Widgets Magazine
Widgets Magazine

ಉತ್ತರಪ್ರದೇಶದ ಸಿಎಂ ಸ್ಥಾನದ ಆಕಾಂಕ್ಷಿ ಆಸ್ಪತ್ರೆಗೆ ದಾಖಲು

ನವದೆಹಲಿ, ಗುರುವಾರ, 16 ಮಾರ್ಚ್ 2017 (18:05 IST)

Widgets Magazine

ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿನ ಪ್ರಮುಖು ರೂವಾರಿ,  ಸಿಎಂ ಸ್ಥಾನದ ಆಕಾಂಕ್ಷಿ, ಉತ್ತರಪ್ರದೇಶದ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಜೆಪಿಯ ಪ್ರಚಂಡ ಜಯದ ಬಳಿಕ ಸಿಎಂ ಆಯ್ಕೆ ಕಸರತ್ತು ನಡೆಯುತ್ತಿದ್ದು, ಮೌರ್ಯ ಸಹ ದೆಹಲಿಯಲ್ಲೇ ಇದ್ದಾರೆ. ಮಧ್ಯಾಹ್ನ ಅವರನ್ನ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ರಕ್ತದೊತ್ತಡದ ಕಾರಣ ಮೌರ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದ್ದು, ಒಂದು ದಿನ ತೀವ್ರ ನಿಗಾ ಘಟಕದಲ್ಲೇ ಇರಲಿದ್ದು, ನಾಳೆ ಡಿಸ್ಚಾರ್ಜ್ ಆಗಲಿದ್ದಾರೆ.
 
ಬೆಳಗ್ಗೆ ತಾನೆ ಸಿಎಂ ಸ್ಥಾನದ ಆಯ್ಕೆ ಬಗ್ಗೆ ಉತ್ತರಿಸಿದ್ದ ಮೌರ್ಯ, ಉತ್ತರಪ್ರದೇಶದ ಸಿಎಂ ಆಯ್ಕೆಯ ಜವಾಬ್ದಾರಿ ನನ್ನದು, ಬೇರೆ ಯಾರು ಆಯ್ಕೆ ಮಾಡುತ್ತಾರೆ ಎಂದು ಖಾರವಾಗಿ ಉತ್ತರಿಸಿದ್ದರು. ಹೀಗಾಗಿ, ಸಿಎಂ ಆಯ್ಕೆ ಕುರಿತಂತೆ ಕೊಂಚ ಅಸಮಾಧಾನವಿರುವುದು ಕಂಡುಬರುತ್ತಿದೆ.
ಕೇಶವ್ ಪ್ರಸಾಧ್ ಮೌರ್ಯರ ಜೊತೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಸಿಎಂ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಡ್ರಗ್ಸ್ ಮಾಫಿಯಾ ನಿರ್ನಾಮಕ್ಕೆ ಸರಕಾರ ಬದ್ಧ: ಗೃಹ ಸಚಿವ

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಮಾಫಿಯಾ ಸದೆಬಡೆಯಲು ಸರಕಾರ ಸರ್ವಸನ್ನದ್ಧವಾಗಿದೆ. ಸರಕಾರ ...

news

ಭ್ರಷ್ಟಾಚಾರ ಬಹಿರಂಗವಾಗುವ ಆತಂಕದಿಂದ ಡೈರಿ ಚರ್ಚೆಗೆ ನಕಾರ: ಶೆಟ್ಟರ್

ಬೆಂಗಳೂರು: ಹೈಕಮಾಂಡ್‌ಗೆ ಕಪ್ಪು ಕಾಣಿಕೆ ಬಗ್ಗೆ ವಿವರವುಳ್ಳ ಡೈರಿಯ ಬಗ್ಗೆ ಚರ್ಚೆ ನಡೆದಲ್ಲಿ ಕಾಂಗ್ರೆಸ್ ...

news

ಹೋಳಿ ಗುಂಗಲ್ಲಿ ಠಾಣೆಯೊಳಗೇ ಕಂಠಪೂರ್ತಿ ಕುಡಿದು ತೂರಾಡಿದ ಪೊಲೀಸರು

ಹೋಳಿ ಗುಂಗಲ್ಲಿ ಪೊಲೀಸ್ ಠಾಣೆಯಲ್ಲೇ ಕಂಠಪೂರ್ತಿ ಕುಡಿದು ಕುಣಿದು ಕುಪ್ಪಳಿಸಿರುವ ಘಟನೆ ಮಧ್ಯಪ್ರದೇಶದ ...

news

ಅಕ್ರಮ ಮಾಡುವ ನಿಮಗೆ ಮಾನ ಮರ್ಯಾದೆ ಇದೆಯೇ?: ಬಿಜೆಪಿಗೆ ಸಿಎಂ ತಿರುಗೇಟು

ಬೆಂಗಳೂರು: ಅಕ್ರಮ ಮಾಡುತ್ತಿರುವವರು ನೀವೆ, ನಿಮಗೆ ಮಾನ ಮರ್ಯಾದೆ ಇದೆಯಾ? ನಾಚಿಕೆಯಾಗಬೇಕು ಎಂದು ಸಿಎಂ ...

Widgets Magazine Widgets Magazine Widgets Magazine