13 ಗಂಟೆಗಳ ಕಾಲ ಪ್ರವಾಹದೊಂದಿಗೆ ಹೋರಾಡಿ ಬದುಕಿದ 62ರ ಮಹಿಳೆ

ಬುರ್ದವಾನ್, ಸೋಮವಾರ, 31 ಜುಲೈ 2017 (16:36 IST)

ದಾಮೋದರ್ ನದಿಯ ಹೆಚ್ಚುತ್ತಿರುವುದನ್ನು ನೋಡುವ ಆಸಕ್ತಿಯಿಂದ ತೆರಳಿದ್ದ ಪೂರ್ವ ಬುರ್ದವಾನ್ ಜಿಲ್ಲೆಯ ಕಾಲಿಬಜಾರ್ ನಿವಾಸಿಯಾದ 62 ವರ್ಷ ವಯಸ್ಸಿನ ಅಂಗನವಾಡಿ ಮಹಿಳಾ ಉದ್ಯೋಗಿ ತಪಾತಿ ಚೌಧರಿ, ಕಾಲು ಜಾರಿ ನದಿಗೆ ಬಿದ್ದು ಸುಮಾರು 13 ಗಂಟೆಗಳ ಕಾಲ ನೀರಿನಲ್ಲಿ ತೇಲಾಡಿ 80 ಕಿ.ಮೀ ದೂರ ಪ್ರಯಾಣಿಸಿದ ನಂತರ ಜೀವ ಉಳಿಸಿಕೊಂಡ ವಿಚಿತ್ರ ಘಟನೆ ವರದಿಯಾಗಿದೆ. 
 
ನದಿಯ ಪ್ರವಾಹ ನೋಡಲು ಬಂದ ತಪಾಟಿ ಚೌಧರಿ, ಕಾಲು ಜಾರಿ ನದಿಗೆ ಬಿದ್ದ ಕೂಡಲೇ ಕ್ಷಣಾರ್ಧದಲ್ಲಿಯೇ ಕೊಚ್ಚಿಹೋಗಲು ಆರಂಭಿಸಿದಳು. ನೆರವಿಗಾಗಿ ಕೂಗಿದಳು. ಆದರೆ, ಹತ್ತಿರದಲ್ಲಿ ಯಾರು ಇರಲಿಲ್ಲವಾದ್ದರಿಂದ ಆಕೆಯ ಕೂಗು ಯಾರಿಗೂ ಕೇಳದಾಯಿತು. ಧೈರ್ಯ ತಂದುಕೊಂಡು ಪೂರ್ತಿ ರಾತ್ರಿ ಕೈ ಕಾಲು ಬಡಿಯುತ್ತಾ ಕಳೆದಿದ್ದಾಳೆ. ಆದರೆ, ಆಕೆಯ ಹೋರಾಟ ಕೊನೆಗೂ ವ್ಯರ್ಥವಾಗಲಿಲ್ಲ. 
 
ಮಾರನೇ ದಿನ ಬೆಳಿಗ್ಗೆ ಮಹಿಳೆಯೊಬ್ಬಳು ನೀರಿನಲ್ಲಿ ತೇಲುತ್ತಿರುವುದು ಕಂಡ ಮೀನುಗಾರರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಆಕೆಯನ್ನು ಬಿಡುಗಡೆಗೊಳಿಸಲಾಗಿದೆ.
 
ಚೌಧರಿ ಹೇಳಿದರು, "ಈ ಸ್ಥಳವು ಹೂಗ್ಲಿ ಜಿಲ್ಲೆಯ ಪರ್ಸುರಾದಲ್ಲಿ ಮುಂಡೇಶ್ವರಿ ನದಿಯ ಮಾರ್ಕುಂಡ ಫೆರ್ರಿ ಘಾಟ್ ಎಂದು ನಾನು ತಿಳಿದುಕೊಂಡಿದ್ದೇನೆ, ಅವರು ನದಿಯೊಳಗೆ ಬಿದ್ದ ಸ್ಥಳದಿಂದ 80 ಕಿ.ಮೀ.
 
ಚಿಕಿತ್ಸೆಯ ನಂತರ ಚೇತರಿಸಿಕೊಂಡ ಮಹಿಳೆ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ನದಿಗೆ ಬಿದ್ದ ಸ್ಥಳದಿಂದ 80 ಕಿ.ಮೀ ದೂರದಲ್ಲಿರುವ ಹೂಗ್ಲಿ ಜಿಲ್ಲೆಯ ಮುಂಡೇಶ್ವರಿ ನದಿಯ ಮಾರ್ಕುಂಡಾ ಘಾಟ್‌ ಬಳಿ ತಲುಪಿದ್ದೆ ಎಂದು ತಿಳಿಸಿದ್ದಾರೆ. 
 
ಆಘಾತದಿಂದ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗದ ಚೌಧರಿ, ಸಾವಿನ ದವಡೆಯಿಂದ ಹೇಗೆ ತಪ್ಪಿಸಿಕೊಂಡಿದ್ದೇನೆ ಎನ್ನುವುದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಹಾರ್‌ನಲ್ಲಿ ಜೆಡಿಯು-ಬಿಜೆಪಿ ಮೈತ್ರಿ ದುರದೃಷ್ಟಕರ: ಶರದ್ ಯಾದವ್ ಕಿಡಿ

ನವೆದಹಲಿ: ಬಿಜೆಪಿಯೊಂದಿಗೆ ಮೈತ್ರಿಯಾಗಿ ಬಿಹಾರ್‌ ರಾಜ್ಯದಲ್ಲಿ ಸರಕಾರ ರಚಿಸಿರುವ ಬಗ್ಗೆ ...

news

ಕನ್ನಡ ಭಾಷೆಯ ಮೇಲಿನ ಯಾವುದೇ ದಾಳಿ ಸಹಿಸೋಲ್ಲ: ಸಿಎಂ ಗುಡುಗು

ಬೆಂಗಳೂರು: ಕನ್ನಡ ಭಾಷೆಯ ಪರವಾಗಿ ತಮ್ಮ ನಿಲುವು ಸ್ಪಷ್ಟಪಡಿಸಿದ ಸಿಎಂ ಸಿದ್ದರಾಮಯ್ಯ, ಕನ್ನಡ ಭಾಷೆಯ ಮೇಲೆ ...

news

ಗೋ ರಕ್ಷಕರ ಹೆಸರಲ್ಲಿ ಗೂಂಡಾಗಿರಿ: ಕೇಂದ್ರದ ಪರೋಕ್ಷ ಬೆಂಬಲ: ಖರ್ಗೆ ವಾಗ್ದಾಳಿ

ಗೋ ರಕ್ಷಕರ ಹೆಸರಲ್ಲಿ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ ದೇಶದಲ್ಲಿ ...

news

ತಾಳಿ ಕಿತ್ತು ವರನ ಕೈಗಿಟ್ಟು ಬಾಯ್`ಫ್ರೆಂಡ್ ಜೊತೆ ವಧು ಎಸ್ಕೇಪ್..!

ಮದುವೆಯಾದ ಕೆಲವೇ ನಿಮಿಷಗಳಲ್ಲಿ ವಧು ತಾಳಿ ಕಿತ್ತು ವರನ ಕೈಯಲ್ಲಿಟ್ಟು ಲವರ್ ಜೊತೆ ಹೋಗಿರುವ ಘಟನೆ ಕೇರಳದ ...

Widgets Magazine