ಫ್ರಾನ್ಸ್ ಫುಟ್ಬಾಲ್ ವಿಶ್ವಕಪ್ ಗೆದ್ದ ಖುಷಿಯಲ್ಲಿ ಎಡವಟ್ಟು ಟ್ವೀಟ್ ಮಾಡಿದ ಕಿರಣ್ ಬೇಡಿ

ಪುದುಚೇರಿ, ಸೋಮವಾರ, 16 ಜುಲೈ 2018 (10:37 IST)


ಪುದುಚೇರಿ: ಫಿಫಾ 2018 ವಿಶ್ವಕಪ್ ಫುಟ್ಬಾಲ್ ಫೈನಲ್ ನಲ್ಲಿ ಫ್ರಾನ್ಸ್ ಗೆದ್ದ ಖುಷಿಯಲ್ಲಿ ವಿಶ್ವದಾದ್ಯಂತ ಅಭಿಮಾನಿಗಳು ಖುಷಿಪಡುತ್ತಿದ್ದರೆ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಕೂಡಾ ಶುಭಾಷಯ ಕೋರಿದ್ದಾರೆ.
 
ಆದರೆ ಶುಭಾಷಯ ಕೋರಿ ಟ್ವೀಟ್ ಮಾಡುವಾಗ ಎಡವಟ್ಟು ಮಾಡಿದ್ದು, ಇದೀಗ ಟ್ರೋಲಿಗರ ಟೀಕೆಗೆ ತುತ್ತಾಗಿದ್ದಾರೆ. ‘ನಾವು ಪುದುಚೇರಿಯವರು (ಹಿಂದೆ ಫ್ರೆಂಚ್ ಆಡಳಿತದಲ್ಲಿದ್ದ ಪುದುಚೇರಿ) ಕಪ್ ಗೆದ್ದೆವು. ಸ್ನೇಹಿತರೇ ಅಭಿನಂದನೆಗಳು. ಕ್ರೀಡೆ ಒಂದುಗೂಡಿಸುತ್ತದೆ’ ಎಂದು ಕಿರಣ್ ಬೇಡಿ ಟ್ವೀಟ್ ಮಾಡಿದ್ದರು.
 
ಆದರೆ ಪುದುಚೇರಿಯನ್ನು ಫ್ರಾನ್ಸ್ ಎಂದು ಹೋಲಿಸಿದ್ದಕ್ಕೆ ಟ್ವಿಟರಿಗರು ಟ್ರೋಲ್ ಮಾಡಿದ್ದಾರೆ. ನಾವ್ಯಾಕೆ ಇನ್ನೂ ವಸಾಹತು ಮನಸ್ಥಿತಿಯಲ್ಲೇ ಇದ್ದೇವೆ? ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಇದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ. ಮತ್ತೆ ಪುದುಚೇರಿ ವಾಸಿಗಳು ನಮಗೆ ಫ್ರಾನ್ಸ್ ಗೆದ್ದರೆ ನಾವೇ ಗೆದ್ದಂತೆ ಅನಿಸುವುದಿಲ್ಲ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮುಂಗಾರು ಅಧಿವೇಶನಕ್ಕೆ ಸಚಿವ ಅರುಣ್ ಜೇಟ್ಲಿ ಗೈರು: ಹೊಸ ನಾಯಕನ ಹುಡುಕಾಟದಲ್ಲಿ ಬಿಜೆಪಿ

ನವದೆಹಲಿ: ಈ ಬಾರಿ ಮುಂಗಾರು ಅಧಿವೇಶನಕ್ಕೆ ರಾಜ್ಯಸಭೆ ನಾಯಕ ಸಚಿವ ಅರುಣ್ ಜೇಟ್ಲಿ ಗೈರು ಹಾಜರಾಗಲಿದ್ದಾರೆ. ...

news

ರಾಹುಲ್ ಗಾಂಧಿ ಪ್ರಧಾನಿಯಾಗುವುದಕ್ಕೆ ನಮ್ಮ ತಕಾರಾರಿಲ್ಲ: ಎಚ್ ಡಿ ದೇವೇಗೌಡ

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದರ ಕುರಿತು ಜೆಡಿಎಸ್ ವರಿಷ್ಠ ಎಚ್ ಡಿ ...

news

ಸಿಎಂ ಕುಮಾರಸ್ವಾಮಿ ದೊಡ್ಡ ಡ್ರಾಮಾ ಕಲಾವಿದ ಎಂದು ಬಿಜೆಪಿ ವ್ಯಂಗ್ಯ

ಬೆಂಗಳೂರು: ಸಾರ್ವಜನಿಕವಾಗಿ ನಾನು ಸಂತೋಷವಾಗಿಲ್ಲ ಎಂದು ಕಣ್ಣೀರು ಹಾಕಿದ ಸಿಎಂ ಕುಮಾರಸ್ವಾಮಿ ಬಗ್ಗೆ ರಾಜ್ಯ ...

news

ಕಣ್ಣೀರು ಹಾಕಿದ ಸಿಎಂ ಕುಮಾರಸ್ವಾಮಿಗೆ ‘ಗೆಳೆಯ’ ಡಿಸಿಎಂ ಪರಮೇಶ್ವರ್ ಸಾಂತ್ವನಿಸಿದ್ದು ಹೀಗೆ!

ಬೆಂಗಳೂರು: ತಾವು ಮುಖ್ಯಮಂತ್ರಿಯಾಗಿದ್ದರೂ ಸಂತೋಷವಾಗಿಲ್ಲ ಎನ್ನುತ್ತಾ ಸಾರ್ವಜನಿಕವಾಗಿ ಕಣ್ಣೀರು ಹಾಕಿದ ...

Widgets Magazine
Widgets Magazine