ಅರುಣಾಚಲ ಪ್ರದೇಶದಲ್ಲಿ ಭೂಕುಸಿತ: 14 ಮಂದಿ ಸಾವು

ಲಟಾಪ್, ಮಂಗಳವಾರ, 11 ಜುಲೈ 2017 (19:07 IST)

ಅರುಣಾಚಲ ಪ್ರದೇಶದಲ್ಲಿ ಗುಡ್ಡ ಕುಸಿದಿದ್ದಿರಿಂದ 14 ಕ್ಕೂ ಹೆಚ್ಚು ಸಾವನ್ನಪ್ಪಿದ ದಾರುಣ ಘಟನೆ ವರದಿಯಾಗಿದೆ. ಅವಶೇಷಗಳಡಿ ಮತ್ತಷ್ಟು ಜನರು ಸಿಲುಕಿರುವ ಶಂಕೆಯಿದೆ ಎಂದು ಮೂಲಗಳು ತಿಳಿಸಿವೆ.
 
ಗುಡ್ಡವೊಂದು ಶಾಲಾ ಕಟ್ಟಡದ ಮೇಲೆ ಕುಸಿದಿದೆ. ಅದೃಷ್ಟವಶಾತ್ ಶಾಲೆಗೆ ಇಂದು ರಜೆಯಿದ್ದರಿಂದ ಶಾಲಾ ಮಕ್ಕಳು ಬಹುದೊಡ್ಡ ದುರಂತದಿಂದ ಪಾರಾಗಿದ್ದಾರೆ. ಇಲ್ಲವಾದಲ್ಲಿ ಸಾವು ನೋವು ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಅವಶೇಷಗಳಡಿ ಸಿಲುಕಿದವರನ್ನು ಹೊರತೆಗೆಯಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪರಿಹಾರ ಕಾರ್ಯಗಳು ಆರಂಭವಾಗಿವೆ ಎಂದು ಜಿಲ್ಲಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 
ಅರುಣಾಚಲ ಪ್ರದೇಶದಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಬೆಟ್ಟ ಗುಡ್ಡಗಳು ಕುಸಿಯುವುದು ಸರ್ವೇಸಾಮಾನ್ಯವಾಗಿದೆ. ಸರಕಾರ ಆದಷ್ಟು ಹಾನಿಯಾಗದಂತೆ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಅರುಣಾಚಲ ಪ್ರದೇಶ ಭೂಕುಸಿತ Arunachal Pradesh Land Slide

ಸುದ್ದಿಗಳು

news

ಬಾಡಿ ಮಸಾಜ್ ಪಾರ್ಲರ್‌ಗಳ ಮೇಲೆ ಮೇಯರ್ ದಾಳಿ

ಮಂಗಳೂರು: ಬಾಡಿ ಮಸಾಜ್ ಪಾರ್ಲರ್‌ಗಳ ಮೇಲೆ ಮೇಯರ್ ದಾಳಿ ನಡೆಸಿ ಬಿಸಿ ಮುಟ್ಟಿಸಿದ ಘಟನೆ ವರದಿಯಾಗಿದೆ.

news

ಯುಪಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಗೋಪಾಲ್‌ಕೃಷ್ಣ ಗಾಂಧಿ ಕಣಕ್ಕೆ

ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಗೆ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರನ್ನು ...

news

ಹಿಂದು ನಾಯಕರನ್ನು ಬಂಧಿಸಿದ್ರೆ ಸುಮ್ಮನಿರಲ್ಲ : ವಿಎಚ್‌ಪಿ ವಾರ್ನಿಂಗ್

ಮಂಗಳೂರು: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಅಂತ್ಯಸಂಸ್ಕಾರ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ...

news

ಪುತ್ರ ಉಗ್ರನಾಗಿದ್ರೆ ಕಠಿಣವಾಗಿ ಶಿಕ್ಷಿಸಿ: ಉಗ್ರ ಸಂದೀಪ್ ಶರ್ಮಾ ತಾಯಿ

ಲಕ್ನೋ": ನನ್ನ ಮಗ ಸಂದೀಪ್ ಕುಮಾರ್ ಶರ್ಮಾ ಲಷ್ಕರ್-ಎ-ತೊಯಿಬಾ ಸಂಘಟನೆ ಉಗ್ರನಾಗಿದ್ದರೆ ಆತನನ್ನು ಶಿಕ್ಷಿಸಿ ...

Widgets Magazine