ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದ ಕಿರಣ್ ಬೇಡಿ

ಚೆನ್ನೈ, ಮಂಗಳವಾರ, 3 ಏಪ್ರಿಲ್ 2018 (08:00 IST)

ಚೆನ್ನೈ : ಈಗಾಗಲೇ ಕಾವೇರಿ ನಿರ್ವಹಣಾ ಮಂಡಳಿಯ ರಚನೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಇದೀಗ ಪಾಂಡಿಚೇರಿ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಬೇಗನೆ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಾಯಿಸಿ ಪ್ರಧಾನಿ ಅವರಿಗೆ ಪತ್ರ ಬರೆದಿದ್ದಾರೆ.


ಪಾಂಡಿಚೇರಿಯ ಕಾರೈಕಲ ಪ್ರದೇಶದ ಜನರು ಸಂಪೂರ್ಣವಾಗಿ ಕಾವೇರಿ ನೀರನ್ನೇ ಅವಲಂಬಿಸಿದ್ದಾರೆ. ಸರಿಯಾದ ಸಮಯಕ್ಕೆ ನೀರು ಬಿಡದಿದ್ದರೆ ಇಲ್ಲಿನ ರೈತರು ಬೆಳೆ ಬೆಳೆಯಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪಿನಲ್ಲಿ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿದೆ. ಪಾಂಡಿಚೇರಿಗೆ 7 ಟಿಎಂಸಿ ನೀರು ಬಿಡುಗಡೆಗೆ ಸೂಚಿಸಿದ್ದು, ಹೀಗಾಗಿ ತಾವು ಸಂಬಂಧಪಟ್ಟ ಸಚಿವರಿಗೆ ಶೀಘ್ರವೇ ಕಾವೇರಿ ನಿರ್ವಹಣಾ ಮಂಡಳಿ ಹಾಗೂ ಕಾವೇರಿ ನೀರು ಸಮಿತಿಯನ್ನು ರಚಿಸಲು ಸೂಚಿಸಿ ಎಂದು ಕಿರಣ್ ಬೇಡಿ ಅವರು ಪ್ರಧಾನಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಖ್ಯಾತ ಹೋರಾಟಗಾರ ನೆಲ್ಸನ್ ಮಂಡೇಲರ ಪತ್ನಿ ವಿನ್ನಿ ಮದಿಕಿಜೆಲಾ ಮಂಡೇಲಾ ಇನ್ನಿಲ್ಲ!

ಆಫ್ರಿಕಾ : ವರ್ಣಬೇಧ ನೀತಿಯ ವಿರುದ್ದ ಹೋರಾಡಿದ ಪ್ರಖ್ಯಾತ ಹೋರಾಟಗಾರ ನೆಲ್ಸನ್ ಮಂಡೇಲ ಅವರ ಪತ್ನಿ ವಿನ್ನಿ ...

news

ಕುರ್ಚಿಯಿಂದ ಕುಸಿದು ಬಿದ್ದು ತಲೆಗೆ ಗಾಯಮಾಡಿಕೊಂಡ ಸಿಎಂ ಸಿದ್ದರಾಮಯ್ಯ!

ಮೈಸೂರು : ಸಿಎಂ ಸಿದ್ದರಾಮಯ್ಯ ಅವರು ಕುರ್ಚಿಯಿಂದ ಬಿದ್ದು ತಲೆಗೆ ಗಾಯಮಾಡಿಕೊಂಡ ಘಟನೆ ಸೋಮವಾರದಂದು ಮೈಸೂರು ...

news

ವರುಣ ಕ್ಷೇತ್ರದಲ್ಲಿ ಟಿಕೆಟ್ ನೀಡಿದಲ್ಲಿ ಸ್ಪರ್ಧಿಸಲು ಸಿದ್ದ: ವಿಜಯೇಂದ್ರ

ಮೈಸೂರು: ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ವಿಚಾರ ಮಾತನಾಡಿದ ಮಾಜಿ ...

news

ಸಿನಿಮೀಯ ರೀತಿಯಲ್ಲಿ ಕಳ್ಳರನ್ನು ಹಿಡಿದ ಪೊಲೀಸರು

ಬಳ್ಳಾರಿ : ಆಂಧ್ರಪ್ರದೇಶದ ಉದ್ಯಮಿಯೊಬ್ಬರಿಗೆ ಬಂಗಾರ ಎಂದು ಹಿತ್ತಾಳೆಯ ಚೂರುಗಳನ್ನು ಕೊಟ್ಟು 35 ಲಕ್ಷ ರೂ. ...

Widgets Magazine