೇಕರ್

ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ರೈತ ವಿರೋಧಿ, ಜನ ವಿರೋಧಿಯಾಗಿದೆ ಎಂದು ...

news

ಎಸ್ಐಟಿಯಿಂದ ಅಜ್ಞಾತ ಸ್ಥಳದಲ್ಲಿ ಕುಣಿಗಲ್ ಗಿರಿ ವಿಚಾರಣೆ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕೆ ವ್ಯಕ್ತವಾದವರನ್ನ ಎಸ್`ಐಟಿ ...

news

ಆನಂದ್ ಗುರೂಜಿ ಮನೆ ಮೇಲೆ ಬಿಯರ್ ಬಾಟಲಿ, ಮಾಂಸದ ತುಂಡುಗಳನ್ನ ಎಸೆದ ದುಷ್ಕರ್ಮಿಗಳು

ಬೈಕ್`ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಖ್ಯಾತ ಜ್ಯೋತಿಷಿ ಆನಂದ್ ಗುರೂಜಿ ಮನೆ ಮೇಲೆ ಮಾಂಸದ ತುಂಡು, ...

Widgets Magazine
Widgets Magazine